ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೭೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬೮ ಶ್ರೀಮದ್ರಾಮಾಯಣವು [ಸರ್ಗ, ೫ ಇದೋ ' ಮಹಾಪ್ರಾಜ್ಞನೂ, ಪರಾಕ್ರಮಶಾಲಿಯೂ ಆದ ಶ್ರೀರಾಮ ನೂ, ಆತನ ತಮ್ಮನೂ ಬಂದಿರುವರು ಅಯ್ಯಾ ! ಕಪಿರಾಜನೆ' ಈ ರಾಮನು ಸಾಮಾನ್ಯನಲ್ಲ ಸತ್ಯಪರಾಕ್ರಮನು ಇಕ್ಷಾಕುವಂಶದಲ್ಲಿ ಹುಟ್ಟಿದವನು ದಶ ರಥಮಹಾಗಾಜನ ಪತ್ರನು ಪರಮಧಾರಿ ಕನೆಂಬ ಪ್ರಸಿದ್ಧಿಯನ್ನು ಹೊಂ ದಿರುವನು ಪಿತೃವಾಕ್ಯ ಪರಿಪಾಲನವೆಂಬ ವ್ರತವನ್ನು ನಡೆಸುತ್ತಿರುವನು ಮಹಾತ್ಮನಾದ ಈತನು ಈ ವ್ರತವನ್ನು ಹಿಡಿದು ಅರಣ್ಯದಲ್ಲಿರುವಾಗ, ಅ ವನ ಹೆಂಡತಿಯನ್ನು ರಾವಣನಂಬ ರಾಕ್ಷಸನೊಬ್ಬನು ಕದ್ದುಮ್ಮಿರುವನು ಅದಕ್ಕಾಗಿ ಈತನು ನಿನ್ನಲ್ಲಿ ಮರೆಹೊಕ್ಕಿರುವನು ರಾಜಸೂಯಗಳಿಂದಲೂ, ಅಶ್ವಮೇಧಗಳಿಂದಲೂ, ಆಗ್ರಾದಿದೇವತಗಳಿಗೆ ವಿಶೇಷತೃಪ್ತಿಯನ್ನುಂ ಟುಮಾಡಿ,ಲಕ್ಷೇಪಲಕ್ಷಗೋವುಗಳನ್ನು ದಕ್ಷಿಣೆಯಾಗಿ ಕೊಟ್ಟು, ತಪೋನಿರ ತನಾಗಿ,ಸತ್ಯಸಂಧನಾಗಿ, ಈ ಭೂಮಂಡಲವನ್ನು ಪರಿಪಾಲಿಸಿದ ಆ ದಶರಥ ಮಹಾರಾಜನಿಗೆ ಪ್ರಿಯವ್ರತ್ರನಾದ ಈತನು, ಒಬ್ಬಸಿಯ ನಿಮಿತ್ತವಾಗಿ ನಿ ಇಲ್ಲಿ ಮರೆಹುಗುತ್ತಿರುವನು ಈ ಅಣ್ಣತಮ್ಮಂದಿರಿಬ್ಬರೂ ನಿಮ್ಮೊಡನೆ ಸ್ನೇ ಹವನ್ನು ಕೋರುವರು ಇವರಿಬ್ಬರೂ ಬಹಳ ಪೂಜನೀಯರು ಇವರಿಬ್ಬ ರನ್ನೂ ಸೀನು ಯಥೋಚಿತವಾಗಿ ಪ್ರತಿಗ್ರಹಸಿ ಪೂಜಿಸಬೇಕು” ಎಂದನು ಈ ಹನುಮಂತನ ವಾಕ್ಯವನ್ನು ಕೇಳಿ ಸುಗ್ರೀವನು, ಮನಸ್ಸಿನ ವ್ಯಾಕುಲ ವನ್ನು ಬಿಟ್ಟು, ಸಂತೋಷದಿಂದ ಹಿಗ್ಗುತ್ತ, ಮೊದಲು ಈ ರಾಜಕುಮಾರರವಿ ಷಯವಾಗಿ ತನಗಿದ್ದ ಅಪರಿಮಿತವಾದ ಭೀತಿಯನ್ನು ಬಿಟ್ಟು ನಿಶ್ಚಿಂತನಾದ ನು ಆಮೇಲೆ ವಾನರಶ್ರೇಷ್ಠ ನಾದ ಆ ಸುಗ್ರೀವನು ತನಗೆ ಸ್ವಾಭಾವಿಕ ವಾಗಿದ್ದ ಕಾಡುಕಪಿಯ ರೂಪವನ್ನು ಮರೆಸಿಕೊಂಡು ಪ್ರಿಯದರ್ಶನವುಳ್ಳ, *ಮನುಷ್ಯರೂಪವನ್ನು ಹೊಂದಿ, ಪ್ರೀತಿಪೂರೈಕವಾದ ನುಡಿಗಳಿಂದ ಅವ

  • ಇಲ್ಲಿ ಹನುಮಂತನು ಹೇಳಿದುದನ್ನು ಕೇಳಿದಮೇಲೆ ಸುಗ್ರೀವನು ಮನುಷ್ಯ ರೂಪವನ್ನು ಧರಿಸಿದುದಾಗಿ ಹೇಳಿರುವುದರಿಂದ, ಹನುಮಂತನು ರಾಮಲಕ್ಷ್ಮಣರನ್ನು ಬೇರೊಂದು ಸ್ಥಳದಲ್ಲಿರಿಸಿದ್ದು ,ಇವರ ಆಗಮನವನ್ನು ಸುಗ್ರೀವನಿಗೆ ಮೊದಲು ತಿಳಿಸಿದ ನೆಂದೂಹ್ಯವು,