ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೮೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೭] ಕಿಷಿಂಧಾಕಾಂಡವು ೧೩೭೯ ಹವುಂಟಾಗುವುದು ಆದುದರಿಂದ ಎಲೈ ರಾಜೇಂದ್ರನೆ' ಶೋಕವನ್ನು ಬಿಡು | ಧೈರವನ್ನಾಶ್ರಯಿಸು'ನಾನು ನಿನ್ನಲ್ಲಿರುವ ಸ್ನೇಹದ ಸಲಿಗೆಯಿಂದ ಹಿತವ ನ್ನು ಹೇಳುವೆನೇ ಹೊರತು ನಿನಗೆ ಉಪದೇಶಿಸುವೆನೆಂದು ತಿಳಿಯಬೇಡ' ನನ್ನ ಸ್ನೇಹಭಾವದಲ್ಲಿ ಗೌರವವನ್ನಿ ಐಾದರೂ ನಿನ್ನ ದುಃಖವನ್ನು ಬಿಟ್ಟುಬಿಡು!” ಎಂದನು ಹೀಗೆ ಸುಗ್ರೀವನು ಮೃದುವಾಕ್ಯಗಳಿಂದ ಸಮಾಧಾನಪಡಿಸ ಲು, ಗಾಮನು ತನ್ನ ವಸ್ತ್ರದ ಸೆರಗಿನಿಂದ ಕಣ್ಣೀರನ್ನೊ ರಸಿಕೊಂಡು, ಮನ ಸ್ಪಿನಲ್ಲಿ ಸ್ವಲ್ಪ ಸಮಾಧಾನವನ್ನು ಹೊಂದಿ, ಆ ಸುಗ್ರಿವನ ಮಾತಿಗೆ ಅನುಮೋ ದಿಸಿ,ಪ್ರೀತಿಯಿಂದ ತೋಳುಗಳನ್ನು ನೀಡಿ ಅವನನ್ನಾಲಿಂಗಿಸಿ, ಒಂದಾನೊo ದುಮಾತನ್ನು ಹೇಳುವನು (ಎಲೆ ವಾನರೇಂದ್ರನ'ನಿಜವಾದ ಪ್ರೀತಿಯುಳ್ಳ ಮಿತ್ರನು ಹೇಗೆ ವರ್ತಿಸಬೇಕೋ, ಅದಕ್ಕೆ ತಕ್ಕಂತೆಯೇ ಈಗ ನೀನೂ ನನ್ನಲ್ಲಿ ನಡೆಸಿರುವೆ ಈ ನಿನ್ನ ಹಿತವಾದಗಳಿಂದ ನನ್ನ ಮನಸ್ಸಿಗೆ ಎಷ್ಟೆ” ಸ ಮಾಧಾನವುಂಟಾಯಿತು ಇಂತಹ ಆಪದ್ಬಂಧುಗಳು ವಿಶೇಷವಾಗಿ ಈ ಕಾಲ ದಲ್ಲಿ ಸಿಕ್ಕುವುದೇ ದುರ್ಲಭವು ಮುಖ್ಯವಾಗಿ ಸೀತೆಯನ್ನು ಹುಡುಕಿ ತರುವ ವಿಷ ಯದಲ್ಲಿ ನೀನು ಆದಷ್ಟು ಪ್ರಯತ್ನ ವನ್ನು ಮಾಡಬೇಕು ದುರಾತ್ಮನಾದ ರಾವಣನೆಂಬ ಆ ಕೂರರಾಕ್ಷಸನೆಲ್ಲಿರುವನೆಂಬುದನ್ನು ತಿಳಿಯುವುದಕ್ಕೂ ತ ಕೈ ಪ್ರಯತ್ನವನ್ನು ಮಾಡಬೇಕು ಈಗ ನಾನು ಮಾಡಬೇಕಾದ ಕೆಲಸವೇ ನೆಂಬುದನ್ನು ನೀನು ನಿಸ್ಸಂಕೋಚವಾಗಿ ಹೇಳು' ವಾ ಕಾಲಗಳಲ್ಲಿ ಸುಕ್ಷೇ ತ್ರದಲ್ಲಿ ಬಿತ್ತಿದ ಬೀಜದಂತೆ,ನನ್ನ ಮೇಲೆ ಹೊರಿಸಿದ ಯಾವಕಾರವಾದರೂ ಫಲಿಸದಿರಲಾರದು ಈಗ ನಾನು ಯಾವಮಾತನ್ನು ಸ್ವಾಭಿಮಾನದಿಂದ ಹೇಳಿರುವೆನೋ, ಅವೆಲ್ಲವೂ ನಿಜವೆಂದೇದೃಢವಾಗಿ ನಂಬು' ನಾನು ಇದುವರೆಗೆ ಹಿಂದೆ ಯಾವಾಗಲೂ ಸುಳ್ಳು ಹೇಳಿದವನ ಮುಂದಯೂ ಸುಳ್ಳಾಡುವವ ನಲ್ಲ'ಬೇಕಾದರೆ ಈ ವಿಷಯದಲ್ಲಿ ನಿನಗೆ ಪ್ರತಿಜ್ಞೆ ಮಾಡಿಕೊಡುವೆನು ಸತ್ಯದ ಮೇಲೆ ಆಣೆಯಿಟ್ಟು ಹೇಳುವೆನು”ಎಂದನು ರಾಮನು ಹೇಳಿದ ಈ ಮಾತನ್ನು, ಅದರಲ್ಲಿಯೂ ಮುಖ್ಯವಾಗಿ ಅವನು ದೃಢಪ್ರತಿಜ್ಞೆ ಮಾಡಿ ಹೇಳಿದುದನ್ನು, ಕೇಳಿ ಸುಗ್ರೀವನಿಗೂ ಅವನ ಮಂತ್ರಗಳಿಗೂ ಪರಮಸಂತೋಷವುಂಟಾ ಯಿತು ಹೀಗೆ ಆ ರಾಮಸುಗ್ರೀವಬ್ಬರೂ ಸೇರಿ, ಒಬ್ಬರಿಗೊಬ್ಬರು ತಮ್ಮ