ವಸುದೇವ:-ಹಾಗೆ ನಿನಗೆ ಸಂಶಯ ವಿರುವ ಪಕ್ಷಕ್ಕೆ, ಈಕೆಗೆ
ಎಂಟುಮಂದಿ ಶಿಶುಗಳಾಗುವ ಪರ್ಯಂತವೂ ನಾವು ನಿನ್ನ ಮನೆಯಲ್ಲಿ
ಯೇ ಇರುವೆವು.
ಕಂಸ:-ಒಳ್ಳೆಯದು, ಆಗಲಿ, ನೀವಿಬ್ಬರೂ ನಮ್ಮ ಮನೆಯಲ್ಲಿ
ಯೇ ಇರಬೇಕು. ಮತ್ತು ದಿವಸಕ್ಕೊಂದು ಸಾರಿಯಾದರೂ ನನ್ನನ್ನು
ಕಾಣಿಸಿಕೊಳ್ಳಬೇಕು.
ವಸುದೇವ- ನಿನ್ನಿಷ್ತದಂತಾಗಲಿ.
ಕಂಸ:- ತೆರಳಿರಿ. ಮಧುರೆಗೆ ಹೋಗುವ.
ವಸುದೇವ- ಅಪ್ಪಣೆ.
(ಮೂವರೂ ಮಧುರೆಗೆ ತೆರಳುವರು.)
*** *** *** *** ** *** *** ***
ದ್ವಿತೀಯಾಂಕಂ--ತೃತೀಯ ರಂಗಂ.
*** *** *** *** ** *** *** ***
ಪ್ರದೇಶ:- ಮಧುರಾಪುರ.
ಕಂಸನ ದರ್ಬಾರ್.
ಕಂಸನು ಸಿಹ್ಮಾಸನದ ಮೇಲೆ ಕುಳಿತಿರುವನು. ಮಂತ್ರಿ ಸೇನಾ
ಪತಿಗಳು ಅವರವರ ಪೀಠಗಳಲ್ಲಿ ಕುಳಿತಿರುವರು. ಅಘಾಸುರ, ಧೇನು
ಕಾಸುರ, ವತ್ಸಾಸುರ, ಚಾಣೂರ ಮುಂತಾದವರು ಒಂದೇ ಧ್ವನಿ
ಯಿಂದ ಕಂಸನನ್ನು ಹೊಗಳುತ್ತಿರುವರು.
ಸೀ|| ಶ್ರೀಮದಾಖಂಡಲೋದ್ದಂಡ ಭೂಮಂಡಲಾಧೀಶ ಸಂಪೂರ್ಣ ಸಾಮ್ರಾಜ್ಯ
ಮಸ್ತು| ದೇಶದೇಶಾಂತರಾಧೀಶ ಸಂಪೂಜಿತಾ ಶೇಷ ಸಮಂಚಿತ ಸೌಖ್ಯಮಸ್ತು|
ಶೌರ್ಯ ಸಾಹಸ ವಿಕ್ರಮೌದಾರ್ಯ ವೈಭವೋಪೇತ ವಿಸ್ತಾರ ದಿಗ್ವಿಜಯ ಮಸ್ತು|
ದೇವ ಗಂಧರ್ವ ಕಿನ್ನರ ಯಕ್ಷ ರಾಕ್ಷಸ ಪ್ರಮುಖ ಸನ್ನುತ ನಿತ್ಯಕೀರ್ತಿರಸ್ತು||
ಗೀ|| ಪ್ರಣಮಿತಾಶೇಷ ಲೋಕೈಕ ಪ್ರಭುವರೇಣ| ಶತ್ರು ನಿರ್ಮೂಲನಾಧಿಕ ಶಕ್ತಿಧುರ್ಯ|
ವೀರವೀರಾಧಿವೀರ ದಾನವ ಸಮೇತ | ಸ್ವಸ್ತಿ ತುಭ್ಯಂ ಸದಾ ಕಂಸ ಸಾರ್ವಭೌಮ ||
ಪುಟ:ಶ್ರೀ ಕೃಷ್ಣ ಲೀಲೆ.djvu/೩೬
ಈ ಪುಟವನ್ನು ಪ್ರಕಟಿಸಲಾಗಿದೆ
ದ್ವಿತೀಯಾಂಕಂ
೨೧