ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣಲೀಲೆ ಕರವಾದ ನಿನ್ನ ಮುಗುಳ್ಳಗೆ, ಪ್ರೇಮಪೂರಿತವಾದ ನಿನ್ನ ನೋಟಗಳು, ನೆನೆದ ಮಾತ್ರಕ್ಕೆ ಪರವಾನಂದವನ್ನು ಟುಮಾಡುವ ನಿನ್ನ ಲೀಲೆಗಳು, ಮನಮೋಹನಕರವಾದ ನಿನ್ನ ಏಕಾಂತ ವಿಲಾಸಗಳು, ಮುಂತಾದ ಇವೆಲ್ಲವೂ ನಮ್ಮ ಮನಸ್ಸನ್ನು ಕಲಕಿಸಿರುವುದರಿಂದ ನಿನ್ನ ಕಥಾಶ್ರವಣ ಮಾತ್ರದಿಂದಲೇ ತೃಪ್ತರಾಗಿರುವುದು ಸಾಧ್ಯವಲ್ಲದ ವಿಷಯವು! ಕಾಂಚನಮಾಲೆ:- ಶ್ಲ ! ಚಲಸಿಯ ಜಾತ್, ಚಾರರ್ಯಪರ್ಶ | ನಳಿನಸುಂದರಂ, ನಾಥತೇಪದಂ || ಶಿಲತೃಣಾಂಕುರೈಃ, ಸೀದತೀತಿನಃ | ಕಲಿಲತಾಂಮನಃ, ಕಾಂತಗಚ್ಛತಿ || ಶ್ರೀಕೃಷ್ಣಾ! ಪ್ರಾಣಕಾಂತಾ ನೀನು ಗೋವುಗಳನ್ನು ಮೇಯಿ ಸುವುದಕ್ಕಾಗಿ ಗೋಕುಲದಿಂದ ಕಾಡಿಗೆ ಹೋದಾಗ ಕಾಡಿನಲ್ಲಿರುವ ಹುಲ್ಲು ಕಡ್ಡಿಗಳು ಕಾಲಿಗೆ ಚುಚ್ಚುವುದರಿಂದ ನಿನ್ನ ಕಾಲುಗಳೆಷ್ಟು ನೋಯುವುವೋಯೆಂದು ನಾವು ವ್ಯಥೆಪಡಲಿಲ್ಲವೇ ? ಅದನ್ನೆಲ್ಲಾ ನೀನ ರಿಯೆಯಾ ? ಇಂತು ನಿನ್ನಲ್ಲಿ ಆಸಮಾನವಾದ ಪ್ರೇಮವನ್ನಿಟ್ಟು ಕ್ಷಣ ಕ್ಷಣಕ್ಕೂ ಮರುಗುತ್ತಿರುವ ನನ್ನನ್ನು ವಂಚಿಸಿ ನೀನು ಈತರನಾಗಿ ನನ್ನ ಕಣ್ಣಿಗೆ ಕಾಣದೆ ಹೋಗಬಹುದೆ ? ಮಂಜುವಾಣಿ:-ಶ್ಲೋ ॥ ದಿನ ಸರಿಯೇ, ನೀಲ ಕುಂತಿಃ | ವನರುಹಾನನಂ, ಬಿಭ್ರದಾವೃತಂ | ವನರಜಸ್ವಲಂ, ದರರ್ಯಮುಹುಃ | ಮನಸಿನಸ್ಸ ರ೦, ವೀರಯಚ್ಛತಿ ॥ ಶ್ರೀಕೃಷ್ಣಾ ! ಗೋಧೂಳಿ ಸಮಯವಾದ ಸಂಧ್ಯಾಕಾಲದಲ್ಲಿ ನೀನು ಗೋವುಗಳನ್ನಟ್ಟಿಕೊಂಡು, ಕಾಡಿನಿಂದ ಹಿಂದಿರುಗಿ ಮನೆಗೆ ಬರುವಾಗ, ಭ್ರಮರಗಳನ್ನು ಧಿಕ್ಕರಿಸತಕ್ಕ ನಿನ್ನ ಮುಂಗುರುಳುಗಳು ಗಾಳಿಯಿಂದ ಚೆದರಿಸಲ್ಪಟ್ಟು ಆಡುತ್ತಿರಲು, ಗೋವುಗಳ ಮಂದೆಯಲ್ಲಿ ಹುಟ್ಟಿದ ಧೂಳಿಯಿಂದ ಆವೃತವಾದ ನಿನ್ನ ಮುಖಾರವಿಂದವು ನಮ್ಮ ಮನಸ್ಸಿಗೆ ನಿತಾಂತ ವಾದ ಆನಂದವನ್ನು ಬೀರುತ್ತಿದ್ದಿತು, ಇಂತು ನಿನ್ನ ಮುಖ ಸಂದರ್ಶನದಿಂದ ನನ್ನ ಮನಸ್ಸುಗಳನ್ನಾ ಕರ್ಷಿಸಿದ ಜಗದೆ ಕ