ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಶ್ರೀ ರಾಮಕೃಷ್ಣ ಪರಮಹಂಸರ

ನೋಡಿದಕೂಡಲೆ ತಮ್ಮ ಕಾಡು ಹರಟೆಗಳನ್ನು ಬಿಟ್ಟು ಎದ್ದುನಿಂತು ಅವನೊಡನೆ ಮಾತನಾಡುತ್ತಿದ್ದರು ಅವನ ಆಶೀರ್ವಚನವು ನಿಶ್ಚಯವಾಗಿಯೂ ಫಲಕಾರಿಯಾಗುವದೆಂದು ನಂಬಿ ಸಂಪತ್ತಿನಲ್ಲಿಯೂ ವಿಪತ್ತಿನಲ್ಲಿಯೂ ಅವನ ಆಶೀರ್ವಾದವನ್ನು ಪಡೆಯಲು ಜನರು ಬಂದು ಹೋಗುತ್ತಲೇ ಇದ್ದರು. ಶ್ರೀಮತಿ ಚಂದ್ರಾದೇವಿಯಲ್ಲಿಯೂ ಜನರಿಗೆ ಇದೇ ವಿಧವಾದ ಗೌರವವೂ ವಿಶ್ವಾಸವೂ ಇದ್ದುವು. ಆಕೆಯೂ ತನ್ನ ಸರಳತೆ, ದಯೆ, ಪ್ರೀತಿಗಳಿಂದ ಆ ಗ್ರಾಮಕ್ಕೆ ತಾಯಿಯಂತಿದ್ದಳು. ಬಡವರನ್ನು ಕಂಡರೆ ಆಕೆಗೆ ಕೇವಲಮರುಕ. ತನ್ನ ಹತ್ತಿರ ಇದ್ದದ್ದನ್ನು ಹಿಂದು ಮುಂದು ನೋಡದೆ ಕೊಟ್ಟುಬಿಡುವಳು. ವಿಶ್ವಾಸಪೂರ್ವಕವಾಗಿ ಮಾತನಾಡಿಸುವಳು. ಭಿಕ್ಷುಕರಿಗೂ ಸಾಧು ಸನ್ಯಾಸಿಗಳಿಗೂ ಎಂದಿಗೂ ಆ ಮನೆಯ ಬಾಗಿಲು ಹಾಕಿದ್ದುದೇ ಅಲ್ಲ. ಮಕ್ಕಳಿಗೂ ಕೂಡ ಅವರಮನೆಗೆ ಹೋದರೆ ಏನಾದರೂ ತಿಂಡಿಸಿಕ್ಕುವುದೆಂದು ಪೂರ್ಣ ಭರವಸೆ ಇತ್ತು. ಹೀಗೆ ಆಬಾಲವೃದ್ದರೂ ಖುದಿರಾಮನಮನೆಗೆ ಆಗಾಗ್ಗೆ ಸಂತೋಷದಿಂದ ಬಂದುಹೋಗುತ್ತಿದ್ದರು. ಮನೆಯಲ್ಲಿ ದಾರಿದ್ರ್ಯವಿದ್ದರೂ ಒಂದು ಅಪೂರ್ವವಾದ ಶಾಂತಿಯು ಬೆಳಗುತ್ತಿತ್ತು.

ಈ ಕಾಲದಲ್ಲಿ ನಡೆದ ಒಂದುಸಂಗತಿಯಿಂದ ಖುದಿರಾಮನ ದೈವಭಕ್ತಿಯು ಎಷ್ಟಿನಮಟ್ಟಿಗಿತ್ತೆಂಬುದನ್ನು ಊಹಿಸಬಹುದು. ಆತನತಂಗಿಯಾದ ರಾಮಶೀಲೆಯ ಮಗ ರಾಮಚಂದ್ರನು ಮೇದಿನೀಪುರದಲ್ಲಿ ಮೊಖ್ತೆಯಾರನಾಗಿದ್ದನು. ಕಾಮಾರಪುರಕ್ಕೂ ಅಲ್ಲಿಗೂ ಸುಮಾರು ೪೦ ಮೈಲಿ. ಈ ರಾಮಚಂದ್ರನ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಬರುವುದಕ್ಕೆ ಆಗಿಂದಾಗ್ಗೆ ಖುದಿರಾಮನು ಅಲ್ಲಿಗೆ ಹೋಗಿಬರುತ್ತಿದ್ದನು. ಒಂದುದಿನ ಹೀಗೆ ಮೇದಿನೀಪುರಕ್ಕಾಗಿ ಬೆಳಗ್ಗೆ ಹೊರಟು ಸುಮಾರು ಹತ್ತು ಗಂಟೆಯ ಹೊತ್ತಿಗೆ ದಾರಿಯಲ್ಲಿ ಒಂದು ಊರನ್ನು ಸೇರಿದನು. ಅಲ್ಲಿ ಆಗ ತಾನೇ ಚಿಗುರಿ ತಳತಳನೆ ಹೊಳೆಯುತ್ತಿರುವ ದಳಗಳಿಂದ ಕೂಡಿದ