ಈ ಪುಟವನ್ನು ಪ್ರಕಟಿಸಲಾಗಿದೆ

೬೮ಕೃಷ್ಣಲೀಲೆ

ಕಂಸ-ಎಲೈ ನನ್ನ ಹಿತೈಷಿಗಳಾದ ಅಸುರವರ್ಯರೇ ! ನಾರದ
ರಿಂದ ನಾನು ಕೆಲವು ರಹಸ್ಯಗಳನ್ನರಿತಿರುವೆನು. ಆದುದರಿಂದ ನೀವೆ
ಲ್ಲರೂ ನಾನಾ ಬಗೆಯಾದ ರೂಪಗಳನ್ನು ಧರಿಸಿ, ಗೋಕುಲ ಬೃಂದಾವನ
 ಪ್ರಾಂತ್ಯದಲ್ಲಿ ಸಂಚರಿಸುತ್ತ, ನಿಮ್ಮ ಬುದ್ಧಿಬಲದಿಂದ ಶತ್ರುಗಳನ್ನು
ಕಂಡರಿತು ನಿರ್ದಾಕ್ಷಿಣ್ಯವಾಗಿ ಸಂಹಾರ ಮಾಡಿರಿ. ಜನರನ್ನು ಪೀಡಿಸುವುದ
ರಲ್ಲಿ ಶೂರರಾದ ಅಸುರ ಕುಲದವರು ಹೇಗಿರಬೇಕು ಬಲ್ಲಿರೋ ?

ಅಘಾಸುರ:-ಬಲ್ಲೆವು ! ಬಲ್ಲೆವು !!

ಕಂಸ:-ಹೇಗೆ ?

ಅಘಾಸುರ:- ಚಿತ್ತೈಸಬೇಕು.

ಶ್ಲೋ|| ಸತ್ಯಂನಾಸ್ತಿ ! ಶಮಂನಾಸ್ತಿ ! ನಾಸ್ತಿನಾಸ್ತಿ ಪತಿವ್ರತಾ | ಧರ್ಮೋನಾಸ್ತಿ!
      ದಯಾನಾಸ್ತಿ ! ರಾಕ್ಷಸಾನಾ೦ಗೃಹೇ ಗೃಹೇ||

     ಸತ್ಯವೂ, ಇಂದ್ರಿಯನಿಗ್ರಹವೂ, ಪಾತಿವ್ರತ್ಯವೂ, ಧರ್ಮವೂ,
ದಯೆಯೂ ನಮಗೆ ಘೋರಶತ್ರುಗಳಲ್ಲವೆ? ಇವುಗಳಲ್ಲಿ ಒಂದಾದರೂ
ರಾಕ್ಷಸರ ಮನೆಯ ಬಾಗಿಲಿಗೆ ಬರಕೂಡದಲ್ಲವೆ ?

ಕಂಸ:-ಭೇಷ್! ಅಘಾಸುರಾ ! ಚನ್ನಾಗಿ ಹೇಳಿದೆ.

ಅಸುರರು:-ಈ ಮೂಲಮಂತ್ರವನ್ನು ನಾವೆಲ್ಲರೂ ಆಚರಣೆ
ಯಲ್ಲೇ ಇಟ್ಟುಕೊಂಡಿರುವೆವು, ಮಹಾಪ್ರಭೂ!

ಕಂಸ:-ಬಹಳ ಸಂತೋಷ !

ಚಾಣೂರ:- ಈ ಸಂತೋಷ ಸೂಚನೆಗೆ ಸಲುವಾಗಿ ನಮ್ಮ
ದರ್ಬಾರಿನಲ್ಲಿ ಸ್ವಲ್ಪಕಾಲ ನರ್ತನ ಗಾಯನಾದಿಗಳಾಗ ಬಹುದಲ್ಲವೆ?

ಕಂಸ:-ಆಹಾ ! ಅಭ್ಯಂತರವೇನು ? ಎಲೈ ಮಂತ್ರಿಯೆ! ನಮ್ಮ
ಆಸ್ಥಾನದ ಗಾಯನ ಸಮಾಜದವರನ್ನು ಈಗಲೇ ಬರಮಾಡು.

ಮಂತ್ರಿ:-ಅಪ್ಪಣೆ.

   [ಮಂತ್ರಿಯು ಚಾರರನ್ನು ಕಳುಹಿಸಿ ಕಂಸನ ಆಸ್ಥಾನದ ಗಾಯನ
ಸಮಾಜದವರನ್ನು ಬರಮಾಡುವನು. ನರ್ತನಾಂಗನೆಯರೂ, ವಾದ್ಯ
ಗಾರರೂ, ಸಂಗೀತಗಾರರೂ ಪ್ರವೇಶಿಸುವರು.]