ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೪೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧by { ಸರ್ಗ ಕ: ಶ್ರೀ ತತ್ವ ಸಂಗ್ರಹ ರಾಮಾಯಣಂ, ತಚ್ಚು ವಚನಂ ತಸ್ಯ ಸ್ನೇಹರ್ರ ಕುಲಾಕ್ಷರಮ್ ! ಸಮನ್ಯು ಕೌಶಿಕ ವಾಕ್ಯಂ ಪ್ರತ್ಯುವಾಚ ಮಹೀಪತಿಮ್ ||೧೦|| ಯದೀದಂ ತೇ ಕ್ಷಮಂ ರಾರ್ಹ ಗಮಿಷ್ಯಾಮಿ ಯಥಾಗತಮ್ | ಮಿಥ್ಯಾಪ್ರತಿಜ್ಞ ಕಾಕು ಸುಖೀ ಭವ ಸಬಾನ್ಧವ '೧೩ || ಏವಮುಕ್ತಃ ಸ ಮುನಿನಾ ರಾಜಾ ಧ್ಯಾತ್ವಾ ಕ್ಷಂ ತತಃ | ಪಪ್ರಚ್ಛ ಗುರುವೇಕಾನೇ ಸರ್ವಜ್ಞಂ ದೀರ್ಘ ದರ್ಶಿನಮ್ |೧೪|| ಕಿಂ ಕರೋಮಿ ಗುರೋ ರಾಮಂ ತ್ಯಕಂ ನೋತ್ಸಹ ಮನಃ | ಬಹುವರ್ಪಸಹಸನ ಕಪ್ಪನೋತ್ಪಾದಿತಾಃ ಸುತಾಃ |೧೫|| ಚತ್ತಾರೋಮೆರತುಲ್ಯಾಸ್ಕೆ ತೇಷಾಂ ರಾಮೋತಿವಲ್ಲಭಃ | oಾವೋ ಯದಾ ಗಚ್ಚತಿ ಚೇತ್ ನ ಜೀವಾಮಿ ಕಥಞ್ಞನ fine! ಪ್ರತ್ಯಾಖ್ಯಾತೋ ಯದಿ ಮುನಿಃ ಶಾಪಂ ದಾಸ್ಯತಿ ನಿಶ್ಚಯಃ ಕಥಂ ಶ್ರೇಯೋ ಭವೇನ್ಮಹ್ಯಂ ಅಸತ್ಯಂ ಚಾಪಿ ನ ಸ್ಪೃಶೇತ್ ||೧೭|| ಹೀಗಂದು ಪ್ರತಸ್ನೇಹದಿಂದ ಅಕ್ಷರಗಳನ್ನು ಸರಿಯಾಗಿ ಉಚ ರಿಸದೆ ದಶರಥನು ಹೇ ಳಿದ ಮಾತನ್ನು ಕೇಳಿ, ಮಹಾ ಕೋಪಯುಕ್ತನಾದ ವಿಶ್ವಾಮಿತ್ರನು, ರಾಜನನ್ನು ಕುರಿತು ಹೀಗೆ ಹೇಳಿದನು ರಿ೧91 ಅಯ್ಯಾ ! ರಾಜನೆ ! ಮೊದಲು ಒಪ್ಪಿಕೊಂಡು ಈಗ ಆಗುವುದಿಲ್ಲವೆಂದು ಹೇಳುವುದು ನಿನಗೆ ಯುಕ್ತವಾಗಿದ್ದ ಪಕ್ಷದಲ್ಲಿ, ನಾನು ಬಂದದಾರಿಯನ್ನು ಹಿಡಿದುಕೊಂಡು ಹೊರಡುವೆನು ; ಮಹಾತ್ಮನಾದ ಕಕುತ್ಸ ನ ವಂಶದಲ್ಲಿ ಹುಟ್ಟಿರುವ ಎಲೈ ದಶರಧನೆ ! ನೀನು ನಿನ್ನ ಪ್ರತಿಜ್ಞೆ ಯನ್ನು ಸುಳ್ಳು ಮಾಡಿಕೊಂಡು ಬಂಧುಬಳಗಗಳೊಡನೆ ಸುಖಿಯಾಗಿರು ||೧೩|| ಈರೀತಿಯಾಗಿ ವಿಶ್ವಾಮಿತ್ರ ಮುನಿಯಿ೦ದ ಹೇಳಲ್ಪಟ್ಟ ವನಾಗಿ, ಆ ದಶರಥಮಹಾರಾಜನು, ಒಂದು ಕ್ಷಣಕಾಲ ಸುಮ್ಮನೆ ಯೋಚನೆ ಮಾಡಿ ಬಳಿಕ, ಸರ್ವಜ್ಞನಾಗಿಯ ದೂರದೃಷ್ಟಿಯುಳ್ಳ ವನಾಗಿಯೂ ಇರುವ ಗುರುವಾದ ವಸಿಷ್ಠ ಮುನಿಯನ್ನು ಈ ರೀತಿಯಾಗಿ ಪ್ರಶ್ನೆ ಮಾಡಿದನು ||೧೪ - ಹೇ ಗುರೋ! ಈಗ ನಾನೇನು ಮಾಡಲಿ ? ರಾಮನನ್ನು ಕಳುಹಿಸುವುದಕ್ಕೆ ಸ್ವಲ್ಪವೂ ಮನಸ್ಸು ಒಡಂಬಡುವುದಿಲ್ಲ. ಅನೇಕ ಸಾವಿರ ವರ್ಷ ಕಾಲ ಮಕ್ಕಳಿಲ್ಲದೆ ಸಂತಾಪಪಟ್ಟು, ಆಮೇಲೆ ನಾನಾವಿಧವಾದ ಕಷ್ಟಗಳನ್ನು ಅನುಭವಿಸಿ, ದೇವಸಮರಾದ ನಾಲ್ಕು ಮಂದಿ ಮಕ್ಕಳನ್ನು ಪಡೆದಿ ರುವನು. ಅವರಲ್ಲೆಲ್ಲ ರಾಮನು ನನಗೆ ಮಹಾಪ್ರೀತಿಪಾತ್ರನಾಗಿರುವನು. ಇ೦ತಹ ರಾಮನು ಈಗ ವಿಶ್ವಾಮಿತ್ರರೊಡನೆ ಹೊರಟುಹೋದರೆ, ತಾನು ಹೇಗೂ ಜೀವಿಸಲಾರೆನು ೧೫-೧೬|| ಈ ಮಹರ್ಷಿಯ ಪ್ರಾರ್ಥನೆಯನ್ನು ನಡೆಯಿಸದೆ-ಅವನನ್ನು ತಿರಸ್ಕರಿಸಿಬಿಟ್ಟರೆ, ಆಗ ಇವನು ನನಗೆ ಕರವಾದ ಶಾಪವನ್ನು ಕೊಡುವನು ; ಇದು ನಿಶ್ಚಯವ, ಈಗ ಹೇಗೆ ನೋಡಿ ದರ ನನಗೆ ಶ್ರೇಯಸ್ಸುಂಟಾಗುವುದು?-ಅನೃತದೋಷವೂ ನನಗೆ ಬಾರದಿರುವುದು ? ||೧೭