ಈ ಪುಟವನ್ನು ಪ್ರಕಟಿಸಲಾಗಿದೆ

೨೮ಕೃಷ್ಣಲೀಲೆ

ನಾರದ:-ನಿಜ | ಕೆಲವರು ಸ್ವಕಾರ್ಯಕ್ಕಾಗಿ ಸಾಯುವರು;
ಕೆಲವರು ಪರಕಾರ್ಯಕ್ಕಾಗಿ ಸಾಯುವರು; ಕೆಲವರು ಸ್ಪಕಾರ ಪರಕಾ
ರ್ಯಗಳೆರಡಕ್ಕಾಗಿಯೂ ಸಾಯುವರು. ಕೆಲವರು ಸಾವಿಗಾಗಿ ಎದುರು
ನೋಡುತ್ತಿದ್ದು ಸಾಯುವರು. ಕೆಲವರು ಸಾವನ್ನು ಬರಮಾಡಿಕೊಂ
ಡು ಸಾಯುವರು; ಕೆಲವರು ತಾನಾಗಿಯೇ ಬರುವ ಸಾವಿಗಾಗಿ ಸಾ
ಯುವರು; ಕೆಲವರು ಸಾವು ಬರುವಂತೆ ಮಾಡಿಕೊಂಡು ಸಾಯುವರು;
ಕೆಲವರು ದ್ವೇಷಕ್ಕಾಗಿ ಸಾಯುವರು; ಕೆಲವರು ಶೌರ್ಯಕ್ಕಾಗಿ ಸಾ
ಯುವರು; ಕೆಲವರು ಕ್ರೋಧಕ್ಕಾಗಿ ಸಾಯುವರು; ಕೆಲವರು ಮೋಹ
ಕ್ಕಾಗಿ ಸಾಯುವರು; ಕೆಲವರು ತಿಂದಿರಲಾರದೆ ಸಾಯುವರು; ಕೆಲವರು
ಬದುಕಲಾರದೆ ಸಾಯುವರು; ಕೆಲವರು ಈರ್ಷ್ಯೆಗಾಗಿ ಸಾಯುವರು;
ವರಂತು ಕೆಲವರು ಹೊನ್ನಿಗಾಗಿಯೂ, ಕೆಲವರು ಹೆಣ್ಣಿಗಾಗಿ
ಯೂ, ಕೆಲವರು ಮಣ್ಣಿಗಾಗಿಯೂ ಸಾಯುವರು; ಇದೀಗ ಮೃತ್ಯು
ಪುರಾಣದಲ್ಲಿ ಮರಣ ವಿಧಾನ ಪ್ರಕರಣವು!

ಕಂಸ:-ಹಾಗಾದರೇ ನಾನು ಹೇಗೆ ಸಾಯುವೆನು ?
ನಾರದ-ಅದು ಪರಿಷ್ಕಾರವಾಗಿಯೇ ತೀರ್ಮಾನವಾಗಿರುವುದಲ್ಲಾ!

ಕಂಸ-(ಕಳವಳದಿಂದ) ಹೇಗೆ ಸಾಯುವನೆಂದು ತೀರ್ಮಾನವಾಗಿರುವುದು ?

ನಾರದ:- ನಿನ್ನ ತಂಗಿಯಾದ ದೇವಕಿಯ ಅಷ್ಟಮಗರ್ಭದಲ್ಲಿ
ಹುಟ್ಟುವ ಶಿಶುವಿನಿಂದ ಸಾಯುವೆಯೆಂದು !

ಕಂಸ:-(ಮತ್ತಷ್ಟು ಕಳವಳದಿಂದ) ಹಾಗೆಂದು ತೀರ್ಮಾನ
ಮಾಡಿದವರು ಯಾರು ?

ನಾರದ:-ಅಶರೀರವಾಣಿಯು !
ಕಂಸ:-(ದೀನನಾಗಿ) ನಾರದರೇ ! ಅದನ್ನು ತಾವೆಲ್ಲಿ ಕೇಳಿದಿರಿ?
ನಾರದ:-ಈ ಪ್ರಾಂತ್ಯದಲ್ಲಿಯೇ ಕೇಳಿದೆನು?
ಕಂಸ:-(ಆಶ್ಚರ್ಯದಿಂದ) ಈ ಪ್ರಾಂತ್ಯವೆಂದರೇ ಎಲ್ಲಿ?
ನಾರದ:-ಇಲ್ಲಿಯೆ?