ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೨೩

ಈ ಪುಟವನ್ನು ಪರಿಶೀಲಿಸಲಾಗಿದೆ



ಚರಿತ್ರೆ

ಜಂತುಗಳಂತೆ ಪಾಶ್ಚಿಮಾತ್ಯರನ್ನು ಅನುಸರಿಸುತ್ತ ಬಂದೆವು. ಇದ ರಿಂದ ಪ್ರತಿಯೊಂದಕ್ಕೂ ಅವರನ್ನೇ ನೆಚ್ಚಿಕೊಳ್ಳಬೇಕಾಯಿತು. ಭಾರತೇಯರು ಯೋಗ ಭೋಗಭ್ರಷ್ಟರಾಗಿ ನಾವಿಕನಿಲ್ಲದ ನಾವೆ ಯಂತೆ ಐಹಿಕಾಮುಮ್ಮಿಕಗಳೆರಡರಲ್ಲಿಯೂ ಕೇವಲ ಅಸಹಾಯ ರಾದರು.

ಈ ಸಮಯದಲ್ಲಿಯೇ ಪಾದ್ರಿಗಳು ಬಂದು ನಮ್ಮ ಕೊಟ್ಯನು

ಕೋಟಿ ದೇವತೆಗಳೂ ವಿಗ್ರಹಾರಾಧನೆಯೂ ಅಸ೦ಖ್ಯಾತವಾದ ಜಾತಿ ಭೇದಗಳೂ ಅನರ್ಥಕಾರಿಗಳೆಂದೂ ಇವೆಲ್ಲಾ ಹಾಳಾದರೆ ಈ ಅರ್ಧಬರ್ಬರ (half-barbarious) ಭಾರತ ದೇಶವು ನಾಗರಿಕತೆ ಯನ್ನು ಪಡೆದು ಉದ್ಧಾರವಾದೀತೆಂದೂ ಉದ್ಯೋಷಿಸುತ್ತಾ ಬಂ ದರು. ಅಲ್ಲಲ್ಲೇ ಸಮಾಜಗಳನ್ನೂ ಸಭೆಗಳನ್ನೂ ಏರ್ಪಾಡುಮಾಡಿ ಸ್ತ್ರೀ ಸ್ವಾತಂತ್ರ, ವಿಧವಾವಿವಾಹ ಮುಂತಾದ ಸಮಾಜ ಸಂಸ್ಕಾರ ಗಳನ್ನು ಪ್ರಚಾರಕ್ಕೆ ತಂದು ನಿರ್ಜೀವವಾದ ಭರತ ಖಂಡಕ್ಕೆ ಜೀವ ವನ್ನು ತುಂಬುತ್ತೇವೆಂದು ತಿಳಿದುಕೊಂಡರು. ಆದರೆ ರೋಗಿಯ ರೋಗವನ್ನು ಪರೀಕ್ಷೆ ಮಾಡದೆ ಔಷಧಿಯನ್ನು ಕೊಟ್ಟರೆ ರೋಗ ಗುಣವಾಗುವುದು ಹೇಗೆ ? ಹೋಗುತ್ತಿದ ಜೀವವು ಪುನಃ ಬರು ವುದು ಹೇಗೆ ? ಜಡವಾದಿಗಳಾದ ಪಾಶ್ಚಿಮಾತ್ಯರು ಈ ರೋಗ ವನ್ನು ಹೇಗೆ ತಾನೇ ಗುರುತಿಸ ಬಲ್ಲರು ? ಧರ್ಮವೇ ಭಾರತದ ಜೀವ, ಆ ಜೀವವನ್ನು ಪೋಷಿಸದಿದ್ದರೆ ಅದುಹೇಗೆ ಉದ್ದಾರ ವಾದೀತು ? ನಾಸ್ತಿಕ ಪಾಶ್ಚಾತ್ಯರಿಂದ ಧರ್ಮಗ್ಲಾನಿ ಹೇಗೆ ಗುಣ ವಾದೀತು ? ಧರ್ಮಗ್ಲಾನಿಯು ಪಶ್ಚಿಮದಿಂದ ಪ್ರವಹಿಸಿ ಎಲ್ಲಿ ಲ್ಲಿಯೂ ಹರಡಿ ಹೋಯಿತು. ಜನರು ಐಹಿಕ ಸುಖವೆ೦ಬ ಬಿಸಿಲ್ಗುದುರೆಯನ್ನು ಬೆನ್ನು ಹತ್ತಿ ಬಳಲಿ ಬೇಸತ್ತು ಹೋದರು. ಈ ನಮ್ಮ ವೇದನೆಯನ್ನೂ ಅಶಾಂತಿಯನ್ನೂ ನಮ್ಮ ಸಮಕ್ಕೆ ಅನುಭವಿಸಿ ಮರುಕಪಟ್ಟು ಸರಿಯಾದ ಧರ್ಮವನ್ನು ಬೋಧಿಸ ಬಲ್ಲ ಮಹಾನುಭಾವನಾವನು? ಪಾಶ್ಚಿಮಾತ್ಯರ ಸಂಯೋಗ