೭೬ಕೃಷ್ಣಲೀಲೆ
ಅಘಾಸುರ:-ದೇವತಗಳ ಪಾಲಿಗೆ ಮೃತ್ಯುದೇವತೆ ಎಂಬ ಬಿರು
ದಾಂಕಿತರಾದ ತಾವು ಸಿಂಹಾಸನಾಸೀನರಾಗಿರುವುದರಿಂದ ಅವರಿಲ್ಲಿಗೆ
ಬರಲು ಹೆದರುತ್ತಿರುವರಷ್ಟೆ!
ಕಂಸ:-ಇದೀಗ ಸರಿಯಾದಭಿಪ್ರಾಯವು, ಖೂಳರಾದ ಆ
ದೇವತೆಗಳು ನಾನಿರುವಲ್ಲಿಗೆ ಬರುವುದಕ್ಕೆ ಹೆದರುವರೆಂಬುದೇನೋ ನಿಜ
ವಾದ ಮಾತು. ಬೇಷ್! ಅಘಾಸುರನೇ ! ನಿನ್ನ ಬುದ್ಧಿಸೂಕ್ಷ್ಮತೆಯು
ಮೆಚ್ಚ ತಕ್ಕುದು!
ಅಘಾಸುರ:- ಎಲ್ಲವೂ ತನಮ್ಮ ಪರಾಕ್ರಮ ವಿಶೇಷವಷ್ಟೆ!
ಕಂಸ:- ಯಾರಲ್ಲಿ?
ಚಾರ: - ಏನಪ್ಪಣೆ.
ಕಂಸ:- ಈ ಸುಂದರಿಯರಿಗೆ ಬೇಕಾದಷ್ಟು ಬಹುಮಾನಗಳನ್ನು
ಕೊಡುವಂತೆ ಧನಪಾಲನಿಗೆ ತಿಳಿಸು.
ಚಾರ:-ಅಪ್ಪಣೆ !
(ನರ್ತನಾಂಗನೆಯರು ನಿಷ್ಕ್ರಮಿಸುವರು.)
ಅಘಾಸುರ:-ಎಲೈ ವಿದ್ವಾಂಸನೇ! ನಮ್ಮ ಕಂಸ ಭೂಪಾಲನನ್ನು
ಬಣ್ಣಿಸಿ ಹಾಡುವುದಾದರೆ ನಿನಗೂ ಬಹುಮಾನವು ದೊರೆಯುತ್ತದೆ.
ವಿದ್ವಾಂಸ:-(ತನ್ನಲ್ಲಿ.)
ಶ್ಲೋ!! ನಾಥೇನಃ ಪುರುಷೋತ್ತಮೇ ತ್ರಿಜಗತಾಮೇಕಾಧಿಪೇ ಚೇತಸಾ | ಸೇವ್ಯೇಸ್ಯ
ಸ್ಯಪದಸ್ಯದಾತರಿ ಸುರೇ ನಾರಾಯಣೇ ತಿಷ್ಠತಿ| ಯಂಕಂ ಚಿತ್ಪುರುಷಾಧಮಂ
ಕತಿಪಯ ಗ್ರಾಮೇಶ ಮಲ್ಪಾರ್ಥದಂ| ಸೇವಾಯೈ ಮೃಗಯಾಮ ಹೇವರಮ
ಹೋ ಮೂಕಾವರಾಕಾವಯ೦||
ಜಗನ್ನಾಥನೂ, ಪುರುಷೋತ್ತಮನೂ, ಮೂರು ಲೋಕಗಳಿಗೂ
ತಾನೊಬ್ಬನೇ ಪ್ರಭುವಾದ ಜಗದೇಕ ಚಕ್ರವರ್ತಿಯೂ, ಮನಸ್ಸಿನಿಂದ
ಸೇವಿಸಲ್ಪಡತಕ್ಕವನೂ, ತನ್ನನ್ನು ಆಶ್ರಯಿಸಿದವರಿಗೆ ಅಖಿಲಾರ್ಥ ಲಾಭ
ವನ್ನುಂಟುಮಾಡತಕ್ಕವನೂ, ಭಗವಂತನೂ ಆದ ಶ್ರೀಮನ್ನಾರಾಯ
ಣನು ಸರ್ವತ್ರ ವಿರಾಜಿಸುತ್ತಿರುವಾಗ ಆತನನ್ನು ಬಿಟ್ಟು, ಕುಲಗೋತ್ರ
ನಾಮಗಳ ಸ್ಮೃತಿಯಿಲ್ಲದವನೂ, ನೀಚನೂ, ಕೆಲವು ಗ್ರಾಮಗಳಿಗೆ
ಪುಟ:ಶ್ರೀ ಕೃಷ್ಣ ಲೀಲೆ.djvu/೯೨
ಈ ಪುಟವನ್ನು ಪ್ರಕಟಿಸಲಾಗಿದೆ