೪೬ಕೃಷ್ಣಲೀಲೆ
ದೇವಕಿ:-(ಗಾಬರಿಯಿಂದ) ನಾಥಾ ! ಎಲ್ಲಿಗೆ ಹೊರಡುವಿರಿ ?
ವಸುದೇವ-ಪ್ರಿಯೇ ! ಸಂತೋಷದ ಸಂಭ್ರಮದಲ್ಲಿ ಕರ್ತವ್ಯ
ವನ್ನು ಮರತೇ ಬಿಟ್ಟೆವು. ಈ ಬಾಲಕನನ್ನು ಗೋಕುಲದಲ್ಲಿ ಬಿಟ್ಟು,
ನಂದಗೋಪನ ಶಿಶುವನ್ನಿಲ್ಲಿಗೆ ತರಬೇಕಲ್ಲವೆ?
ದೇವಕಿ:-ಹಾ ದೈವವೆ! ಈ ಸುಕುಮಾರನನ್ನು ಬಿಟ್ಟು ನಾ
ನೆಂತು ಜೀವಿಸಲಿ?
ವಸುದೇವ:- ..ದೇವೀ ! ಶೋಕಿಸಬೇಡ, ನಾವು ಹತಭಾಗ್ಯರು
ಈ ಮುದ್ದುಕಂದನ ಬಾಲಲೀಲೆಗಳನ್ನು ನೋಡಿ ಆನಂದಿಸುವ ಭಾಗ್ಯವು
ನಮಗೆ ಲಭ್ಯವಿಲ್ಲವು. ಸುಕೃತಜನ್ಮಳಾದ ಯಶೋದೆಯೂ,
ಮಹಾತ್ಮನಾದ ನಂದಗೋಪನೂ ಈ ಪುಣ್ಯವನ್ನು ಪಡೆದುಬಂದಿರು
ವರು. ಈಗಾಗಲೇ ಬಹಳ ಹೊತ್ತಾಯಿತು. ಕೊಡು ! ಕೊಡು!
ಬಾಲಕನನ್ನಿಲ್ಲಿ ಕೊಡು !!!
[ಎಂದು ವಸುದೇವನು ದೇವಕಿಯ ಕೈಯಿಂದ ಶಿಶುವನ್ನು ತೆಗೆ
ದುಕೊಂಡು, ಸೆರೆಮನೆಯನ್ನು ಬಿಟ್ಟು ಹೊರಡುವಾಗ್ಗೆ ಬಾಗಿಲುಗಳೆ
ಲ್ಲವೂ ತಾವಾಗಿಯೇ ತರೆದುಹೋಗುವುವು. ಕಾವಲುಗಾರರು ಗಾಢ
ನಿದ್ರಾಪರವಶರಾಗಿರುವರು. ವಸುದೇವನು ನಿರಾತಂಕವಾಗಿ ಹೊರಡು
ವನು.]
ತೃತೀಯಾಂಕಂ-ತೃತೀಯರಂಗಂ.
ಪ್ರದೇಶ:— ಯಮುನಾನದೀ ತೀರ.
[ನಾವಿಕರು ಹಡಗು ನಡಿಸುತ್ತ ಹಾಡುತ್ತಿರುವರು]
ರಾಗ-ಶಂಕರಾಭರಣ-ಆಟ.
ಜೊರ್ಸ, ಬಾರ್ಸೇ, ವಾರ್ಸೇ || ಪ ||
ಅಂಗಜನಯ್ಯನ ಪಾದದಿ ಪುಟ್ಟಿದ, ಗಂಗಮ್ಮ ತಾಯಿಗೇ ರಂಗು ಪೂಮಾಲೆ||
ಜೋರ್ಸೇ|| ಅ-ಪ ||
ಯಮುನಾತಾಯಿಗೆ ಒಳ್ಳೇ ಕಮಲ ಪುಷ್ಪದ ಮಾಲೆ,
ತಪತಿ ತಾಯಿಗೆ ಜಾಜಿ ಕುಸುಮ ಮಾಲೆ||ಜೋರ್ಸೇ||
ಗೋದಾವರಿ ತಾಯಿಗೆ ಗೋರಂಟಿ ಹೂಮಾಲೆ,
ಪುಟ:ಶ್ರೀ ಕೃಷ್ಣ ಲೀಲೆ.djvu/೬೧
ಈ ಪುಟವನ್ನು ಪ್ರಕಟಿಸಲಾಗಿದೆ