ಈ ಪುಟವನ್ನು ಪ್ರಕಟಿಸಲಾಗಿದೆ


೧೧೬ಕೃಷ್ಣಲೀಲೆ

ಲ್ಪಟ್ಟು ಚಿತ್ರ ಪ್ರತಿಮೆಯಂತೆ ನಿಶ್ಚೇಷ್ಟಿತನಾಗಿದ್ದ ಕೃಷ್ಣನನ್ನು ಕಂಡು
ಆತನ ಲೀಲೆಯನ್ನರಿಯದವರಾಗಿ ಬಹಳ ಗಾಬರಿಯಿಂದ ದುಃಖಿಸು
ವರು.)
ಯಶೋದೆ:-ಕೃಷ್ಣಾ! ಈ ನಿನ್ನ ಕಷ್ಟ ದಶೆಯನ್ನು ನೋಡು
ತ್ತ ನಾನಿನ್ನೂ ಬದುಕಿರುವೆನಲ್ಲಾ ನಾನೆಷ್ಟು ಪಾಪಾತ್ಮಳು. ಕಂದಾ! \
ಈ ಪಾಪಿ ಸರ್ಪವನ್ನು ಕೊಂದು ನಿನ್ನನ್ನು ಬಿಡಿಸತಕ್ಕ ಪುಣ್ಯಾತ್ಮ
ರಾರು? ಅಂಥವರೂ ಇರುವರೆ? ಕೃಷ್ಣಾ! ನಾನೇನು ಮಾಡಬಲ್ಲೆನು!
ನಿನ್ನ ಬಾಲ್ಯ ಲೀಲೆಗಳನ್ನು ನೋಡಿ ಆನಂದಿಸುತ್ತಿದ್ದ ನನ್ನ ಹೃದಯವು
ಬಿರಿದು ಹೋಗುತ್ತಿರುವುದಲ್ಲಾ! ಕೃಷ್ಣಾ ! (ಎಂದು ಘೋರವಾಗಿ ಶೋಕಿ
ಸುವಳು.) .

ನಂದ:- ಕಂದಾ! ಈ ಸರ್ಪವನ್ನು ಯಾವ ಉಪಾಯದಿಂದ
ಕೊಲ್ಲಬೇಕೆಂಬುದೇ ನನಗೆ ತೋಚಲಿಲ್ಲವಲ್ಲಾ! ಈ ನಿನ್ನ ಸಂಕಟ
ವನ್ನು ಪರಿಹರಿಸಿ, ನಮ್ಮೆಲ್ಲರನ್ನೂ ಈ ಘೋರ ವಿಪತ್ತಿನಿಂದ ಪಾರು
ಮಾಡಿಸತಕ್ಕವರಾರು? ದೈವವೇ! ನಿನಗಾದರೂ ಕರುಣವಿಲ್ಲವೆ?

ಗೋಪಿಯರು:- ಹಾ! ವಿಧಿ ವಿಲಾಸವೆಷ್ಟು ಕ್ರೂರವಾಗಿ ಪರಿಣ
ಮಿಸಿತು. ಇನ್ನು ನಾವು ಯಾರ ಅಂದ ಚಂದಗಳನ್ನು ನೋಡಬೇಕು?
ಯಾರಿಗಾಗಿ ನಾವು ಜೀವಿಸಿರುವೆವೋ ಅಂತಹ ನಮ್ಮ ಪ್ರಾಣಧನವೇ
ಅಪಾಯಕ್ಕೆ ಗುರಿಯಾಗಿರುವಲ್ಲಿ ನಾವು ಜೀವಿಸಿದ್ದು ಫಲವೇನು ?

ಗೋಪರು:--ಆಕಟಾ! ಶ್ರೀ ಕೃಷ್ಣನಿಗಪಾಯವುಂಟಾದರೆ ಯಶೋ
ದೆಯು ಜೀವಿಸಲಾರಳು. ಯಶೋದೆ ಇಲ್ಲದಮೇಲೆ ನಂದನು ಕ್ಷಣ
ಮಾತ್ರವೂ ಜೀವಿಸಲಾರನು. ಈ ಗೋಪಿಯರಾದರೋ ಯಶೋದೆ
ಗಿಂತಲೂ ಮೊದಲೇ ಪರಲೋಕದ ಮಾರ್ಗವನ್ನು ನೋಡುತ್ತಿರುವರು.
ಇವರೆಲ್ಲರೂ ಗತಿಸಿದ ಮೇಲೆ ನಾವುಗಳು ಮಾತ್ರ ಜೀವಿಸಿ ಫಲವೇನು?
ಹಾ! ಕಾಳ ಸರ್ಪವೇ ! ನಂದ ಗೋಕುಲವನ್ನು ನಿರ್ಮೂಲಮಾಡುವುದ
ಕ್ಕಾಗಿಯೇ ನೀನೀ ಮಡುವಿನಲ್ಲಿ ಸೇರಿದ್ದೆಯಾ?

ಯಶೋದೆ:-ನಾಥಾ ! ಕೃಷ್ಣನಿರುವ ಈ ಮಡುವಿನಲ್ಲೇ
ನಾನೂ ಬಿದ್ದು ಪ್ರಾಣಗಳನ್ನು ತೊರೆಯುವೆನು.