೭೯ಚತುರ್ಥಾಂಕಂ
ಇಂದುಲೇಖೆ:- ಕಳಾಪತೀ ! ನೀನು ನೋಡಿರುವೆಯಾ?
ಕಳಾವತಿ:- ನಾನು ನೋಡಲಿಲ್ಲವಾದರೂ, ಗರ್ಗಾಚಾರ್ಯರು
ಪತ್ನಿಯಾದ ಸುಮಿತ್ರಾದೇವಿಯಿಂದ ಕೇಳಬಲ್ಲೆನು.
ಇಂದುಲೇಖೆ:- ಏನೆಂದು ಕೇಳಿರುವೆ ?
ಕಲಾವತಿ:-ಆ ಬಾಲಕನು ದೇವಾಂಶ ಸಂಭೂತನೆಂತಲೂ,
ಲಾವಣ್ಯಮೂರ್ತಿಯಂತಲೂ ಕೇಳಿರುವೆನಷ್ಟೆ!
ಇಂದುಲೇಖೆ:- ವಸಂತಮಾಲತೀ | ನೀನು ನೋಡಿರುವೆಯಾ?
ವಸಂತಮಾಲತಿ:- ನಾನು ನೋಡಿಲ್ಲ. ಆ ಶಿಶುವಿನ ನಾಮಕರ
ಣದ ದಿವಸ ನಮ್ಮ ತಾಯಿಯು ಹೋಗಿ ನೋಡಿ ಬಂದಳು.
ಇಂದುಲೇಖೆ:-ಬಾಲಕನು ಹೇಗಿರುವನೆಂದು ನಿಮ್ಮ ತಾಯನ್ನು
ಕೇಳಲಿಲ್ಲವೆ?
ವಸಂತಮಾಲತಿ-ಕೇಳಿದೆನು. ಒಬ್ಬೊಬ್ಬರ ಕಣ್ಣಿಗೆ ಒಂದೊಂ
ದು ವಿಧವಾಗಿ ಕಾಣಿಸುವನಂತೆ.
ಇಂದುಲೇಖೆ:- ನಿಮ್ಮ ತಾಯಿಯು ಸದಾ ಭಗವತ್ಕಾಲಕ್ಷೇಪ
ಮಾಡತಕ್ಕವಳಲ್ಲವೆ ? ಆಕೆಗೆ ಹೇಗೆ ಕಾಣಿಸಿದನೆಂಬುದನ್ನು ನೀನು
ಕೇಳಲಿಲ್ಲವೆ?
ವಸಂತಮಾಲತಿ-ಕೇಳಿದೆನು.
ಇಂದುಲೇಖೆ:-ಏನು ಹೇಳಿದಳು ?
ವಸಂತಮಾಲತಿ:-ನಮ್ಮ ತಾಯಿಯ ಕಣ್ಣಿಗೆ, ನೀಲಮೇಘಶ್ಯಾ
ಮನಾಗಿಯೂ, ಶ್ರೀವತ್ಸ ಕೌಸ್ತುಭ ವನಮಾಲಿಕಾ ವಿರಾಜಿತ ವಿಶಾಲ
ವಕ್ಷನಾಗಿಯೂ, ಪದ್ಮಾಕ್ಷನಾಗಿಯೂ, ಶಂಖಚಕ್ ರಗದಾ ಪದ್ಮಹಸ್ತ ನಾಗಿಯೂ,
ಚತುರ್ಭುಜ ಪ್ರಸ್ತನಾಗಿಯೂ, ಕಟಕ-ಕಂಕಣ-ಕುಂ ಡಲ-ಕಿರೀಟಾದಿ ಸರ್ವಾಭರಣ ಭೂಷಿತನಾಗಿಯೂ, ಸುಂದರತರ ಕಪೋ ಲಗಳಿಂದ ಶೋಭಿತನಾಗಿಯೂ, ಪ್ರಸನ್ನ ವದನನಾಗಿಯೂ ಕಾಣಿಸಿದನಂತೆ.
ಇಂದುಲೇಖೆ:- ಮಿಕ್ಕವರಿಗೆ ಹೇಗೆ ಕಾಣಿಸಿದನೊ ?
ಪುಟ:ಶ್ರೀ ಕೃಷ್ಣ ಲೀಲೆ.djvu/೯೫
ಈ ಪುಟವನ್ನು ಪ್ರಕಟಿಸಲಾಗಿದೆ