ಈ ಪುಟವನ್ನು ಪ್ರಕಟಿಸಲಾಗಿದೆ


೪೦ಕೃಷ್ಣಲೀಲೆ.

           ದಂಡವಸುರ ಗರ್ವಖಂಡನನಿಗೆ| ದಂಡವುಮತ್ತವೇದಂಡಗ ರಕ್ಷಕ
           ನಿಗೆ ದಂಡವು ದಿವ್ಯ ಕೋದಂಡಧರಗೆ | ದಂಡವು ಪೂರ್ಣೇಂದು
           ಮಂಡಲ ವದನಗೆ ದ೦ಡವು ಪ್ರಾಕೃತ ಪಂಡಿತನಿಗೆ||

ಗೀ|| ದಂಡವದ್ಭುತ ವಿಕ್ರಮ ಭಂಡನನಿಗೆ | ದಂಡವಾನಂದ ಶಾಂತರ ಸಾಕರನಿಗೆ|
     ದಂಡ ವಾಶ್ರಿತರಕ್ಷಣ ತತ್ಪರನಿಗೆ | ದಂಡವುತ್ತಮ ವೈಕುಂಠಧಾಮ ನಿನಗೆ||

     ರಮಾರಮಣನೆ! ನಿನ್ನ ಅವತಾರವು ಕಂಸಾದಿ ದುಷ್ಟದನುಜ
ರನ್ನು ಸಂಹರಿಸುವುದಕ್ಕೆ ಮಾತ್ರವೇ ಅಲ್ಲ. ಭರಸಾಗರವನ್ನುತ್ತರಿಸಿ
ಶಾಶ್ವತ ಬ್ರಹ್ಮಾನಂದವನ್ನು ಹೊಂದಬೇಕೆಂಬ ಅಭಿಲಾಷೆಯಿಂದ ನಿನ್ನ
ಆಗಮನವನ್ನೇ ಚಿರಕಾಲದಿಂದಲೂ ಎದುರು ನೋಡುತ್ತಿರುವ ಭಕ್ತರು,
ಮುಕ್ತರು, ತ್ಯಾಗಿಗಳು, ಭೋಗಿಗಳು, ಯೋಗಿಗಳು ಮುಂತಾದ ಅನೇ
ಕಾನೇಕ ಮಹಾಜನರಿಗೆ ಪರಮಾರ್ಥ ಲಾಭವನ್ನುಂಟು ಮಾಡತಕ್ಕು
ದಾಗಿದೆ. ಆದುದರಿಂದ ನಿನ್ನ ಸಂದರ್ಶನವು ಕ್ಷಿಪ್ರದಲ್ಲಿಯೇ ಆಗ
ಬೇಕಾಗಿದೆ. ಆಶ್ರಿತ ಪಾರಿಜಾತನೇ ! ದೇವಕಿಯ ಗರ್ಭದಿಂದ ಬೇಗನೆ
ಅವತರಿಸು.
     [ಎಂದು ನಾರದರು ಭಗವಂತನನ್ನು, ಸ್ತೋತ್ರಮಾಡಿದ ನಂತರ
ದೇವಕೀ ವಸುದೇವರಿಗೆ ಸಂತೋಷವನ್ನು ಸೂಚಿಸುವರು.]

ನಾರದ:- ಅಮ್ಮಾ, ದೇವಕಿ ! ನಿನ್ನ ಗರ್ಭದಲ್ಲಿ ಪುರಾಣ ಪರುಷ
ನಾದ ಭಗವಂತನು ಅಪಾರ ತೇಜೋಭಿರಾಮವಾಗಿ ಕಂಗೊಳಿಸುತ್ತಿ
ರುವನು. ಕ್ಷಿಪ್ರದಲ್ಲಿಯೇ ನಿನ್ನ ಪುತ್ರನಾಗಿ ಅವತರಿಸುವನು. ನಿಮ್ಮ
ಕಷ್ಟಗಳೆಲ್ಲವೂ ಪರಿಹಾರವಾದುವು. ಇನ್ನು ನಿಮಗೆ ಕಂಸಾದಿ ದುಷ್ಟ
ರಿಂದ ಲೇಶಮಾತ್ರವೂ ಭಯವಿಲ್ಲವು. ಸಾಧ್ವೀಮಣಿಯೆ! ನೀನೇ ಧನ್ಯ
ಳು. ಎಲೈ ವಸುದೇವನೆ! ನಿನ್ನ ಪುಣ್ಯವೇ ಪುಣ್ಯವು. ದಂಪತಿಗಳಾದ
ನೀವಿಬ್ಬರೂ ಪರಮ ಪುಣ್ಯಾತ್ಮರು. ನಿಮ್ಮ ಸಂದರ್ಶನವೇ ನಮಗೆ
ಭಾಗ್ಯೋದಯವು.

ದೇವಕೀ ವಸುದೇವರು:-ಪೂಜ್ಯರೇ? ತಮ್ಮೆಲ್ಲರಿಗೂ ವಂದಿಸುವೆವು.

      [ಎಂದು ಬ್ರಹ್ಮಾದಿ ದೇವತೆಗಳಿಗೂ, ನಾರದರಿಗೂ ಕೈಮುಗಿದು ವಂದಿಸುವರು.]