ಈ ಪುಟವನ್ನು ಪ್ರಕಟಿಸಲಾಗಿದೆ


೧೧೦ಕೃಷ್ಣಲೀಲೆ

[ಗೋಪಿಯರು ಪ್ರವೇಶಿಸುವರು]. ಎಲ್ಲರೂ ನೋಡಿದರೆ ದೃಷ್ಟಿ
ಯಾಗುವುದೆಂದೆಣಿಸಿ ಯಶೋದೆಯು ಕೃಷ್ಣನ ಮೇಲೆ ಸೆರಗನ್ನು ಮು
ಚ್ಚುವಳು.

                   ಗೋಪಿಯರು:- ರಾಗ--ದೇಶಿತೋಡಿ-ಆದಿ.

  ಗೋಪಿ ದೇವೀ ಲಾಲಿಸಮ್ಮ| ನಿನ್ನ ಮಗನ ತುಡುಗುತನವ|| ಪ ||
  ಗೋಪ ಬಾಲರೊಡನೆ ಕೂಡಿ | ಮನೆ ಮನೆಯೊಳು ತಿರುಗುತಿರುವ ||ಗೋಪೀ||
                                                      ||ಅ-ಪ||
  ಪಾಲು ಬೆಣ್ಣೆಗಳನು ಕದ್ದು| ಬಾಲಕರಿಗೆ ಹಂಚಿಕೊಡುವ| ಕೇಳುವವರ ಗೇಲಿ
ಗೈವ| ಪೇಳ್ವುದೆಂತಾ ಚಿತ್ರಗಳನು ||ಗೋಪಿ||

  ಯಶೋದಮ್ಮ! ಕೃಷ್ಣನ ಕಾಟವನ್ನು ತಡೆಯಲು ನಮ್ಮಿಂದಾ
ಗದಮ್ಮ. ಇಗೋ ನೋಡು, ನಿನ್ನ ಮಗನನ್ನು ಹಿಡಿದು ತಂದಿರುವೆವು||

ಯಶೋದೆ:- ರಾಗ - ಶಂಕರಾಭರಣ - ಏಕತಾಳ.
ಗೋಪಿಯರೇ ಯೇನಿದು| ಸಟೆಯಾಡುವಿರಿ ತೆರದೀ||ಪ||
ಗೋಪಾಲಕೃಷ್ಣನ ನೋಡಿದೆವೆನುತ| ಪಾಪದ ಮಾತುಗಳಾಡುವಿರೇನಿದು
                                          ||ಗೋಪೀ||ಅ-ಪ||
ಅಮ್ಮಾ ಗೋಪಿಯರೆ! ನಿಮ್ಮ ಮಾತುಗಳು ಬಹಳ ಸುಳ್ಳು.
ಕೃಷ್ಣನು ಬೆಳಗಿನಿಂದಲೂ ನನ್ನ ಬಳಿಯಲ್ಲಿಯೇ ಇರುವನು. ಎಲ್ಲಿ
ಗು ಹೋಗಲಿಲ್ಲ. ನಮ್ಮ ಬಾಲಕನು ಚೆನ್ನಾಗಿರುವುದನ್ನು ನೋಡಿ
ನೀವು ಸೈರಿಸಲಾರಿರೆಂದು ಕಾಣುವುದು.
    ಕೃಷ್ಣನು ನನ್ನ ಮಡಿಲಿನಲ್ಲಿಯೇ ಮಲಗಿರುವನು. ಪ್ರತ್ಯಕ್ಷ
ದಲ್ಲಿಯೇ ಇಷ್ಟು ಸುಳ್ಳು ಹೇಳುವ ನೀವು ಪರೋಕ್ಷದಲ್ಲಿ ಮತ್ತೆಷ್ಟು ಹೇ
ಳುವಿರೋ? ಇನ್ನು ಮೇಲೆ ಇಂತಹ ಅಸತ್ಯ ಕಲ್ಪನೆಗಳನ್ನು ನನ್ನೊಂದಿಗೆ
ಹೇಳಬೇಡಿರಿ.
(ಎಂದು ತನ್ನ ಅಂಕಪೀಠದಲ್ಲಿ ಮಲಗಿರುವ ಕೃಷ್ಣನನ್ನು ತೋರಿ ಸುವಳು.)

ನಂದಿನಿ:- (ಗಾಬರಿಯಿಂದ) ನಾವು ಹೇಳುವುದು ಕಲ್ಪನೆಯಲ್ಲ.
ನಿನ್ನ ಮಗನನ್ನು ಹಿಡಿದು ತಂದಿರುವೆವು. ನಿಜವೋ ಸುಳ್ಳೋ ನೀನೇ
ನೋಡಮ್ಮ!