ಈ ಪುಟವನ್ನು ಪ್ರಕಟಿಸಲಾಗಿದೆ



೧೪
ಕೃಷ್ಣಲೀಲೆ

  
ಎಲೌ ಪತಿವ್ರತೆಯಾದ ದೇವಕಿಯೇ ! ನನ್ನ ಜೀವಿತ ಸೌಖ್ಯಕ್ಕೆ
ಕಾರಣಭೂತವಾದ ಈ ಮಂಗಳಸೂತ್ರವನ್ನು ನಿನ್ನ ಕೊರಳಿಗೆ ಕಟ್ಟು
ವೆನು. ನಾವಿಬ್ಬರೂ ಚಿರಕಾಲ ಸುಖವಾಗಿರೋಣ !

(ದೇವಕಿಯು ವಸುದೇವನ ಕಂಠಕ್ಕೆ ಪುಷ್ಪಹಾರವನ್ನು ಹಾಕುವಳು.)

ಸುಮಂಗಲಿಯರು:- ರಾಗ-ಬ್ಯಾಗ್-ಆದಿ.
     ವರಸಂತೋಷದಿ ದಂಪತಿಗಳ್ | ನೆರೆ ಸುಖದಿ೦ಬಾಳಲಿ ಚಿರಕಾಲ೦ |ಪ||
     ಕರುಣಾಕರ ಲಕ್ಷ್ಮೀರಮಣಂ | ಪರಿಪೂರ್ಣ ಕಟಾ(ಕ್ಷ) ದಿ ಪಾಲಿಸಲಿ ||ಅ-ಪ||
     ವಾಣೀಕಮಲಾಸನರ೦ತೆ | ವರ ಗೌರೀಶಂಕರರಿರುವಂತೆ | ಮಾಣದೆ ಸುಖವಾ
     ಗಿರಲಿವರು | ಶಿವರಾಮ ವರದನಾದರದಿಂದಂ ||ವರ||

      (ಎಂದು ಸುಮಂಗಲಿಯರು ಆರತಿ ಎತ್ತುವರು.)
      ದೇವಕಿಯ ಹಿರಿಯರಿಗೆಲ್ಲರಿಗೂ ನಮಸ್ಕರಿಸುವಳು.

       ಪುರೋಹಿತರು-ದೀರ್ಘ ಸುಮಂಗಲೀಭವ ! ಸುಪುತ್ರವತೀಭವ !
        (ನಂತರ ವಸುದೇವನು ವಂದಿಸುವನು.)

       ಪುರೋಹಿತರು:- ಆಯುಷ್ಮಾನ್ ಭವ | (ಎಂದಾಶೀರ್ವದಿಸುವರು)

       ಉಗ್ರಸೇನ:- (ಕಂಸನನ್ನು ನೋಡಿ) ಮಗನೇ ! ನಿನ್ನ ತಂಗಿ
ಯಾದ ಈ ದೇವಕಿಯನ್ನು ಅತ್ತೆಯ ಮನೆಗೆ ಕಳುಹಿಸಬೇಕಾಗಿರುವು
ದರಿಂದ ಸಮಸ್ತ ಮರ್ಯಾದೆಗಳೊಂದಿಗೆ ಈ ದಂಪತಿಗಳನ್ನು ರಥದಲ್ಲಿ
ಕೂಡಿಸಿ, ನೀನು ಸೈನ್ಯ ಸಮೇತನಾಗಿ ಹೊರಟು ಅವರನ್ನು ಸುಖವಾಗಿ
ಅವರ ಪಟ್ಟಣದಲ್ಲಿ ಬಿಟ್ಟು ಬರುವವನಾಗು!

        ಕಂಸ:-ಜನಕಾ | ತಮ್ಮಾಜ್ಞೆಯಂತೆ ನಡೆಯಲು ಸಿದ್ಧನಾಗಿರು
ವೆನು. ನನ್ನ ಮುದ್ದು ಸೋದರಿಯನ್ನೂ, ಭಾವನನ್ನೂ ರಥದಲ್ಲಿ
ಕೂಡಿಸಿ, ನಾನೇ ಸಾರಥ್ಯವನ್ನು ವಹಿಸುವೆನು |

         ಉಗ್ರಸೇನ:-ಕುಮಾರಾ | ನಿನ್ನಿಷ್ಟದಂತೆ ಮಾಡು!!
         
         ಕಂಸ:-ಅಪ್ಪಣೆ !

            (ಎಲ್ಲರೂ ನಿಷ್ಕ್ರಮಿಸುವರು.)

               ----------------