೧೧೩ಚತುರ್ಥಾ೦ತಂ
ಇದಕ್ಕೆ “ಯಮನ ಮಡುವೆಂದು ” ಹೆಸರು ಬಂದಿರುವುದು. ಇದು
ಮಹಾ ಅಪಾಯಕರವಾದುದು. ಕೃಷ್ಣಾ ! ಗೋವುಗಳನ್ನಟ್ಟಿ ಕೊಂ
ಡು ಮತ್ತೊಂದು ಕಡೆಗೆ ಹೋಗೋಣ ನಡೆ!
ಶ್ರೀಕೃಷ್ಣ:- (ತನ್ನಲ್ಲಿ) ಓಹೋ! ಕಾಳೀಯನೆಂಬ ಸರ್ವರಾ
ಜನು ತನ್ನ ವಿಷ ಜ್ವಾಲೆಗಳಿಂದ ಈ ಮಡುವಿನ ಜಲವನ್ನೆಲ್ಲಾ ಕೆಡಿಸಿ
ಹಾಳುಮಾಡಿರುವನು. ಇದಕ್ಕಾಗಿಯೇ ಈ ಗೋಪಾಲಕರಿಷ್ಟು ಹೆದರು
ತ್ತಿರುವರು. ಆಗಲಿ! ಈ ಕ್ರೂರ ಸರ್ಪವನ್ನು ಶಿಕ್ಷಿಸುವುದಕ್ಕೆ ಇದೇ
ತಕ್ಕ ಸಮಯವು.
(ಎಂದು ನಿಶ್ಚಯಿಸಿ ಮಡುವಿನ ದಡದಲ್ಲಿದ್ದ ಕದಂಬ ವೃಕ್ಷವನ್ನೇರಿ
ಭುಜಗಳನ್ನು ತಟ್ಟುತ ಮಡುವಿನಲ್ಲಿ ದುಮುಕುವನು.)
ಕಾಳೀಯ:-ಆಹಾ ! ಇದೇನಾಶ್ಚರ್ಯ, ನಾನು ವಾಸ ಮಾಡತಕ್ಕ
ಈ ಮಡುವಿನ ಬಳಿಗೆ ಬರುವುದಕ್ಕೇ ಪ್ರಾಣ ಕೋಟಿಗಳು ಭಯ ಪಡು
ವವಲ್ಲಾ! ನನ್ನ ವಾಸಸ್ಥಾನವನ್ನು ಇನ್ನು ನಿರ್ಭಯವಾಗಿ ಹೊಕ್ಕಿ
ಆಟವಾಡುತ್ತಿರುವ ಈಡುಗನು ಯಾರಾಗಿರಬಹುದು? ಓಹೋ ! ಇವ
ನಾರೋ ಧೈರ್ಯಶಾಲಿಯಾಗಿ ಕಾಣುವನು. ಯಾರಾದರೇನು ? ಭಯಂ
ಕರವಾದ ನನ್ನ ವಿಷಾಗ್ನಿ ಜ್ವಾಲೆಗಳಿಂದ ಇವನನ್ನು ದಹಿಸುವೆನು.
ಇವನೆಷ್ಟು! ಇವನ ಪ್ರತಾಪವೆಷ್ಟು!
(ಕಾಳೀಯನು ಅತಿ ರೋಷದಿಂದ ತನ್ನ ಹೆಡೆಗಳನ್ನು ಬಿಚ್ಚಿ
ಕೃಷ್ಣನ ಶರೀರದಲ್ಲಿ ನಾಲ್ಕಾರು ಕಡೆ ಕಚ್ಚಿ, ಆತನ ಶರೀರಕ್ಕೆ ಸುತ್ತಿ
ಕೊಳ್ಳುವನು.)
ಶ್ರೀಕೃಷ್ಣ:- ಈ ಕ್ರೂರ ಸರ್ಪಕ್ಕೆ ನಾನು ಒಳಪಟ್ಟಂತೆಯೇ
ಸ್ವಲ್ಪ ಹೊತ್ತು ನಟಿಸುವೆನು,
(ಎಂದು ಸರ್ಪದ ಕೈಗೆ ಸಿಕ್ಕಿ ಅಲ್ಲಾಡದೆ ಸ್ತಬ್ಧನಾಗಿರುವ ಕೃಷ್ಣ
ನನ್ನು ಕಂಡು ಗೋಪಾಲಕರು, ಅತ್ಯಂತ ದುಃಖದಿಂದಲೂ, ಭಯದಿಂ
ದಲೂ, ಕಂಗೆಟ್ಟು ಶೋಕಿಸುತ್ತ ಮೂರ್ಛೆ ಹೋಗುವರು. ಗೋವುಗ
ಳೆಲ್ಲವೂ ಕಣ್ಣಲ್ಲಿ ನೀರು ಸುರಿಸುತ್ತ ಅರಚುತ್ತ ನಿಂತಿರುವುವು.)
ಪುಟ:ಶ್ರೀ ಕೃಷ್ಣ ಲೀಲೆ.djvu/೧೨೯
ಈ ಪುಟವನ್ನು ಪ್ರಕಟಿಸಲಾಗಿದೆ