ಈ ಪುಟವನ್ನು ಪ್ರಕಟಿಸಲಾಗಿದೆ

೩೬ಕೃಷ್ಣಲೀಲೆ.

ಮಾಡುವ ದುಷ್ಕೃತ್ಯಗಳಿಂದ ಅವನು ಕ್ಷಿಪ್ರದಲ್ಲಿಯೇ ವಿನಾಶವಾಗಬ
ಹುದೆಂದು ತೋರುವುದು, ಧರ್ಮಾಧರ್ಮಗಳನ್ನು ವಿಚಾರಿಸತಕ್ಕ ಸರ್ವ
ಸಾಕ್ಷಿಯೊಬ್ಬನಿರುವನಲ್ಲವೆ ! ಆತನ ಸಂಕಲ್ಪವಿದ್ದಂತಾಗಲಿ! ನಾನಿನ್ನು
ಸಾವಕಾಶಮಾಡದೆ, ದೇವಕೀ ವಸುದೇವರಿಗೆ ಆಹಾರವನ್ನು ಸಿದ್ಧಪಡಿಸು
ವೆನು.
           [ಎಂದು ನಿಷ್ಕ್ರಮಿಸುವಳು].

     ಪ್ರದೇಶ:-ಮಧುರಾಪಟ್ಟಣದ ಕಾರಾಗೃಹ.

   [ದೇವಕೀ ವಸುದೇವರು ಸೆರೆಯಲ್ಲಿ ಬಂಧಿಸಲ್ಪಟ್ಟು ಚಿಂತಿಸುತ್ತಿರುವರು.]

ದೇವಕಿ:- ರಾಗ-ಧನ್ಯಾಸಿ-ಅಟ.

ಕರುಣಾಕರ ದೇವದೇವಾ!||ಪ||
ನರಹರಿ ಸರ್ವೋತ್ತಮ ದಿವ್ಯಭಾವಾ||ಕರು||ಅಪ||
ಕಂಸನೀಪರಿ ಕಠಿನಕೋಪದಿ, ಹಿಂಸೆಗೈಯ್ಯುತಲಿರ್ಪನಾ ಕುಲಪಾಂಸನನು ಸಂಹರಿಸು
ಬೇಗನೆ, ಹಂಸವಾಹನ ಮಿತ್ರ ಬೇಡುವೆ|| ಕರು ||

    ಆಹಾ! ಪ್ರಪಂಚದಲ್ಲಿ ನನ್ನಂತಹ ನಿರ್ಭಾಗ್ಯರು ಮತ್ತಾರಾದರೂ
ಇರುವರೆ ? ಒಡಹುಟ್ಟಿದವಳಾದ ತಂಗಿಯನ್ನು ಧನಕನಕವಸ್ತು ವಾಹ
ನಾದಿಗಳಿಂದ ಸತ್ಕರಿಸತಕ್ಕೆ ಆಗ್ರಜನಿಂದಲೇ ಆತಿ ನೀಚವಾದ ಕಷ್ಟ
ನಷ್ಟಗಳನ್ನು ಅನುಭವಿಸುತ್ತಲಿರುವ ಭಾಗ್ಯಹೀನಳು ನಾನೊಬ್ಬಳಲ್ಲ
ದೆ, ಈಲೋಕದಲ್ಲಿ ಮತ್ತಾರಾದರೂ ಇರುವರೆ ? ಹರಿಹರೀ ! ಈ ದುರ
ದೃಷ್ಟವು ನನ್ನೊಬ್ಬಳೊಂದಿಗೇ ಪರಿಸಮಾಪ್ತಿ ಹೊಂದಲಿ. ಇಂತಹ
ಘೋರಕಷ್ಟವು ಮತ್ತಾವ ರಮಣಿಗೂ ಬಾರದಿರಲಿ. ಹಾ ! ದೈವವೇ,
ಈವರಿವಿಗೆ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಆರು ಮಂದಿ ಮಕ್ಕಳೂ ನನ್ನ
ಕಣ್ಣೆದುರಿನಲ್ಲಿಯೇ ದುರಾತ್ಮನಾದ ಕಂಸನಿಂದ ಹತನಾದುವು. ಏಳ
ನೆಯ ಸಾರಿ ಗರ್ಭಸ್ರಾವವಾಯಿತು. ಈಗ ಪುನಃ ಪೂರ್ಣಗರ್ಭವತಿ
ಯಾಗಿರುವೆನು. ಆದರೇನುಫಲ ? ಯಾವ ಸುಖವನ್ನು ಪಡೆಯಬೇ
ಕು? ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳನ್ನು, ಕಣ್ಣಾರೆ ನೋಡಿ, ಕೈ
ಯ್ಯಾರ ಸಲಹಿ, ಮುದ್ದಾಡಿ ಆನಂದಿಸುವ ಭಾಗ್ಯವು ನನ್ನ ಫಣೆಯಲ್ಲಿ ಬರೆ
ಯಲಿಲ್ಲ. ಗರ್ಭವತಿಯಾದ ನನಗೆ ಯಾವ ವಿಧವಾದ ಸುಖವೂ ಇಲ್ಲ