ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೦೬

ಈ ಪುಟವನ್ನು ಪ್ರಕಟಿಸಲಾಗಿದೆ
೯೦
ಶ್ರೀ ರಾಮಕೃಷ್ಣ ಪರಮಹಂಸರ

ಇರುತ್ತಾನೆ. ಹೀಗೆತಾನೆ ಸಾಂಖ್ಯ ಎಂದರೆ? ಇನ್ನೇನು?” ಎಂದು ಹೇಳಿದರು. ಆಮೇಲೆ ವೇದಾಂತಪ್ರಸ್ತಾಪ ಬಂತು. "ವೇದಾಂತದಲ್ಲಿ ಬಹ್ಮ, ಬ್ರಹ್ಮಶಕ್ತಿ, ಪುರುಷ, ಪ್ರಕೃತಿ ಇವೆಲ್ಲ ಬೇರೆಯಲ್ಲ; ಒಂದೇ ಪದಾರ್ಥ; ಕೆಲವು ವೇಳೆ ಪುರುಷಭಾವದಲ್ಲಿ, ಮತ್ತೆ ಕೆಲವು ವೇಳೆ ಪ್ರಕೃತಿ ಭಾವದಲ್ಲಿ ಇರುತ್ತದೆ.” ಎಂದು ಹೇಳಿವರು. ಅದು ಎಲ್ಲರಿಗೂ ಗೊತ್ತಾಗಲಿಲ್ಲ. ಆಗ "ಅದು ಹೇಗೆ ಅ೦ತ ಮಾಡಿಕೊಂಡಿದ್ದೀರಿ? ಈಗ, ಹಾವು ಇದೆ. ಅದು ಹರಿದು ಹೋಗುತ್ತಿರುವುದೂ ಉಂಟು; ಸುಮ್ಮನೆ ಬಿದ್ದಿರುವುದೂ ಉಂಟು. ಅದು ಸುಮ್ಮನೆ ಬಿದ್ದಿರುವಾಗ ಪುರುಷಸ್ಥಿತಿಯ ಹಾಗಾಯಿತು. ಆಗ ಪ್ರಕೃತಿಯು ಪುರುಷನೊಡನೆ ಸೇರಿ ಐಕ್ಯವಾಗಿರುವುದು. ಅದು ಯಾವಾಗ ಹರಿದು ಹೋಗುತ್ತದೆಯೋ ಆಗ ಪ್ರಕೃತಿ ಇದ್ದಹಾಗೆ. ಅದು ಆಗ ಪುರುಷನಿಂದ ಬೇರೆಯಾಗಿ ಕಾರ್ಯಗಳನ್ನು ಮಾಡುತ್ತಿರುವ ಹಾಗೆ” ಎಂದು ಹೇಳಿದರು. ಇದರಿಂದ ಪುರುಷ ಪ್ರಕೃತಿಗಳಿಗೆ ನಿರ್ದೋಷವಾದ ಲಕ್ಷಣವನ್ನು ಹೇಳಿದ ಹಾಗಾಗಲಿಲ್ಲ. ನಿಜ. ಆದರೆ ಇದಕ್ಕಿಂತಲೂ ಸುಲಭವಾದ ಮಾತಿನಲ್ಲಿ, ಸುಲಭವಾದ ರೀತಿಯಲ್ಲಿ, ಇಂಥ ವಿಚಾರಗಳನ್ನು ಸಾಮಾನ್ಯ ಜನರಿಗೆ ತಿಳಿಸುವುದು ಅಸಾಧ್ಯ.[೧]

ಆದರೆ ಅವರು ಆಡುವಮಾತು ಸುಲಭವಾಗಿ ಕಂಡರೂ ಎಷ್ಟು ಭಾವ, ಅರ್ಥಗಳಿಂದ ಗರ್ಭಿತವಾಗಿರುತ್ತದೆ ಎಂಬುದು ಮೊದಲುಸಾರಿ ಕೇಳಿದಾಗ ಅಥವಾ ಓದಿದಾಗ ಗೊತ್ತಾಗುವುದಿಲ್ಲ. ಎಲ್ಲರಿಗೂ ಹೆಚ್ಚು ಅರ್ಥವನ್ನು ಗ್ರಹಿಸುವುದೂ ಸಾಧ್ಯವಲ್ಲ. ಅದು ಅವರವರ ಸಾಮರ್ಥ್ಯದ ಮೇಲೆ ಹೋಗುತ್ತದೆ. ವಿವೇಕಾನಂದ ಸ್ವಾಮಿಗಳು ಒಂದುದಿನ ತಮ್ಮ ಸ್ನೇಹಿತರೊಬ್ಬರೊಡನೆ, ರಾಮ


  1. ಈಗ ಕನ್ನಡದಲ್ಲಿ ಪ್ರಕಟವಾಗಿರುವ ಉಪದೇಶವಾಕ್ಯಾವಳಿಯನ್ನು ನೋಡಿದರೆ ಇ೦ಥ ಸಾಮತಿಗಳು ಮತ್ತೂ ಕಥೆಗಳು ಎಷ್ಟೋ ಸಿಕ್ಕುವುವು.