ಈ ಪುಟವನ್ನು ಪ್ರಕಟಿಸಲಾಗಿದೆ
೩೮
ಶ್ರೀ ರಾಮಕೃಷ್ಣಪರಮಹಂಸರ

ಪೂಜೆಮಾಡಿದರೆ ಅಥವಾ ಪ್ರಸಾದಗ್ರಹಣಮಾಡಿದರೆ ದೋಷಭಾಗಿಗಳಾಗುವುದಿಲ್ಲ." ಎಂದು ಉತ್ತರ ಬರೆದನು. ಇದರಿಂದ ರಾಣಿಗೆ ಬಹುಆನಂದವಾಯಿತು. ದೇವಾಲಯವನ್ನೂ ಅದರ ಆಸ್ತಿಯನ್ನೂ ತನ್ನ ಕುಲಪುರೋಹಿತರಿಗೆ ದಾನಮಾಡಿ ದೇವಸ್ಥಾನದ ಕೆಲಸ ಕಾರ್ಯಗಳ ಮೇಲ್ವಿಚಾರಣೆಯ ಅಧಿಕಾರವನ್ನು ಅವರಿಂದ ಪಡೆದಳು.

ಅರ್ಚಕರು ಸಿಕ್ಕುವುದು ಕಷ್ಟವಾಯಿತು. ಶೂದ್ರರ ಮನೆಯಲ್ಲಿ ಪೌರೋಹಿತ್ಯ ನಡೆಸುತ್ತಿದ್ದ ಬ್ರಾಹ್ಮಣರನ್ನೂ ಒಂದು ವಿಧವಾದ ಶೂದ್ರರೆಂದು ಸದಾಚಾರ ನಿಷ್ಠರಾದ ಬ್ರಾಹ್ಮಣರು ಎಣಿಸುತ್ತಿದ್ದರು. ರಾಮಕುಮಾರನ ವ್ಯವಸ್ಥೆಯು ಶಾಸ್ತ್ರವಿರುದ್ದವೆಂದು ಯಾರೂ ಹೇಳಲಿಲ್ಲ. ಆದರೆ ಅದು ಸಮಾಜದ ಅನೂಚೀನವಾದ ಪದ್ದತಿಗೆ ವಿರುದ್ದವೆಂದು ಎಲ್ಲರೂ ಹೇಳತೊಡಗಿದರು. ರಾಣಿಗೆ ಪುನಃ ದಿಕ್ಕು ತೋಚದಂತಾಯಿತು. ಆದರೆ ಕಾರ್ಯದಕ್ಷಳಾದರಾಣಿಯು ಆಗಲೂ ನಿರುತ್ಸಾಹಿಯಾಗಲಿಲ್ಲ. ಅಲ್ಲಿ ಪ್ರತಿಷ್ಠೆ ಮಾಡ ಬೇಕಾಗಿದ್ದ ಎರಡು ದೇವರುಗಳಲ್ಲಿ, ಹಾಗೂ ಹೀಗೂ ' ರಾಧಾ ಗೋವಿಂದ ' ದೇವರ ಪೂಜೆಗೆ ಒಬ್ಬ ಅರ್ಚಕನು ಸಿಕ್ಕಿದ್ದನು. ಆದರೆ, ಕಾಳಿಕಾದೇವಿಯ ಪೂಜೆಗೆ ಯೋಗ್ಯನಾದ ಬ್ರಾಹ್ಮಣನು ದೊರೆಯಲಿಲ್ಲ. ಪ್ರತಿಷ್ಠೆ ಮಾಡಬೇಕೆಂದಿದ್ದ ದಿನವು ಸಮಿಾಪಿಸುತ್ತಾ ಬಂತು. ಆಗ ರಾಣಿರಾಸಮಣಿಯು ಬಹಳ ನಮ್ರಭಾವದಿಂದ ರಾಮಕುಮಾರನಿಗೆ ಹೀಗೆ ಕಾಗದ ಬರೆದಳು. "ಜಗನ್ಮಾತೆಯ ಪ್ರತಿಷ್ಠಾ ಕಾರ್ಯದಲ್ಲಿ ನಾನು ಉದ್ಯುಕ್ತಳಾದದ್ದು ತಮ್ಮ ವ್ಯವಸ್ಥೆಯ ಬಲದಿಂದಲೇ. ಬರುವ ಸ್ನಾನಯಾತ್ರೆಯದಿನ ದೇವಿಯ ಪ್ರತಿಷ್ಠೆ ಮಾಡಬೇಕೆಂದು ಸಂಕಲ್ಪಿಸಿ ಸಮಸ್ತ ಸಲಕರಣೆಗಳನ್ನೂ ಸಿದ್ಧಪಡಿಸಿದ್ದೇನೆ. ರಾಧಾ ಗೋವಿಂದನ ಪೂಜೆಗೆ ಒಬ್ಬ ಅರ್ಚಕರು ಸಿಕ್ಕಿದ್ದಾರೆ. ಆದರೆ ಜಗನ್ಮಾತೆಯ ಪೂಜೆಗೆ ತಕ್ಕವರು ಯಾರೂ ಸಿಕ್ಕಿಲ್ಲ. ಆದ್ದರಿಂದ ತಾವೇ ಈ ವಿಷಯದಲ್ಲಿ ಏನಾದರೂ ಒಂದು ವ್ಯವಸ್ಥೆ ಮಾಡಿ ಈ ವಿಪತ್ತಿನಿಂದ ನನ್ನನ್ನು ಉದ್ಧಾರ ಮಾಡಬೇಕು. ತಾವು ಪಂಡಿತರು ಮತ್ತು