ಈ ಪುಟವನ್ನು ಪ್ರಕಟಿಸಲಾಗಿದೆ

೫೪

ಶ್ರೀ ರಾಮಕೃಷ್ಣ ಪರಮಹಂಸರ

ದೆಂದೂ ಹೇಳಿ ಕಳುಹಿಸಿದನು. ಅದರಂತೆ ಕೆಲವು ದಿನಗಳಾದಮೇಲೆ ಯಾರಿಗೂ ತಿಳಿಸದೆ ಒಂದುದಿನ ಪೂಜಾಕಾಲಕ್ಕೆ ದೇವಸ್ಥಾನಕ್ಕೆ ಬಂದು ಸ್ವಲ್ಪ ಹೊತ್ತು ಪರಮಹಂಸರ ಪೂಜೆಯನ್ನುದೃಷ್ಟಿಸಿ ನೋಡಿದನು. ಭಾವಾವಿಷ್ಟರಾದ ಪರಮಹಂಸರಿಗೆ ಮಧುರಾನಾಥನು ಬಂದು ಹತ್ತಿರನಿಂತಿದ್ದು ಗೊತ್ತೇ ಆಗಲಿಲ್ಲ : ಹೀಗೆಅನನ್ಯಮನಸ್ಕರಾಗಿ ಮಾಡುತ್ತಿದ್ದ ಪೂಜೆ, ದೇವಿಯಹತ್ತಿರ ಮಗುವಿನಹಾಗೆ ಹಟಮಾಡುವುದು, ಪೀಡಿಸುವುದು, ಮುಂತಾದನ್ನೆಲ್ಲನೋಡಿ ಮಧುರಾನಾಥನು ಅವೆಲ್ಲವೂ ಐಕಾಂತಿಕ ಪ್ರೇಮಭಕ್ತಿಯೆಂದು ತಿಳಿದುಕೊಂಡನು. ಹಾಗೆಯೇ ಸ್ವಲ್ಪ ಹೊತ್ತು ನೋಡುತಿದ್ದು ಕೊನೆಗೆ ಭಕ್ತಿಯಿಂದ ದೇವಿಗೂ ಪರಮಹಂಸರಿಗೂ ದೀರ್ಘದಂಡ ನಮಸ್ಕಾರ ಮಾಡಿ ಮನೆಗೆ ಹೋಗಿ ಅಲ್ಲಿಂದ ದೇವಸ್ಥಾನದಅಧಿಕಾರಿಗಳಿಗೆ “ ಅರ್ಚಕರು ಹೇಗೆ ಬೇಕಾದರೆ ಹಾಗೆ ಪೂಜೆಮಾಡಲಿ:ಅವರಿಗೆ ಅಡ್ಡಿ ಮಾಡಕೂಡದು,” ಎಂದು ಕಾಗದಬರೆದನು. ರಾಣಿರಾಸರಣಿಗೂ ಈ ಸಮಾಚಾರಗಳೆಲ್ಲ ತಿಳಿಯಬಂದುವು.

ರಾಣಿಯು ಆಗ್ಗಾಗ್ಗೆ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಆಗಪರಮಹಂಸರು ಸುಮಧುರವಾದ ಕಂಠದಿಂದ ಭಕ್ತಿಯುಕ್ತವಾಗಿಹಾಡುತ್ತಿದ್ದ ದೇವರ ಕೀರ್ತನೆಗಳನ್ನು ಕೇಳಿ ಬಹಳ ಆನಂದಪಡುತ್ತಿದ್ದಳು. ಒಂದುದಿನ ಹೀಗೆ ದೇವಿಯದರ್ಶನಕ್ಕೆ ಹೋಗಿದ್ದವಳುಪರಮಹಂಸರನ್ನು ಕರೆದು ಒಂದು ಕೀರ್ತನೆಯನ್ನು ಹಾಡಬೇಕೆಂದುಕೇಳಿಕೊಂಡಳು. ಅವರು ಹಾಡುತ್ತ ಹಾಡುತ್ತ ಭಾವಾವಿಷ್ಠರಾಗಿ"ಇಲ್ಲಿಯೂ ಅದೇಯೋಚನೆಯೆ ?" ಎಂದು ಆಕೆಗೆ ಬಲವಾಗಿಒ೦ದು ಪೆಟ್ಟನ್ನು ಕೊಟ್ಟರು, ಅಲ್ಲಿದ್ದವರೆಲ್ಲರೂ ಗಾಬರಿಯಾಗಿಕೂಗಾಡಲಾರಂಭಿಸಿದರು. ರಾಣಿಯು ತಾನು ಯಾವುದೋಒಂದು ಮೊಖದ್ದಮೆಯ ವಿಚಾರವಾಗಿ ಯೋಚನೆ ಮಾಡುತ್ತಿದ್ದಳುಆದ್ದರಿಂದ ಸಿಟ್ಟಾಗದೆ ತನ್ನನ್ನು ಅರ್ಚಕರು ಶಿಕ್ಷಿಸಿದ್ದು ನ್ಯಾಯವಾಗಿದೆಯೆಂದು ಹೇಳಿ ಅವರೆಲ್ಲರನ್ನೂ ಸಮಾಧಾನವಾಡಿದಳು.