ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೬೭

ಈ ಪುಟವನ್ನು ಪ್ರಕಟಿಸಲಾಗಿದೆ
೫೧
ಚರಿತ್ರೆ

ಹೇಳಿದ್ದೇವೆ. ಹೀಗೆ ಪರಮಹಂಸರು ರಾತ್ರಿಯ ಹೊತ್ತು ಕಾಡಿನೊಳಗೆ ಹೋಗುತ್ತಿದ್ದದ್ದನ್ನು ನೋಡಿ ಹೃದಯನು ಒಂದು ದಿನ ಅವರನ್ನು ಹಿಂಬಾಲಿಸಿ ಹೋದನು. ಅವರು ಒಂದು ಬನ್ನಿ ಯಮರದಕೆಳಗೆ ಜನಿವಾರವನ್ನೂ ಉಟ್ಟಿದ್ದ ಬಟ್ಟೆಯನ್ನೂ ತೆಗೆದುಹಾಕಿ ಧ್ಯಾನಮಾಡುತ್ತ ಕುಳಿತರು. ಅದನ್ನು ನೋಡಿ ಹೃದಯನು ಮನಸ್ಸಿನಲ್ಲಿ"ಮಾವನಿಗೆ ಹುಚ್ಚು ಹಿಡಿಯಿತೋ ಏನೋ! ಹುಚ್ಚರೇ ಹೀಗೆಮಾಡುವುದು ; ಧ್ಯಾನಮಾಡಿದರೆಮಾಡಲಿ : ಆದರೆ ಹೀಗೆ ಬೆತ್ತಲೆಯಾಗಿ ಏಕೆ ಮಾಡಬೇಕು ?" ಎಂದಂದುಕೊಂಡು ಬೇಗನೆ ಅವರಹತ್ತಿರ ಹೋಗಿ "ಮಾವ ! ಇದೇನಿದು! ಜನಿವಾರವನ್ನು ತೆಗೆದುಹಾಕಿ ಉಟ್ಟ ಬಟ್ಟಗಳನ್ನೂ ಬಿಚ್ಚಿ ಹೀಗೆ ಏಕೆ ಬೆತ್ತಲೆಕೂತೆ ?" ಎಂದುಕೇಳಿದನು. ಅದಕ್ಕೆ ಅವರು ಕಣ್ಣು ಬಿಟ್ಟು ನೋಡಿ "ನಿನಗೇನುಗೊತ್ತೋ? ಹೀಗೆ ಪಾರಮುಕ್ತನಾಗಿಯೇ ಧ್ಯಾನಮಾಡ ಬೇಕಾದದ್ದು.ಮನುಷ್ಯನು ಜನ್ಮಾವಧಿ ದ್ವೇಷ, ಲಜ್ಜೆ, ಕುಲ, ಶೀಲ, ಭಯ,ಮಾನ, ಜಾತಿ, ಅಭಿಮಾನ ಎಂಬ ಅಷ್ಟಪಾಶಗಳಿ೦ದ ಬದ್ಧನಾಗಿರುತ್ತಾನೆ. ಯಜ್ಯೋಪವೀತವೂ ತಾನು ಬ್ರಾಹ್ಮಣ, ಎಲ್ಲರಿಗಿಂತಲೂದೊಡ್ಡವನು' ಎಂಬ ಅಭಿಮಾನದ ಗುರುತು, ಮತ್ತು ಒಂದುಪಾಶ : ತಾಯಿಯನ್ನು ಕುರಿತು ಪ್ರಾರ್ಥಿಸಬೇಕಾದರೆ ಈ ಪಾಶಗಳನ್ನೆಲ್ಲಾ ಕಿತ್ತು ಬಿಸಾಡಿ ಏಕಮನಸ್ಸಿನಿಂದ ಪ್ರಾರ್ಥಿಸಬೇಕು. ಆದ್ದರಿಂದಲೇ ಇವನ್ನೆಲ್ಲ ತೆಗೆದುಹಾಕಿದ್ದೇನೆ. ಧ್ಯಾನಮುಗಿದುಹಿಂದಕ್ಕೆ ಬರುವಾಗ ಪುನಃ ಅವುಗಳನ್ನೆಲ್ಲ ಹಾಕಿಕೊಂಡು ಬರುತ್ತೇನೆ" ಎಂದು ಹೇಳಿದನು. ಹೃದಯನು ಮಾವನಿಗೆ ಏನೇನೋಬುದ್ದಿ ಹೇಳಬೇಕೆಂದು ನಿಶ್ಚಯಮಾಡಿಕೊಂಡು ಹೋಗಿದ್ದನು. ಆದರೆಆಗ ಏನೂ ತೋಚದೆ ಸುಮ್ಮನೆ ಹೊರಟು ಬಂದುಬಿಟ್ಟನು.

ದಿನಗಳು ಕಳೆದಹಾಗೆಲ್ಲ ಪರಮಹಂಸರ ಮನಸ್ಸಿನಲ್ಲಿ ದೇವತಾನುರಾಗವೂ, ವ್ಯಾಕುಲತೆಯೂ ವೃದ್ಧಿಯಾಗುತ್ತ ಬಂದುವು. ನಿದ್ರಾಹಾರಗಳು ಬೇಕಿಲ್ಲವಾದುವು; ತಲೆಯೂ ಎದೆಯ ಯಾವಾಗಲೂ