ಈ ಪುಟವನ್ನು ಪ್ರಕಟಿಸಲಾಗಿದೆ

ತೃತೀಯಾಂಕ೦


ಅಸುರರು:- ನಿರಾಯಾಸವಾಗಿ ಮಾಡುವವು.
ಕಂಸ:-ಎಳೆ ಮಕ್ಕಳನ್ನು ನೋಡುತ್ತಲೇ ಎಂಥವರಿಗಾದರು
ಕರುಣ ಉಂಟಾಗುವುದು ಸಹಜವು !

ಅಸುರರು:-ಕರುಣವೆಂಬುವುದು ನಮ್ಮ ಪಾಲಿಗೆ ಘೋರ ಶತ್ರು
ವಲ್ಲವೆ ಮಹಾಪ್ರಭೂ!

ಕಂಸ:-ಹಾಗಲ್ಲ ! ಎಳೆ ಮಕ್ಕಳ ಮುಖಭಾವಗಳು ನೋಡುವು
ದಕ್ಕೆ ಎಷ್ಟೇ ಲಕ್ಷಣವಾಗಿದ್ದಾಗ್ಯೂ ನೀವು ಮಾತ್ರ ಬೆರಗಾಗಬಾರದು !

ಅಸುರರು:-ರಾಕ್ಷಸರಾದ ನಮಗೆ ಲಕ್ಷಣವೇನು ? ಅವಲಕ್ಷಣ
ವೇನು ? ಎಲ್ಲಾ ಒಂದೇ.

ಅಘಾಸುರ:-ಆ ಅಲಂಕಾರ ಭಾವಗಳೆಲ್ಲವೂ ಖೂಳರಾದ ದೇವತೆ
ಗಳಿಗೇ ಹೊರತು ನಮಗಲ್ಲವು.

[ನಾರದರು ಪ್ರವೇಶಿಸುವರು. ಎಲ್ಲರೂ ಎದ್ದು ನಿಂತು ವಂದಿಸುವರು.]

ನಾರದ:- ನಿಜ! ನಿಜ | ನಿಮ್ಮನ್ನು ಸೃಷ್ಟಿ ಮಾಡುವಾಗ ಬ್ರಹ್ಮನು
ಅಲಂಕಾರ ಭಾವಗಳನ್ನು ಲಕ್ಷವಿಡದೆಯೇ ತೋಚಿದ ಹಾಗೆಲ್ಲಾ ಮಾಡಿ
ರುವನೆಂದು ಕಾಣುತ್ತದೆ.

ಅಸುರರು:-ಅದು ಹೇಗೆ ?

ನಾರದ:- ಹೇಗೆಂದರೆ, ಒಂದು ಶರೀರಕ್ಕೆ ಎರಡು ತಲೆಗಳು,
ಮೂರು ಮೂಗುಗಳು, ಏಳು ಕಿವಿಗಳು, ಒಂಬತ್ತು ಕಣ್ಣುಗಳು, ನಾಲ್ಕು
ಮೊಳದುದ್ದ ಕೋರೆ ಹಲ್ಲುಗಳು, ವಿಶಾಲವಾದ ಹೊಟ್ಟೆಗಳು, ಆನೆಯ
ಕಾಲುಗಳು ಹತ್ತು ಮೊಳದ ಇಪ್ಪತ್ತು ಮೊಳದ ಸೊಂಟಗಳು, ಮುಂ
ತಾದ ಈ ಸ್ವರೂಪಗಳನ್ನೆಲ್ಲಾ ಇನ್ನು ಧಾರಾಳವಾಗಿ ರಾಕ್ಷಸರಾದ
ನಿಮಗೆ ಕೊಟ್ಟನೇ ಹೊರತು ಬ್ರಹ್ಮನು ಮತ್ತಾರಿಗೂ ಕೊಡಲಿಲ್ಲವು.

ಅಸುರರು:-ಭಳಿರೇ ! ನಾರದರೇ ! ನಮಗೆ ಮಾತ್ರವೇ ಅಂಗಾಂ
ಗಳನ್ನು ಇಷ್ಟು ಧಾರಾಳವಾಗಿ ಕೊಡಲು ಕಾರಣವೇನು?

ನಾರದ:-ನೀವು ಧೀರ ಶೂರ ಶಿಖಾಮಣಿಗಳಾದ ಅಸುರ ಕುಲದವ
ರಾದುದರಿಂದ, ನೀವು ಲಕ್ಷಣಶಾಸ್ತ್ರವನ್ನು ಲಕ್ಷ್ಯ ಮಾಡತಕ್ಕವರಲ್ಲವೆಂದ