೨೩ ದ್ವಿತೀಯಾ೦ಕಂ.
ಸಂಧ, ಶಿಶುಪಾಲ, ದಂತವಕ್ತ್ರಾದಿಗಳು ತಮ್ಮ ತಮ್ಮ ಸೈನ್ಯಗಳೊಂ
ದಿಗೆ ನಮಗೆ ಸಹಾಯವಾಗಿ ಬರಲು ಸಿದ್ಧರಾಗಿರುವರು. ನಮ್ಮೀ ಮಂ
ತ್ರಾಲೋಚನೆಯನ್ನು ಕುರಿತು ಅವರೆಲ್ಲರಿಗೂ ಪತ್ರ ಮೂಲಕ ತಿಳಿಸಿರಿ.
ಮಿಕ್ಕ ವಿಷಯಗಳನ್ನು ನಾಳೆಯ ದಿವಸ ಮಾತನಾಗೋಣ
ಮಂತ್ರಿ ಸೈನಾಧಿಪತಿಗಳು:- ಪ್ರಭುವೇ ? ಚಿತ್ತಾನುಸಾರ ನಡೆ
ಯಲು ಸಿದ್ಧರಾಗಿರುವೆವು
ಕಂಸ:-ನಾನಿನ್ನು ತೆರಳುವೆನು.
ಎಲ್ಲರೂ:-ಅಪ್ಪಣೆ !
ಕಂಸನು ಅಂತಃಪುರದ ಮಾರ್ಗವಾಗಿ ತೆರಳುವನು. ಮಿಕ್ಕವರು
ತಮ್ಮ ತಮ್ಮ ಮನೆಗಳನ್ನು ಕುರಿತು ಹೋಗುವರು.
** **
ದ್ವಿತೀಯಾಂಕಂ - ಚತುರ್ಥರಂಗಂ
ಪ್ರದೇಶ:- ಕಂಸನ-ಅಂತಃಪುರದ ಮುಂಭಾಗ.
ಕಂಸ:-ನಾನೆಷ್ಟು ಧೈರ್ಯವಾಗಿರೋಣವೆಂದರೂ ಅಶರೀರವಾ
ಣಿಯ ಮಾತುಗಳು ನನ್ನನ್ನು ಕ್ಷಣಕ್ಷಣಕ್ಕೂ ಬಾಧಿಸುತ್ತಿರುವುವು.
ದೇವಕಿಯ ಅಷ್ಟಮ ಗರ್ಭಜನಿಂದ, ನಾನು ನಿಜವಾಗಿಯೂ ಸಾ
ಯುವೆನೇ ?
[ಎಂದು ಪೇಚಾಡುತ್ತ ಮೆಲ್ಲನೆ ಹೆಜ್ಜೆಯಿಡುತ್ತಿರುವಾಗೆ
ನಾರದ ಮಹರ್ಷಿಗಳು ವೀಣಾಗಾನ ಮಾಡುತ್ತ ಪ್ರವೇಶಿಸುವರು.]
ನಾರದ:- ರಾಗ- ಆರಭಿ.
ಶ್ರೀಮದಖಿಲಾಂಡ ಕೋಟಿ ಬ್ರಹ್ಮಾಂಡನಾಯಕಂ, ಸಕಲ ನಿಗಮಾಗಮ
ಧರ್ಮಮೂಲಂ, ಸನಕ ಸನಂದನಾದಿ ಯೋಗೀ೦ದ್ರ ಗೀಯ ಮಾನಂ, ಸುರ ಕಿನ್ನರ ಕಿಂಪು
ರುಷ ವಿದ್ಯಾಧರ ಗರುಡ ಗಂಧರ್ವ ನಾಗ ನಭಶ್ವರಾದಿ ಗೀರ್ವಾಣ ಸ೦ಸ್ತೂಯಮಾನಂ,
ನಿಖಿಲ ಜಗದುದಯ ಹೇತುಭೂತಂ, ಅಪಾರಗಭೀರ ಪರಮಾದ್ಭುತ ಕ್ಷೀರಸಾ
ಗರನಿಕೇತನಂ, ಶರಚ್ಚಂದ್ರ ಚಂದ್ರಿಕಾ ಸುಂದರ ಶೇಷಪರ್ಯಂಕ ವಿಲಾಸಂ, ಅರ ವಿಂದವಾಸಿನೀ ವಸುಂಧರಾ ಸುಂದರೀ ಸಮೇತಂ, ಶಂಖ ಚಕ್ರ ಕೌಮೋದಿಕೀ ನಂದ ಕಾದಿ ದಿವ್ಯಾಯುಧ ಹಸ್ತಂ, ಚತುರ್ಭುಜ ಪ್ರಶಸ್ತ೦, ಅಮೂಲ್ಯ ರತ್ನಾಭರಣಾ
ಲಂಕಾರ ವಿರಾಜಮಾನಂ, ಪೀತಾಂಬರಧರಂ, ರವಿಕೋಟಿ ಭಾಸಮಾನಂ, ಸ್ವಪ
ಪುಟ:ಶ್ರೀ ಕೃಷ್ಣ ಲೀಲೆ.djvu/೩೮
ಈ ಪುಟವನ್ನು ಪ್ರಕಟಿಸಲಾಗಿದೆ