೩೮ಕೃಷ್ಣಲೀಲೆ
ಜನ್ಮದಲ್ಲಿ ನಾವು ಎಷ್ಟು ಶಿಶುಹತ್ಯೆಗಳನ್ನು ಮಾಡಿದ್ದೆವೋ ಆ ವಾಪಕರ್ಮದ
ಫಲವನ್ನು ಈಗ ಅನುಭವಿಸುತ್ತಿರುವೆವು ಮಾಡಿದ ಕರ್ಮವು ಬೇಡವೆಂ
ದರೆ ಹೋಗುವುದೆ? ಈ ಸಮಯದಲ್ಲಿ ಮನೋಧೈರ್ಯವೊಂದಲ್ಲದೆ ನಮ
ಗೆ ಮತ್ತಾವ ಪರಿಹಾರವೂ ಸಾಧ್ಯವಿಲ್ಲವು. ಪ್ರೇಯಸೀ ! ಏಳು !
ಏಳು !
ದೇವಕಿ:-ನಾಥಾ ! ದುರ್ಭರವಾದ ಗರ್ಭವೇದನೆಯು ತಾಳ
ಲಶಕ್ಯವಾಗಿರುವುದು, ನಾನೇನು ಮಾಡಲಿ?
ವಸುದೇವ:- ಸಾಧ್ವೀ ! ದುಃಖಿಸಬೇಡ. ಸ್ವಲ್ಪ ಸೈರಿಸು. ದೈವ
ವಿಲಾಸ ಈ ರೀತಿಯಾಗಿರುವಲ್ಲಿ ನಾವು ಮಾಡತಕ್ಕುದೇನು ? ನಮ್ಮ
ಯತ್ನವೇನಿದೆ?
[ಎಂದು, ವಸುದೇವನು ಸ್ವಲ್ಪ ಹೊತ್ತು ತನ್ನಲ್ಲಿ ಚಿಂತಿಸುತ್ತಿ
ದ್ದು, ಕೈಮುಗಿದು ದೇವರನ್ನು ಪ್ರಾರ್ಥಿಸುವನು.]
ಶ್ಲೋ|| ತ್ವಮೇವ ಮಾತಾಚ ಪಿತಾತ್ವಮೇವ । ತ್ವಮೇವ ಬಂಧುರ್ಗತಿಶ್ಚತ್ವ ಮೇವ||
ತ್ವಮೇವ ವಿದ್ಯಾದ್ರವಿಣಂತ್ವ ಮೇವ| ತ್ವಮೇವ ಸರ್ವಂ ಮಮ ದೇವ ದೇವ|
ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ | ತಸ್ಮಾತ್ಕಾರುಣ್ಯ ಭಾವೇ
ನ, ರಕ್ಷರಕ್ಷ ಜನಾರ್ದನ||
ದೇವಾ ! ದೇವಾದಿದೇವಾ ! ದೇವತಾ ಸಾರ್ವಭೌಮಾ| ಸಹಿಸಲ
ಶಕ್ಯವಾದ ಈ ಘೋರ ಸಂಕಟದಿಂದ ನಮ್ಮನ್ನುದ್ಧರಿಸು. ಈ ವಿಪತ್ತಿ
ನಿಂದ ನಮ್ಮನ್ನು ಪಾರುಮಾಡಿ ರಕ್ಷಿಸತಕ್ಕ ಕರ್ತನು ನೀನಲ್ಲದೆ ಮ
ತ್ತಾರು ? ನಮಗೆ ನೀನೇ ತಾಯಿಯು, ನೀನೇ ತಂದೆಯು, ನೀನೇ
ಬಂಧುವು, ನೀನೇ ವಿದ್ಯೆಯು, ನೀನೇ ಧನವು, ನೀನೇ ಗತಿಯು, ನೀ
ನೇ ಮತಿಯು, ಸರ್ವವೂ ನೀನೇ. ನಿನ್ನ ಹೊರತು ಅನ್ಯರಿಲ್ಲವು
ಅನಾಥರಕ್ಷಕನೆ | ಅಪ್ರಮೇಯನೆ ! ಆಶ್ರಿತಮಂದಾರನೆ ! ಕರುಣಾಸ
ಮುದ್ರನೆ! ಕಾಪಾಡು. [ಎಂದು ಪ್ರಾರ್ಥಿಸುತ್ತ ಅಂಜಲೀಬದ್ಧನಾಗಿ
ಮೇಲಕ್ಕೆ ನೋಡುತ್ತಿರುವನು]
ಪುಟ:ಶ್ರೀ ಕೃಷ್ಣ ಲೀಲೆ.djvu/೫೩
ಈ ಪುಟವನ್ನು ಪ್ರಕಟಿಸಲಾಗಿದೆ