ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೭೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೩೪ ಶ್ರೀಮದ್ರಾಮಾಯಣವು [ಸರ್ಗ, ೬, ಹಾವ್ಯಸನವನ್ನುಂಟುಮಾಡಿದ ಆ ಕೂಗರಾಕ್ಷಸನು ಎಲ್ಲಿ ವಾಸಮಾಡುತ್ತಿ ರಬಹುದು?ಅವನೊಬ್ಬನಿಗಾಗಿ ಈಗ ನಾನು ಸಮಸ್ತರಾಕ್ಷಸರನ್ನೂ ನಿಮ್ಮ ಲಮಾಡಬೇಕಾಗಿ ಬಂದಿರುವುದು ಮುಖ್ಯವಾಗಿ ಸೀತೆಯನ್ನ ಪಹರಿಸಿ ನನಗೆ ಇಷ್ಟು ಕೋಪವನ್ನು ಂಟುಮಾಡಿದ ಆ ನೀಚರಾಕ್ಷಸನು,ತನ್ನ ಪ್ರಾಣನಾಶಕ್ಕಾ ಗಿ ಮೃತ್ಯುದ್ವಾರವನ್ನು ತೆರೆದುಕೊಂಡು ಸಿದ್ಧವಾಗಿ ನಿಂತಿರುವನಲ್ಲದೆ ಬೇರೆ ಯಲ್ಲ' ಎಲೈ ವಾನರರಾಜನೆ' ಯಾವರಾಕ್ಷಸನು ನನ್ನ ಪ್ರಿಯಪತ್ನಿ ಯನ್ನು ಈ ಕಾಡಿನಿಂದ ಬಲಾತ್ಕರಿಸಿ ಕದ್ದುಮ್ಮಿರುವನೋ,ಆ ನನ್ನ ಶತ್ರುವು ಎಲ್ಲಿರು ವನೆಂಬುದನ್ನು ಈಗಲೇ ನನಗೆ ತಿಳಿಸು' ಈಕ್ಷಣವೇ ಅವನನ್ನು ಯಮಪುರಿಗೆ ಕಳುಹಿಸಿಬರುವೆನು” ಎಂದನು. ಇಲ್ಲಿಗೆ ಆರನೆಯ ಸರ್ಗವು ರಾಮನು ಸುಗ್ರೀವನಿಗೆ ವಾಲಿಯನ್ನು ವಧಿಸುವು ). ದಾಗಿ ಪ್ರತಿಜ್ಞೆ ಮಾಡಿಕೊಟ್ಟು, ಆತನನ್ನು ಸಂತೋಷಪಡಿಸಿದುದು ಹೀಗೆ ದುಃಖಾರನಾದ ರಾಮನ ವಾಕ್ಯವನ್ನು ಕೇಳಿದೊಡನೆ ಸುಗ್ರಿ ವನು, ಕಣ್ಣುಗಳಲ್ಲಿ ನೀರುತುಂಬಿಕೊಂಡು, ಆ ದುಃಖದಿಂದಲೇ ಗದ್ದ ದಸ್ತ್ರ ರವುಳ್ಳವನಾಗಿ ರಾಮನಿಗೆ ಕೈಮುಗಿದು, “ಎಲೈ ಅರಿಂದಮನೆ' ನಿಜವಾಗಿ ಆ ಪಾಪಿರಾಕ್ಷಸನೆಲ್ಲಿರುವನೆಂಬುದನ್ನು ನಾನು ಕಾಣೆನು ಅವನ ಸಾಮ

  • ಮೇಲೆ ಹೇಳಿದ ಸುಗ್ರೀವನ ಮಾತಿನ ವಿಷಯದಲ್ಲಿ ಸ್ವಲ್ಪ ವಿವಾದವುಂಟು ಏ ನೆಂದರೆ ಸುಗ್ರೀವನು ಮುಂದೆ ಸೀತಾನ್ವೇಷಣಾರವಾಗಿ ಕಪಿಗಳನ್ನು ಕಳುಹಿಸು ವಾಗ 'ದೀಪಸ್ತಸ್ಯಾ ಪರೇಸಾರೇ ಶತಯೋಜನೆಮಾಯತ | ಅಗಮೋ ಮಾನುಷ್ಠೆ ರ್ದವೈಸ್ತಂ ಮಾರ್ಗಧ್ವಂ ಸಮಂತತ: 11 ಸಹಿ ದೇಶಸ್ತು ವಧ್ಯಸ್ಯ ರಾವಣಸ್ಯ ದುರಾ ತನ: 1 ರಾಕ್ಷಸಾಧಿಪತೇರ್ವಾಸ ಸಹಸ್ರಾಕ್ಷಸಮದ್ಯುತೇ?” ಎಂಬುದಾಗಿ ರಾವಣನ ಬಲಪರಾಕ್ರಮಗಳನ್ನೂ, ಅವನ ವಾಸಸ್ಥಾನದ ಗುರುತನ್ನೂ ಸ್ಪಷ್ಟವಾಗಿ ಹೇಳಿರುವ ನು. ಇದರಿಂದ ಸುಗ್ರೀವನಿಗೆ ಅವೆಲ್ಲವೂ ಚೆನ್ನಾಗಿ ತಿಳಿದಿತ್ತೆಂದೇ ಸ್ಪಷ್ಟವಾಗುವುದು ಹಾಗಿದ್ದರೂ ಇಲ್ಲಿ ತನಗೆ ಸೀತೆಯನ್ನ ಪಹರಿಸಿದ ರಾಕ್ಷಸನ ಸ್ಥಿತಿಗತಿಗಳೊಂದೂ ತಿಳಿದಿಲ್ಲ ವೆಂದು ಹೇಳಿದುದರಿಂದ ಸುಳ್ಳಾಡಿದಂತಾಗಲಿಲ್ಲವೆ?” ಎಂಬ ಆಕ್ಷೇಪವು ಬರುವುದು ಸು