ಈ ಪುಟವನ್ನು ಪ್ರಕಟಿಸಲಾಗಿದೆ


೧೦೮ಕೃಷ್ಣಲೀಲೆ

ಪಕ್ಶಿರಾಜ ಹಿತ ಗೋಪೀನಾಯಕ| ಶಬರೀತೋಷಕ ಗೋಪೀನಾಯಕ|| ಅಭಯಪ್ರದಾಯಕ ಗೋಪೀನಾಯಕ| ಮಾರುತಿಸೇವಿತ ಗೋಪೀನಾಯಕ|| ಭಾರತೀಶನುತ ಗೋಪೀನಾಯಕ| ದಶಮುಖ ಮರ್ದನ ಗೋಪೀನಾಯಕ|| ಕುಶಲ ವಿಧಾಯಕ ಗೋಪೀನಾಯಕ| ವಿಭೀಷಣೋದ್ದರ ಗೋಪೀನಾಯಕ|| ಸುಭಾಷಣಾ೦ಚಿತ ಗೋಪೀನಾಯಕ| ಕೃಷ್ಣ ರೂಪಧರ ಗೋಪೀನಾಯಕ|| ದುಷ್ಟದನುಜಹರ ಗೋಪೀನಾಯಕ| ನಾರದ ಮುನಿನುತ ಗೋಪೀನಾಯಕ|| ಭೂರಿ ದಯಾಮಯ ಗೋಪೀನಾಯಕ| ದೇವಕಿನಂದನ ಗೋಪೀನಾಯಕ|| ದೇವೇಂದ್ರಾರ್ಚಿತ ಗೋಪೀನಾಯಕ| ವಸುದೇವಾತ್ಮಜ ಗೋಪೀನಾಯಕ||
ವಸುಧಾಧಿಪನುತ ಗೋಪೀನಾಯಕ| ನಂದಗೋಪ ಸುತ ಗೋಪೀನಾಯಕ।।
ಸುಂದರವಿಗ್ರಹ ಗೋಪೀನಾಯಕ| ಯಶೋದಾನುಮತ ಗೋಪೀನಾಯಕ||
ಯಶೋ ವಿರಾಜಿತ ಗೋಪೀನಾಯಕ| ಸತ್ವಗುಣಾಧಿಕ ಗೋಪೀನಾಯಕ|| ನಿತ್ಯ ನಿರಂಜನ ಗೋಪೀನಾಯಕ| ಸತ್ಯ ಸನಾತನ ಗೋಪೀನಾಯಕ||
ಉತ್ತಮ ನಾಯಕ ಗೋಪೀನಾಯಕ| ಪ್ರವಿಮಲ ನಾಮಕ ಗೋಪೀನಾಯಕ।। ಭವಹರ ಸುಖಕರ ಗೋಪೀನಾಯಕ| ಕವಿಜನ ಭೂಷಣ ಗೋಪೀನಾಯಕ|| ಶಿವರಾಮಾವನ ಗೋಪೀನಾಯಕ| ಮಂಗಳದಾಯಕ ಗೋಪೀನಾಯಕ|
ಗೋಪೀನಾಯಕ ನಮೋನಮಸ್ತೇ||

(ಎಂದಭಿವರ್ಣಿಸುತ್ತ ಉದ್ಧವನು ಶ್ರೀಕೃಷ್ಣನಿಗೆ ನಮಸ್ಕರಿಸುವನು )

ಶ್ರೀಕೃಷ್ಣ:-ಉದ್ದವಾ ! ವಿಶುದ್ದಾಂತರಂಗ ಪ್ರಬುದ್ಧನಾದ ನಿನಗೆ
ಉದ್ದವ ನಾಮವು ಸಾರ್ಥಕವಾದುದು.

     (ಇಷ್ಟರಲ್ಲಿ ಗೋಪಿಯರು ಪ್ರವೇಶಿಸುವರು.)

ಭಾನುಮತಿ:-ಎಲ್ಲವೋ ಚೋರ ಕೃಷ್ಣಾ! ನಮ್ಮ ಮನೆಯಲ್ಲಿ
ನೀನೇನು ಕೆಲಸ ಮಾಡಿ ಬಂದೆ?

ಕಳಾವತಿ:- ಕೃಷ್ಣಾ ! ಹಾಲಿನ ಪಾತ್ರೆಯನ್ನು ಮೇಲಿನಿಂದಿಳಿಸಿ
ಮಾರ್ಜಾಲಗಳ ಪಾಲು ಮಾಡಬಹುದೇನೊ?

ಮಿಕ್ಕಗೋಪಿಯರು:-ಇಷ್ಟೇಕೆ? ಇವನನ್ನು ಭದ್ರವಾಗಿ ಹಿಡಿ
ದು ಕೊಳ್ಳಿರಿ. ಇವನ ಚೇಷ್ಟೆಗಳನ್ನು ಯಶೋದಾ ದೇವಿಗೆ ತಿಳಿಸುವ.

     (ನಂದಿನಿಯು ಕೃಷ್ಣನನ್ನು ಹಿಡಿದು ಕೊಳ್ಳುವಳು ಎಲ್ಲರೂ
ಗುಂಪಾಗಿ ಯಶೋದಾ ದೇವಿಯ ಬಳಿಗೆ ಪೋಗುವರು.)