ನಾಲ್ಕನೆಯ ಅಧ್ಯಾಯ.
ಪರಮಹಂಸರು ಕಾಳಯ ಅರ್ಚಕರಾಗಿ ನಿಂತದ್ದು.
ದಕ್ಷಿಣೇಶ್ವರದಲ್ಲಿ ಕಾಳಿಕಾದೇವಿಯ ಪ್ರತಿಷ್ಠೆಯಾದ ದಿವಸ ಪರಮಹಂಸರು[೧] ಅಲ್ಲಿಯೇ ಇದ್ದರು. ಆದಿನ ನಡೆದ ದಾನಧರ್ಮ, ಪೂಜೆ ಪುರಸ್ಕಾರಗಳನ್ನು ನೋಡಿ ಅವರಿಗೆ ಬಹಳ ಆನಂದವಾಯಿತು. ಬೇರೆ ಅರ್ಚಕನು ಸಿಕ್ಕುವವರೆಗೆ ನಾಲ್ಕು ದಿನ ತಾನು ಅಲ್ಲಿಯೇ ಇರುವುದಾಗಿ ರಾಮಕುಮಾರನು ಹೇಳಿದ್ದರಿಂದ ಪರಮಹಂಸರ ಬ್ಬರೇ ಕಲ್ಕತ್ತೆಗೆ ಹಿಂತಿರುಗಿ ಬಂದುಬಿಟ್ಟರು. ಆದರೆ ಒಂದುವಾರ ವಾದರೂ ಅಣ್ಣನು ಬರಲಿಲ್ಲವಾಗಿ ಅದಕ್ಕೆ ಕಾರಣವನ್ನು ತಿಳಿಯ ಬೇಕೆಂದು ಪುನಃ ದಕ್ಷಿಣೇಶ್ವರಕ್ಕೆ ಹೋಗಲು, ರಾಣಿಯು ಬಲ ವಂತ ಪಡಿಸಿದ್ದರಿಂದ ತಾನು ಅಲ್ಲಿಯೇ ಅರ್ಚಕನ ಕೆಲಸದಲ್ಲಿ ಇರುವುದಕ್ಕೆ ಒಪ್ಪಿಕೊಂಡೆನೆಂದು ರಾಮಕುಮಾರನು ಹೇಳಿದನು. ಇದರಿಂದ ಪರಮಹಂಸರಿಗೆ ಸಮಾಧಾನವಾಗಲಿಲ್ಲ. ತಮ್ಮತಂದೆ ಯು ಶೂದ್ರರಮನೆಯಲ್ಲಿ ಪೂಜೆಮಾಡದೆ ಇದ್ದದ್ದು, ಶೂದ್ರರಿಂದ ದಾನವನ್ನು ಸ್ವೀಕರಿಸದೆ ಇದ್ದದ್ದು, ಮುಂತಾದ ಆತನಸದಾಚಾರಗಳ ನ್ನೆಲ್ಲಾ ಅಣ್ಣನಿಗೆ ಜ್ಞಾಪಿಸಿ ಅವನನ್ನು ಕರೆದುಕೊಂಡು ಹೋಗುವು ದಕ್ಕೆ ಪ್ರಯತ್ನ ಮಾಡಿದರು. ರಾಮಕುಮಾರನು ಶಾಸ್ತ್ರಸಹಾಯ ದಿಂದಲೂ ಯುಕ್ತಿ ಸಹಾಯದಿಂದಲೂ ತಮ್ಮನಿಗೆ ಏನೇನೋ
- ↑ 'ರಾಮಕೃಷ್ಣ' ನೆಂಬ ಹೆಸರು ಬಹುಶಃ ಸನ್ಯಾಸ ಸ್ವೀಕಾರ ಕಾಲದಲ್ಲಿ ತೋತಾಪುರಿ ಗೋಸ್ವಾಮಿಯು ಕಟ್ಟಿದ್ದು: ಪರಮಹಂಸತ್ವವು ಎಲ್ಲದಕ್ಕೂ ಕೊನೆಯಲ್ಲಿ ಬಂದದ್ದು. ಆದರೂ ಇಲ್ಲಿಂದ ಮುಂದಕ್ಕೆ ಏಕವಚನವನ್ನು ಉಪಯೋಗಿಸಲು ಸಂಕೋಚವಾಗಿ ರಾಮಕೃಷ್ಣಪರಮ ಹಂಸರು ಅಥವಾ ಪರಮಹಂಸರು ಎಂದೇ ಹೇಳುತ್ತ ಹೋಗಿದ್ದೇವೆ.