ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೦೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಶ್ರೀ ರಾಮಕೃಷ್ಣ ಪರಮಹ೦ಸ ರ رنه ده ವಿಧವಾದ ವ್ಯಥೆಯನ್ನು ಸಹಿಸಿಕೊಂಡಿದ್ದು, ಶಿಶುವು ಎದ್ದುಬರುವು ದನ್ನೇ ನಿರೀಕ್ಷಿಸಿಕೊಂಡಿರುತ್ತಾ, ಎದ್ದುಬಂದ ಕೂಡಲೆ ಆನಂದದಿಂದ ಆಲಿಂಗಿಸಿಕೊಂಡು ಅದಕ್ಕೆ ಸ್ವಗ್ರವನ್ನು ಊಡಿ ಸುಖಿಯೂ ಸ್ವಪ್ನ ಚಿತ್ತಳೂ ಆಗುವ ತಾಯಿಯಂತೆ ಈ ಗುರುಕುಸುಮವು ಶಿಷ ಶೃಂಗಗಳು ತಡಮಾಡಿದ್ದಕ್ಕಾಗಿ ಒದ್ದಾಡುತ್ತಿದ್ದು ಬಂದ ಕೂಡಲೆ ರೇಖರಿಸಿಕೊಂಡಿದ್ದ ಅಮೃತವನ್ನು ಪಾನಮಾಡಿಸಿ ಕೃತಕೃತ್ಯ ಬುದ್ದಿ ಯನ್ನು ಪಡೆಯಿತು. ಮಧುಪಗಳೂ ಅದೇ ಬುದ್ಧಿಯಿಂದ ತಾವು ಪಡೆದುಕೊಂಡ ಅದ್ಭುತವನ್ನು ಜೀವರಾಶಿಗಳ ಉಪಯೋಗಕ್ಕಾಗಿ ನಾನಾ ದಿಕ್ಕುಗಳಿಗೂ ತೆಗೆದುಕೊಂಡು ಹೋದುವು. ಎಂಥ ಪುಷ್ಟ ವೋ ಅ೦ಥ ಮಕರಂದ ! ಎಂಥ ಮಕರಂದವೋ ಅಂಥ ದುಂಬಿ ಗಳು !! ಶ್ರೀ ವಿವೇಕಾನಂದ ಸ್ವಾಮಿಗಳು ಪರಮಹಂಸರನ್ನು ಮೊದಲು ಸಾರಿ ನೋಡಿದ್ದು ಒ೦ದಪೂರ್ವದ ಘಟನೆ. ಅದರ ವರ್ಣನೆ ಯನ್ನು ಪಾಠಕರು ಅನ್ಯತ್ರ ನೋಡಬಹುದು. ಸ್ವಲ್ಪ ಹೆಚ್ಚು ಕಡಿಮೆ ಅವರು ಬಂದ ಕಾಲದಲ್ಲಿಯೇ ಪ್ರಮುಖರಾದ ಇತರ ಶಿಷ್ಯ ರೆಲ್ಲರೂ ಬಂದು ಸೇರಿದರು. ಅಲ್ಲಿಂದ ಮುಂದಕ್ಕೆ ಪರಮಹಂಸರ ಗುರುಭಾವವೂ ಜನಗಳಲ್ಲಿ ವಿಶೇಷವಾಗಿ ಪ್ರಕಟವಾಯಿತು. ಆದರೆ ಅವರ ಗುರುಭಾವವು ಆಗಲೇ ಆರಂಭವಾಯಿತೆಂದು ತಿಳಿಯಬಾರದು. ಏಕೆಂದರೆ ಸಾಧನಕಾಲ ಮುಗಿದಮೇಲೆ ಅದರ ಪೂರ್ಣ ವಿಕಾಸ ವಾದರೂ, ಸರಮಹಂಸರ ಬಾಲ್ಯದಿಂದಲೂ ಆ ಗುರುಭಾವವು ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇತ್ತು, ಇನ್ನೂ ಚಿಕ್ಕವಯಸ್ಸಿನಲ್ಲಿಯೇ ಲಾಹಾಬಾಬುವಿನ ಮನೆಯಲ್ಲಿ ನಡೆದ ಸಂಗತಿಯೂ * ಯೌವನ ಕಾಲದಲ್ಲಿ ರಾಣಿರಾಣಿಗೆ ಆದ ಶಿಕ್ಷೆಯೂ ¥ ಪಾಠಕರ ನೆನಪಿನಲ್ಲಿರ ಬಹುದು, ಅಲ್ಲಿಂದೀಚೆಗೆ, ಕಲ್ಕತ್ತೆಗೆ ಬಂದ ಮೇಲೆ, ವಿವೇಕಾನಂದ ಸ್ವಾಮಿಗಳು ಬರುವುದಕ್ಕೆ ಬಹಳ ಮುಂಚೆಯೇ, ಪರಮಹಂಸರ

  • ೩೦ ಮತ್ತು ೫೪ ನೇ ಪುಟಗಳನ್ನು ನೋಡಿ.

= = -+

  • -