M0 ಕೃಷ್ಣ ಲೀಲೆ ಪತಿಗಳು ಕ್ಷೇಮವಾಗಿರುವರೆ ? ನಿಮ್ಮ ಮಕ್ಕಳು ಆರೋಗ್ಯವಾಗಿರು ವರೆ ? ನಮಗಾಗಿ ಬಹಳ ಶ್ರಮಪಟ್ಟು ಬಂದಿರಲ್ಲಾ ! ಸುಶೀಲೆ:- ಸೀ!! ಇಂದೀವರಶ್ಯಾಮವಂದಿತಸುತ್ರಾಮ ಕರುಣಾಲವಾಲ ಭಾಸುರಕಪೋಲ | ನವಪದ್ಮಲೋಚನ ಭವಬಂಧಮೋಚನ ಭರಿತಶುಭಾಕಾರ ದುರಿತದೂರ ! ಆಶ್ರಿತಮಂದಾರ ಆದ್ಯಂತವಿರಹಿತ ವೇದಾಂತಗೋಚರ ವಿಪುಲಸಾರ | ಖಗಕುಲಾಧಿಪಯಾನಕೌಶೇಯಹರಿಧಾನ ನತಗುಣಗಂಭೀರನಾಗಶಯನ || ಗೀ || ಮಕರಕುಂಡಲ ಸದ್ರೂಷಮ೦ಜುಭಾಷ | ನಿರುಪಮಾಕಾರ ಕ್ಷೀರಸಾಗರ ವಿಹಾರ | ಭೂಗುಣಸಾಂದ್ರ ಯದುಕುಲಾಂಭೋದಿಚ೦ದ್ರ | ಕೃಷ್ಣ ಶ್ರೀಕೃಷ್ಣ ಜಗದೇಕಸಾರಭೌಮ || ವರಮಾತ್ಮನೆ ! ಯಜ್ಞಯಾಗ ಜನತವಾದಿಗಳೆಲ್ಲವೂ ಯಾರನ್ನು ಕುರಿತು ಮಾಡಲ್ಪಡುವುವೋ ಅಂತಹ ಸರ್ವಶಿರನಾದ ನಿನ್ನ ಕೃಪಾ ಕಟಾಕ್ಷವಿರುವಲ್ಲಿ ನಮಗೆ ಸಂತೋಷಕ್ಕೇನು ಕಡಿಮೆ ? ಭಗವಂತನೇ ನಿನ್ನ ಅವ್ಯಾಜಾನುರಾಗದಿಂದ ನಾವೆಲ್ಲರೂ ಕ್ಷೇಮವಾಗಿರುವವು. ಶ್ರೀಕೃಷ್ಣ:-ನಾರೀಮಣಿಯರೆ! ಆತ್ಮಾನಾತ್ಮ ಪರಿಜ್ಞಾನವನ್ನು ಚನ್ನಾಗಿ ಬಲ್ಲವರಾದ ನಿಮಗೆ ನಾನೇನು ಹೇಳಬಲ್ಲೆನು, ನಿಮ್ಮ ಹಸ್ತ ಗಳಿಂದಲೇ ನಮ್ಮೆಲ್ಲರಿಗೂ ಈ ಅನ್ನವನ್ನು ಬಡಿಸಿರಿ, [ಎಂದು ಸೂಚಿಸಿ ಶ್ರೀಕೃಷ್ಯನು ಗೋಪಾಲಕರನ್ನೆಲ್ಲಾ ಸುತ್ತ ಲೂ ಕೂಡಿಸಿ ತಾನು ಮಧ್ಯದಲ್ಲಿ ಬಲರಾಮನೊಂದಿಗೆ ಕೂಡುವನು. ಸುಶೀಲಾದೇವಿಯ ಅರುಣಾದೇವಿಯ ಎಲ್ಲರಿಗೂ ಬಡಿಸುವರು. ಎಲ್ಲರೂ ತೃಪ್ತಿಕರವಾಗಿ ಭುಂಜಿಸಿ ಯಮುನೆಯಲ್ಲಿ ಕೈಕಾಲುಗಳನ್ನು ಶುದ್ದಿ ಮಾಡಿಕೊಳ್ಳುವರು.] ಶ್ರೀಕೃಷ್ಯ-ಪಾವನ ಚರಿತ್ರಯರಾದ ಮುನಿಪತ್ನಿಯರೆ ! ನಿಮ್ಮ ದಯಾಗುಣವು ಪ್ರಶಂಸನೀಯವಾದುದು. ನೀವಿನ್ನು ಆಕ್ರ ನಕ್ಕೆ ತರಳಿ ನಿನ್ನ ಪತಿಗಳೊಂದಿಗೆ ಸುಖವಾಗಿ ಬಾಳಿರಿ, ಕಾಲಕ್ರಮ ದಲ್ಲಿ ನಿಮಗೆ ಮಹೋನ್ನತವಾದ ಪರಮಾರಸಿದ್ದಿಯುಂಟಾಗುವುದು. ಸುಶೀಲೆ, ಅರುಣೆ:-ಮಹದಾಜ್ಞೆ ! [ಎಂದು ಕೈಮುಗಿದು ವಂದಿಸುವರು.]
ಪುಟ:ಶ್ರೀ ಕೃಷ್ಣ ಲೀಲೆ.djvu/೧೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.