ಈ ಪುಟವನ್ನು ಪ್ರಕಟಿಸಲಾಗಿದೆ



೧೦೦ಕೃಷ್ಣಲೀಲೆ

ನಾರದ:- ವೃತ್ತಂ | ಶ್ರೀರಮಣೀ ಕಳತ್ರ ಸರಸೀರುಹ ಪತ್ರ ವಿಶಾಲ ನೇತ್ರಬೃಂ|
   ದಾರಕ ವೈರಿ ಜೈತ್ರ ವರ ಸಾಧು ಜನಾವಳಿ ಪ್ರೀತಿಪಾತ್ರ ಮಂ| ಜೀರವಿಲಾಸ
   ಪಾದಯುಗ ಚಿತ್ರಚರಿತ್ರ ಪುರಾರಿಮಿತ್ರ ವಿ|ಸ್ತಾರ ವಿನೋದ ಚೈತ್ರ ಮುರದಾನ
   ವ ಭಂಜನ ತೇ ನಮೋ ನಮೋ||
    ಕೃಷ್ಣಾ! ಭಕ್ತಜನ ಮಂದಾರಾ! ದೀನ ದಯಾಕರ ಮೂರ್ತಿ !
ನಾನಿನ್ನು ತೆರಳುವೆನು.
      (ಎಂದು ನಾರದರು ಕೃಷ್ಣನಿಗಭಿವಂದಿಸಿ ತೆರಳುವರು.)
                           **
           ಪ್ರದೇಶ :- ನಂದಗೋಪನ ಅಂತಃಪುರ.
    ಯಶೋದೆಯು ಮಕ್ಕಳನ್ನೆಲ್ಲಾ ಭೋಜನಕ್ಕೆ ಕರೆಯುವಳು.
ಬಲರಾಮನು ಮುಂತಾದ ಗೋಪಬಾಲಕರು ಕೃಷ್ಣನ ಮೇಲೆ ದೂರು
ಹೇಳುವರು.

ಯಶೋದೆ:- ಬಲರಾಮಾ | ಊಟಕ್ಕೆ ಬಾ, ಹೊತ್ತಾಯಿತು.
ಬಲರಾಮ:- ಇಗೋ ಬರುವೆನಮ್ಮ.
ಯಶೋದೆ:- ಕೃಷ್ಣಾ ! ಊಟಮಾಡೇಳು?
ಕೃಷ್ಣಾ:-ಅಮ್ಮಾ! ನನಗೇಕೋ ಹಸಿವಿಲ್ಲವಮ್ಮ.
ಬಲರಾಮ:- ನಿನಗೆ ಹಸಿವೆಲ್ಲಿಂದ ಬಂದೀತು. ಅಮ್ಮಾ, ಇವನು
ಆಟವಾಡುವಾಗ ಸುಮ್ಮನೆ ಮಣ್ಣು ತಿನ್ನುವನಮ್ಮ.

ಯಶೋದೆ:- ಏನು ಏನು! ಮಣ್ಣು ತಿನ್ನುವನೆ?
ಬಲರಾಮ:- ನಿಜವಾಗಿಯೂ ತಿನ್ನುವನಮ್ಮ!
ಯಶೋದೆ:- ಆ! ಅದು ಹಾಗೆಯೆ ! (ಎಂದು ಕೃಷ್ಣನ
ಕೈಹಿಡಿದುಕೊಂಡು) ಎಲಾ ತುಡುಗು ಹುಡುಗ! ನಿನಗೆ ಮನೆಯಲ್ಲಿ ಅನ್ನ
ವಿಲ್ಲವೇನೊ? ಮಣ್ಣೇಕೆ ತಿನ್ನುವೆಯೋ?

 ಶ್ರೀ ಕೃಷ್ಣ:-
 ಶ್ಲೋ|| ನಾಹಂ ಭಕ್ಷಿತವಾನಂಬ | ಸರ್ವೇ ಮಿಥ್ಯಾಭಿಶ೦ಸಿನಃ| ಯದಿ ಸತ್ಯಗಿರ
 ಸ್ತರ್ಹಿ | ಸಮಕ್ಷಂ ಪಶ್ಯಮೇ ಮುಖ೦||
 ಅಮ್ಮಾ ! ಇಲ್ಲವಮ್ಮ. ನಾನು ಮಣ್ಣು ತಿನ್ನಲಿಲ್ಲವಮ್ಮ. ಇವ
 ರೆಲ್ಲರೂ ಅಬದ್ಧಗಾರರು. ನನ್ನ ಮೇಲೆ ಬೇಕೆಂದು ಸುಳ್ಳುಹೇಳು
ವರು. ಬೇಕಾದರೆ ನನ್ನ ಬಾಯನ್ನು ಪರೀಕ್ಷಿಸಿನೋಡಮ್ಮ.

ಯಶೋದೆ:-ಎಲ್ಲಿ! ನಿನ್ನ ಬಾಯನ್ನು ತೆರೆ? |