ಈ ಪುಟವನ್ನು ಪ್ರಕಟಿಸಲಾಗಿದೆ


೫೬ತೃತೀಯಾಂಕಂ.

ಹೇಳಿಕೆ ಮಾತುಗಳನ್ನು ಕೇಳಿ ಕುಪಿತನಾಗಿ ನಿಮ್ಮ ಮಕ್ಕಳನ್ನೆಲ್ಲಾ ಕೊಂ
ದೆನು. ನಿರ್ದೋಷಿಗಳಾದ ಹಸುಮಕ್ಕಳನ್ನು ಕೊಂದು ಶಿಶು ಹತ್ಯಾ
ದೋಷಕ್ಕೆ ಗುರಿಯಾದೆನು. ಅಶರೀರವಾಣಿಯ ಮಾತುಗಳನ್ನು ನಿಜ
ವೆಂದು ನಂಬಿ ನಾನಿಷ್ಟು ದುಷ್ಕಾರ್ಯಗಳನ್ನಾಚರಿಸಿದೆನು. ಅಮ್ಮಯ್ಯಾ
ದೇವಕಿ ! ಮಹಾತ್ಮಾ ವಸುದೇವ | ನನ್ನಿಂದ ನಿಮಗುಂಟಾದ ಕಷ್ಟ
ನಷ್ಟಗಳನ್ನೆಲ್ಲಾ ಮರೆತುಬಿಡಿರಿ. ನನ್ನನ್ನು ಮನ್ನಿಸಿರಿ. ಲೇಶವಾದ
ರೂ ಮನಸ್ಸಿನಲ್ಲಿಡಬೇಡಿರಿ. ದಯಾಮಯರಾಗಿ ನನ್ನನ್ನು ಸಲಹಿರಿ.

(ಎಂದು ಬೆಸಗೊಳ್ಳುತ್ತ ಕಂಸನು ದೇವಕೀ ವಸುದೇವರ ಚರಣಗಳಿಗೆರ
ಗುವನು.) .
ವಸುದೇವ- ಭಾವಾ ಕಂಸ ರಾಜೇಂದ್ರಾ! ಪ್ರಪಂಚದಲ್ಲಿ ಜೀವ
ಕೋಟಿಗಳು ಮಾಯೆಯಿಂದಾವರಿಸಲ್ಪಟ್ಟು ದ್ವೇಷಬುದ್ದಿಗಳಾಗಿ,
ಲೋಭ, ಕಾರ್ಪಣ್ಯ, ಅಹಂಕಾರ, ಗರ್ವ, ಭಯ, ಶತ್ರುತ್ವ, ಕಾಮ,
ಕ್ರೋಧ ಮುಂತಾದ ಪ್ರಮೋದ ವಿಷಾದಗಳನ್ನು ಹೊಂದುತ್ತಲೂ, ಒಬ್ಬ
ರನ್ನೊಬ್ಬರು ಹೀಯಾಳಿಸುತ್ತಲೂ, ದ್ವೇಷಿಸುತ್ತಲೂ, ಕೊಲ್ಲುತ್ತಲೂ, ತಮ್ಮ
ಪ್ರತಾಪವನ್ನು ತೋರಿಸುತ್ತ, ಕಡೆಗೆ ತಾವೇ ನಾಶವಾಗುತ್ತಾರೆ.
ಪ್ರತಿಯೊಬ್ಬರಿಗೂ ಅವರವರ ಕರ್ಮಾನುಸಾರವಾಗಿ ಫಲಾಫಲಗಳುಂಟಾ
ಗುತ್ತವೆ. ಒಬ್ಬರು ಮತ್ತೊಬ್ಬರನ್ನು ಕೆಡಿಸಬೇಕೆಂದು ವೃಥಾಪ್ರಯಾಸ
ಪಟ್ಟು ಕಡೆಗೆ ತಾವು ಕೆಡುವುದೇ ಹೊರತು ಮತ್ತಾವಪ್ರಯೋಜನವನ್ನೂ
ಹೊಂದಲಾರರು. ಭಗವಂತನಲ್ಲಿ ದೃಷ್ಟಿಯಿಟ್ಟು ಸಾಧುವಾರ್ಗದಲ್ಲಿ ಸಂ
ಚರಿಸದಿರುವ ನೀಚಮಾನವರು ಎಷ್ಟು ಕಾಲ ಜೀವಿಸಿದ್ದರೂ ಫಲವಿಲ್ಲವು.
ಕಂಸ ಭೂಪಾಲಾ ! ನೀನೇಕೆ ಚಿಂತಿಸುವೆ ? ನಮ್ಮ ಕರ್ಮವನ್ನು
ನಾವನುಭವಿಸುವೆವು. “ತೇನವಿನಾ ತೃಣಮಪಿನ ಚಲತಿ" ಎಂಬಂತೆ
ಭಗವದಾಜ್ಞೆಯ ಹೊರತು ಯಾವ ಕಾರ್ಯವೂ ಆಗುವುದಿಲ್ಲವು. ನಿನ್ನಲ್ಲಿ
ನಮಗೆ ಲೇಶವಾದರೂ ದ್ವೇಷವಿಲ್ಲವು. ನೀನಿನ್ನು ನಿಶ್ಚಿಂತನಾಗಿರು.

ದೇವಕಿ:-ಅಣ್ಣಾ! ನಿನ್ನ ದೈನ್ಯಭಾವವು ಬಹಳ ಶೋಚನೀಯ
ವಾಗಿದೆ. “"ಗತಂ ನ ಶೋಚಯೇತ್ಪ್ರಾಜ್ಞಃ" ಎಂಬ ಆರ್ಯೋಕ್ತಿಯಂತೆ,
ಕಳೆದುಹೋದ ವಿಷಯಗಳಿಗಾಗಿ ದುಃಖಿಸುವುದು ಪ್ರಾಜ್ಞರ ಲಕ್ಷಣ
ವಲ್ಲ. ಏನೇನು ಆಗಬೇಕೆಂದು ವಿಧಿ ವಿಲಾಸವಿದ್ದಿತೋ ಅದೆಲ್ಲವೂ ಆಯಿತು.