ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೮೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೮] ಕಿಂಧಾಕಾಂಡವು ೧೩೮೧ ನಾಗಿರಲಿ, ದರಿದ್ರನಾಗಿರಲಿ, ದುಃಖಿತನಾಗಲಿ, ಸುಖಿಯಾಗಿ,ದೋಷಿಯಾ ಗಲಿ, ನಿರ್ದೋಷಿಯಾಗಿ ಮಿತ್ರನೇ ಪರಮಗತಿಯು ಸನ್ನಿತ್ರರು ತಮಗೆ ಸ ಮರ್ಪಕವಾದಷ್ಟು, ಸ್ನೇಹವನ್ನು ಮತ್ತೊಬ್ಬರಲ್ಲಿ ನೋಡಿದಪಕ್ಷದಲ್ಲಿ, ಅಂ ತಹ ಆಪ್ತರಿಗಾಗಿ ತಮ್ಮ ಧನವನ್ನಾಗಲಿ ಕೊನೆಗೆ ದೇಹವನ್ನೇ ಆಗಲಿ ಒಪ್ಪಿ ಸಿಬಿಡುವರು” ಎಂದನು. ಇದನ್ನು ಕೇಳಿ ರಾಮನು, ಲಕ್ಷಣನೂ ಕೇಳುತ್ತಿ ರುವಹಾಗೆಯೇ ಸುಗ್ರೀವನನ್ನು ನೋಡಿ “ಮಿತ್ರನೆ ! ನೀನು ಹೇಳಿದುದೇ ನೋ ನಿಜವು” ಎಂದನು ಆಮೇಲೆ ಸುಗ್ರೀವನು ಹಿಂದೆ ಸೀತೆಯ ಆಭರಣ ಗಳನ್ನು ತಂದು ತೋರಿಸಿದಾಗಿನಿಂದ ನಿಂತುಮಾತಾಡುತಿದ್ದ ರಾಮನ ನ್ಯೂ, ಮಹಾಬಲಾಡ್ಯನಾದ ಲಕ್ಷಣವನ್ನೂ ನೋಡಿ, ಅವರಿಗೆ * ಮೃದು ವಾದ ಆಸನವೊಂದನ್ನು ಕೊಟ್ಟು ಕುಳ್ಳಿರಿಸಬೇಕೆಂದಾಲೋಚಿಸಿ, ಸುತ್ತ ಲೂ ದೃಷ್ಟಿಯಿಟ್ಟು, ಆ ಅರಣ್ಯವೆಲ್ಲವನ್ನೂ ನೋಡಿದನು ಸಮೀಪದಲ್ಲಿ ಚೆ ಸ್ನಾಗಿ ಪುಷ್ಟಿತವಾಗಿಯೂ, ಹಸಿಯ ಎಲೆಗಳುಳ್ಳದಾಗಿಯೂ, ಭ್ರಮರ ಗಳಿಂದ ಶೋಭಿತವಾಗಿಯೂ ಇದ್ದ ಒಂದುಸಾಲವೃಕವು ಕಾಣಿಸಿತು ಅದರ ಹೈ ಎಲೆಗಳಿಂದ ತುಂಬಿ ಚೆನ್ನಾಗಿ ಪ್ರಶ್ನಿಸಿದ್ದ ಒಂದುಕೊನೆಯನು ಮುರಿದುತಂದು, ಅದರಮೇಲೆ ಆ ರಾಮನೊಡನೆ ತಾನೂ ಕುಳಿತನು ಇವರಿಬ್ಬ ರೂ ಒಂದಾಗಿ ಕುಳಿತಮೇಲೆ, ಹನುಮಂತನು ಮತ್ತೊಂದು ಕೊನೆಯನ್ನು ಮುರಿದುತಂದು ಲಕ್ಷಣನಮುಂದೆ ಹಾಸಿ, ವಿನಯಪೂರೈಕವಾಗಿ, ಆತನನ್ನು ಕುಳ್ಳಿರುವಂತೆ ಹೇಳಿದನು ವಿಶೇಷವಾದ ಫಲಪಷ್ಟಗಳಿಂದ ತುಂಬಿದ, ಆ ಪತದಮೇಲೆ ಸುಖಾಸೀನನಾಗಿ, ಸಮುದ್ರದಂತೆ ಗಂಭೀರಸ್ವಭಾವದಿಂ ದೊಪ್ಪತ್ತಿರುವ ರಾಮನನ್ನು ನೋಡಿ ಸುಗ್ರೀವನು, ಮಿತಿಮೀರಿದ ಸಂತೂ ಷದಿಂದ ಗದ್ದ ದಸ್ವರವಳ್ಳವನಾಗಿ ಮೃದುಮಧುರವಾಕ್ಯದಿಂದ, ರಾಮಾ! ನನ್ನಣ್ಣನಾದ ವಾಲಿಯು ನನ್ನ ಪತ್ನಿ ಯನ್ನ ಪಹರಿಸಿದುದಲ್ಲದೆ, ನನ್ನನ್ನೂ ಭಂ ಗಪಡಿಸಿ ಓಡಿಸಿದನು ಅಂದಿನಿಂದ ನಾನು ಪರಮದುಃಖಿತನಾಗಿ ಅವನ ಭಯ ದಿಂದ ಈ ಬೆಟ್ಟವನ್ನಾಶ್ರಯಿಸಿರುವೆನು ನಾನು ಈ ಭಯದಲ್ಲಿ ಮುಳುಗಿ

  • ಇಲ್ಲಿ ಪನ ಆಸನವನ್ನು ಕೊಟ್ಟು ದಾಗಿ ಹೇಳಿರುವುದರಿಂದ ಇದು ಮರುದಿ ನದ ವೃತ್ತಾಂತವೆಂದು ಗ್ರಾಹ್ಯವು