ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೮೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ಸರ್ಗ ೭). ಕಿಕ್ಕಿಂಧಾಕಾಂಡವು ರಾಮಾ' ನಿನಗೆ ಅವುಗಳಿಂದೇನು? ನಿನ್ನ ದುಃಖವನ್ನು ಬಿಡು' ನಿನಗೆ ಪುನಃ ಸೇ ತೆಯು ಸಿಕ್ಕುವಂತೆ ಮಾಡುವ ಪ್ರಯತ್ನವು ನನ್ನ ದಾಗಿರಲಿ 'ಬೇಕಾದರೆ ಈ ರಾವಣನು ಎಲ್ಲಿದ್ದರೂ ಅದನ್ನು ಸಹಿಸಲಾರದೆ ತಾನಾಗಿಯೇ ಬಂದುಬಿಡುವನೆಂಬುದೇ ರಾಮನ ಅಭಿಪ್ರಾಯವು ಇದನ್ನು ತಿಳಿದಿದ್ದರೂ ಸುಗ್ರೀವನು ಯಾವುದೊಂದುಸೂಚ ನೆಯನ್ನೂ ಕೊಡದಿದ್ದುದರಿಂದ ತಾನು ರಾವಣವೃತ್ತಾಂತವನ್ನು ತಿಳಿದೂ, ಏನೂ ತಿಳಿ ಯದವನಂತೆ ರಾಮನಲ್ಲಿ ನಟಿಸಿದನೆಂದೇ ಊಹ್ಯವು 'ಹಾಗೆ ಸುಗ್ರೀವನಿಗೆ ನಿಜಸ್ಥಿತಿಯು ತಿಳಿದಿದ್ದ ಪಕ್ಷದಲ್ಲಿ, ಮುಂದೆ ಸೀತಾನ್ವೇಷಣಾರವಾಗಿ ಕಪಿಗಳನ್ನು ಕಳುಹಿಸುವಾಗ,ಆ ದಿಕ್ಕಿಗೆಮಾತ್ರವೇ ಕೆಲವರನ್ನು ಕಳುಹಿಸಿದರೆ ಸಾಕಾಗಿಲ್ಲವೆ? ನಾಲ್ಕು ದಿಕ್ಕುಗಳಿಗೂ ಬೇರೆಬೇರೆಯಾಗಿ ಕಳುಹಿಸಿದುದೇಕ??” ಎಂದರೆ, ರಾವಣನು ಸೀತೆಯನ್ನೆತ್ತಿಕೊಂಡು ಹೋಗಿ ಬಹುದಿನಗಳಾದುದರಿಂದ, ಅವನು ಸೀತೆಯನ್ನು ಬೇರೆಲ್ಲಿಗಾದರೂ ಸಾಗಿಸಿದ ರೂ ಇರಬಹುದೆಂದಾಲೋಚಿಸಿ, ಏಕಕಾಲದಲ್ಲಿ ನಾಲ್ಕು ದಿಕ್ಕುಗಳಿಗೂ ಕಪಿಗಳನ್ನು ಕಳುಹಿಸಿದನೆಂಬುದರಿಂದ ವಿರೋಧವೇನೂ ಇಲ್ಲವ ಕೆಲವರು “ಸಧಾ ನಜಾನೇ” ಎಂಬುದಕ್ಕೆ, ಆರಾವಣನ ವೃತ್ತಾಂತವು ಸಾಕಲ್ಯವಾಗಿ ತನಗೆ ತಿಳಿಯದು' ಎಂಬುದಾಗಿ ಅಗ್ಗಾಂತರವನ್ನು ಹೇಳುವರು ಇದರಿಂದ ಸುಗ್ರೀವನು ರಾವಣವೃತ್ತಾಂತವನ್ನು ಸ್ವ ಲ್ಪ ಮಾತ್ರವೇ ತಿಳಿದಿರುವಂತೆ ಅಭಿಪ್ರಾಯವುಂಟಾಗುವುದರಿಂದ, ಮುಂದೆ ಸುಗ್ರೀವನು ಕಪಿಗಳೊಡನೆ ಹೇಳತಹ್ಮ ಮಾತಿಗೆ ವಿರೋಧವಿಲ್ಲವೆನ್ನುವರು ಆಗಲೂ ಸುಗ್ರೀವನು ತನಗೆ ತಿಳಿದಷ್ಟು ಮಟ್ಟಿಗಾದರೂ ರಾಮನಿಗೆ ತಿಳಿಸಬೇಕಾಗಿತ್ತು, ಅದನೂ ಹೇಳದುದ ರಿಂದ, ಹೇಗೆ ಗ್ರಹಿಸುವುದೂ ಯುಕ್ತವಲ್ಲ ಮತ್ತೆ ಕೆಲವರು, ರಾವಣನು ಆ ಒಂದುವ ರ್ಷದವರೆಗೂ ಪೂರಿಯಾಗಿ ಬದುಕಿರದಿದ್ದರೆ ಅವನಿಗೆ ಶಿವಪೂಜಾಫಲವಿಲ್ಲದೆ ಕೂಗು ವುದೆಂದೂ ಅದನ್ನು ಸಾಧಿಸುವುದಕ್ಕಾಗಿಯೇ ಸುಗ್ರೀವನಿಗೆ ಅಜ್ಞಾನವು ಕವಿದುಹೋ ಗಿತ್ತ೦ದೂ ಹೇಳುವರು ಪ್ರತ್ಯಕ್ಷವಾಗಿ ದೃಷ್ಯಕಾರಣವಿರುವಾಗ ಅದೃಷ್ಟಕಾರಣವ ನ್ನು ಹೇಳುವುದು ನ್ಯಾಯವಲ್ಲ ಆದುದರಿಂದ ಸುಗ್ರೀವನು ರಾವಣವೃತ್ತಾಂತವ ನ್ನು ತಿಳಿದಿದ್ದರೂ, ಬಹುದೂರದೃಷ್ಟಿಯಿಟ್ಟು, ಮೊದಲೇ ರಾಮನಿಗೆ ರಾವಣನ ಸ್ಥಲ ಬಲಾದಿಗಳನ್ನು ತಿಳಿಸಿಬಿಟ್ಟರೆ, ತಮ್ಮಿಬ್ಬರಕಾರವೂ ಕೆಡುವುದೆಂದೂ, ಅಥವಾ ವಾಲಿಯ ಮೂಲಕವಾಗಿಯೇ ರಾಮನಿಗೆ ಒಂದುವೇಳೆ ಸೀತಾಪ್ರಾಪ್ತಿಯಾದರೂ ಆಗ ಅವತಾರಕ್ಕೆ ಮುಖ್ಯಪ್ರಯೋಜನವಾದ ರಾವಣಾದಿರಾಕ್ಷಸರ್ವವಿಲ್ಲದೆ ಹೋಗುವುದೆಂದೂ ಆಲೋಚಿ ಸಿ,ರಾಮನಿಗೆ ತಿಳಿಸದೆ ಮರೆಸಿದನೆಂಬುದು ಸಿದ್ಧವಾಗುವುದು (ಗೋವಿಂದರಾಜೀಯವು) 87