ಈ ಪುಟವನ್ನು ಪ್ರಕಟಿಸಲಾಗಿದೆ

೬೩ತೃತೀಯಾಂಕ೦

ನೆಲೆಗೊಳ್ಳುವುದು. ಎಲ್ಲಿ ಧರ್ಮವು ನೆಲೆಗೊಳ್ಳುವುದೊ ಅಲ್ಲಿ “ಜಯ”
ಉಂಟಾಗುವುದು. ಆದುದರಿಂದ ಎಲ್ಲಕ್ಕೂ ಕಾರಣಭೂತರಾದ, ಪತಿ
ವ್ರತಾ ಸ್ತ್ರೀಯರನ್ನು ಮೊಟ್ಟಮೊದಲು ಭಂಗಪಡಿಸಬೇಕು.

ಅಸುರರು:-(ಭುಜಗಳನ್ನು ತಟ್ಟುತ) ನಿದ್ಧ! ಸಿದ್ಧ !! ಸಿದ್ಧ !!!
ಕಂಸ:-ಇದು ಮೊದಲನೆಯ ಕಾರ್ಯವು.
ಅಸುರರು:- (ಆರ್ಭಟದಿಂದ) ಪ್ರಭುವೇ ! ಎರಡನೆಯ ಕಾರ್ಯ
ವಾವುದೋ ಬೇಗನೆ ಅಪ್ಪಣೆಯಾಗಲಿ.

ಅಘಾಸುರ:-ಅದನ್ನು ನಾನು ಹೇಳುವೆನು.
ಅಸುರರು:-ಆಗಬಹುದು.

ಅಘಾಸುರ:- ಶ್ಲೋ|| ಗೋಭಿರ್ವಿಪ್ರೈಶ್ಚ ವೇದೈಶ್ಚ | ಸತೀಭಿಸ್ಸತ್ಯವಾದಿಭಿಃ | ದಾತೃಭಿರ್ಧರ್ಮ ಶೀಲೈ
                 ಶ್ಚ | ಸಪ್ತಭಿರ್ಧಾರ್ಯತೇ ಮಹೀ||

      ಗೋವುಗಳು -ಬ್ರಾಹ್ಮಣರು-ವೇದಗಳು-ಪತಿವ್ರತೆಯರು-ಸತ್ಯವಂ
ತರು-ದಾನಶೀಲರು-ಧರ್ಮಾತ್ಮರು, ಎಂಬೀ ಏಳುಬಗೆಯ ಜನರಿಂದ
ಪ್ರಪಂಚವು ನಡಿಸಲ್ಪಡುತ್ತದೆ. ಆದುದರಿಂದ ನಾವೆಲ್ಲರೂ ಒಂದೇಮನ
ಸ್ಸಿನಿಂದ ಪ್ರಯತ್ನಿಸಿ, ಗೋಬ್ರಾಹ್ಮಣರನ್ನೂ , ವೇದಗಳನ್ನೂ, ಪತಿ
ವ್ರತಾ ಸ್ತ್ರೀಯರನ್ನೂ, ಸತ್ಯಸಂಧರನ್ನೂ, ದಾನಧರ್ಮನಿರತರನ್ನೂ,
ಧ್ವಂಸ ಮಾಡಬೇಕು. ಹಾಗೆ ಮಾಡಿದೆವಾದರೆ, ಆಗ ವಿಷ್ಣುವು ನಮ್ಮ
ಪರಾಕ್ರಮಕ್ಕೆ ಭ್ರಾಂತನಾಗುತ್ತಾನೆ. ತದನಂತರ ನಾವು ನಿರ್ಭೀತ
ರಾಗಿ ದೇವತೆಗಳನ್ನು ಜಯಿಸಿ, ಅಮರಾವತಿಯಿಂದ ಒದ್ದೋಡಿಸ
ಬಹುದು.

    ಕಂಸ:-ಬೇಷ್ ! ಬೇಷ್!! ಚನ್ನಾಗಿ ಹೇಳಿದೆ !!!

    ಅಸುರರು:-. ಈಗ ನಾವು ಮಾಡಬೇಕಾದ ಕೆಲಸಗಳನ್ನು
ಮತ್ತೊಂದು ಸಾರಿ ವಿವರವಾಗಿ ತಿಳಿಸಿರಿ.

    ಕಂಸ:-ದೇವತೆಗಳನ್ನೂ, ಅವರ ಪಕ್ಷದ ಪ್ರತಿಯೊಬ್ಬರನ್ನೂ
ಎಲ್ಲಿ ನೋಡಿದರೆ ಅಲ್ಲಿಯೇ ಹಿಡಿದು ಸಂಹರಿಸುವುದು.