ಈ ಪುಟವನ್ನು ಪ್ರಕಟಿಸಲಾಗಿದೆ
೯೬
ಶ್ರೀ ರಾಮಕೃಷ್ಣ ಪರಮಹಂಸರ

ನೋಡಬೇಕೆಂಬ ಕುತೂಹಲವಿಲ್ಲವೇ? ದೇವರೇಕೆ ನಮಗೆ ಪ್ರತ್ಯಕ್ಷವಾಗುವುದಿಲ್ಲ? ” ಎಂದು ಕೇಳಬಹುದು. ಇಂಥವರಿಗೆ ರಾಮಕೃಷ್ಣ ಪರಮಹಂಸರು “ ಇ೦ಥ ಬೀಳುಭಕ್ತಿಯಿಂದ ಆಗುವುದೇನು? ಏನಾದರೂ ಆಗಲಿ ದೇವರನ್ನು ನೋಡಿಯೇ ಬಿಡುತ್ತೇನೆ, ಇಂದೇ ನೋಡಿಯೇ ಬಿಡಬೇಕು. ಎಂದು ಹೇಳುವಂಥವರಾಗಬೇಕು.[] ಅಷ್ಟು ಉತ್ಸಾಹವೂ ಶ್ರದ್ಧೆಯೂ ಇರಬೇಕು" ಎಂದು ಹೇಳಿ ತಾವು ಪಟ್ಟ ಶ್ರಮಗಳನ್ನೆಲ್ಲಾ ವಿವರಿಸುತ್ತಿದ್ದರು. ಕೆಲವರು “ ಇದರಿಂದೆಲ್ಲಾ ಏನಾದೀತು? ದೇವರೇ, ದೇವರೇ ಎಂದು ಕೂಗುತ್ತಾ ಕುಳಿತಿದ್ದರೆ ಬಂದದ್ದೇನು? ಎಷ್ಟೆಷ್ಟೋ ಯೋಗಾಭ್ಯಾಸಮಾಡಿ, ನಾಲ್ಕೈದು ಮೊಳ ನೆಲದಿಂದ ಮೇಲಕ್ಕೆದ್ದು, ಎಂಥೆಂಥ ಅದ್ಭುತ ಕಾರ್ಯಗಳನ್ನು ಮಾಡಲು ಶಕ್ತಿಯಿದ್ದವರ ಪಾಡೇ ಏನೇನೋ ಆಗಿಹೋಯಿತು. " ಎಂದು ಆಕ್ಷೇಪಿಸಬಹುದು. ಏಕೆಂದರೆ ಈಗಿನ ಕಾಲದಲ್ಲಿ ಯಾರು ಹಠಯೋಗವನ್ನೂ, ಪ್ರಾಣಾಯಾಮಾದಿಗಳನ್ನೂ ಅಭ್ಯಾಸಮಾಡಿ ಸಿದ್ಧಿಗಳನ್ನು ಪಡೆಯುತ್ತಾರೋ ಅವರೇ ದೇವರನ್ನು ಪ್ರತ್ಯಕ್ಷಮಾಡಿಕೊಳ್ಳತಕ್ಕವರೆಂದೂ ಆ ಮಾರ್ಗವನ್ನು ಬಿಟ್ಟರೆ ಬೇರೆ ಮಾರ್ಗವೇ ಇಲ್ಲವೆಂದೂ ಅನೇಕರು ತಿಳಿದುಕೊಂಡಿದ್ದಾರೆ. ಶ್ರೀ ಶ್ರೀ ಪರಮಹಂಸರವರು ಈಗಿನ ಕಾಲದಲ್ಲಿ ಹಠಯೋಗ ಮುಂತಾದವುಗಳನ್ನು ಅಭ್ಯಾಸಮಾಡುವುದಕ್ಕೆ ಅವಕಾಶವೆಲ್ಲಿದೆಯೋ? ಭಗವಂತನು ಈಗಿನ ಕಾಲಕ್ಕೆ ಸುಲಭವಾಗಿರುವಂತೆ ಭಕ್ತಿಮಾರ್ಗವನ್ನು ವಿಧಿಸಿದ್ದಾನೆ”[] ಎಂದು ಹೇಳುತ್ತಿದ್ದರು. ಅಣಿಮಾದ್ಯಷ್ಟಸಿದ್ಧಿಗಳನ್ನೂ ಅದ್ಭುತ ಶಕ್ತಿಯನ್ನೂ ಪಡೆಯುವ ವಿಚಾರದಲ್ಲಿ ಅವರ ಉಪದೇಶವು

  1. ತೀವ್ರ ಸ೦ವೇಗಾನಾಮಾಸನ್ನಃ. ಯೋ. ಸೂ.
  2. ಯೋಗಿನಾಮಪಿ ಸರ್ವೆಷಾ೦ ಮದ್ಗತೇನಾ೦ತರಾತ್ಮನಾ | ಶ್ರದ್ಧಾವಾನ್ ಭಜತೆಯೋಮಾ೦ ಸಮೇಯುಕ್ತ ತಮೋಮತಃ || ಗೀತಾ ೬-೪೭
    ಮಯ್ಯಾವೇಶ್ಯಮನೋಯೇಮಾ೦. ನಿತ್ಯಯುಕ್ತಾ ಉಪಾಸತೆ | ಶ್ರದ್ಧಯಾಪರಯೋಪೇತಾ ಸ್ತೇಮೇಯುಕ್ತ ತಮಾಮತಾಃ || ಗೀತಾ ೧೨-೨.