ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹರಾಮಾಯಣಂ, (ಸರ್ಗ ಏವಂ ತಪಸ್ವಿನಃ ಸಹ ಚಿತ್ರಕೂಟೀ ದ್ವಿರ್ಜಾ ಶಿವಃ || ತಸ್ಮಾದ್ರಾಮಃ ಶಿವಇವ ಭಾತಿ ಸೂತ ಮಹಾಮತೇ ||೬|| ಆಶ್ಚಯ್ಯಪರ್ವಣಿ ಪೂರ್ವ೦ ದೇರ್ವಾ ಪ್ರತಿ ಶಿವೇನೈವಮುಕ ವಿತಿ ಶ್ರೀರಾಮ ಪ್ರತಿ ಮತು ನೋಚ್ಯತೇ, ಶಿವಉವಾಚ. ರಾಮೋಹಂ ತು ಭವಿಷ್ಯಾಮಿ ನಿಮ್ಮ ಕೈನಸಮತಃ | ದಶಾನನಪುರೋಗಾಣಿ ಹನಿಪ್ಪೇ ತಾನಿ ಸಂಯುಗೇ |೬|| ಋಕ್ಷ ವಾನರರೂಪೇಣ ಯಯಂ ತು ಜನಯಿಸ್ಮಥ | ವಿಹರಾಮಿ ವನೇ ಪುಣ್ಯ ಗೋಲಾ ಅನಿಸೇವಿತೇ |ivi ಗಾಜಲಸವಹನ ತುನ್ನೋ ಮಲಫಲೇನ ಚ | ಇತ್ತುಕಾದೇವದೇವೇನ ಭೂತನಾಥೇನ ರಾಘವ ||೯|| ಸಂಪ್ರದೃಷ್ಟಾಃ ಸುರಗಣಾಃ ದಿವಂ ಜಗ್ಗುರ್ಯಥಾಗತಮ್ | ಸ ತಂ ರಾಮ ಮಹಾಬಾಹೋ ಶಾ ಲೋಕ ಶರಃ ೧೦| ವಧಾರ್ಥಂ ರಾವಣಾದೀನಾಂ ಜಾತೋ ರಘುಕುಲೇ ಶುಭೇ | ಏವಂ ತು- ಶೇಪಧರ್ಮೊಕಾ, ರಾಮಃ ಶಿವತೀರ್ಯತೇ ||೧೧|| ಹೀಗೆಂದು ಶ್ರೀ ಶಿವನು ಚಿತ್ರಕೂಟದಲ್ಲಿ ತಪಸ್ಸು ಮಾಡುತಿದ್ದ ಬ್ರಾಹ್ಮಣರಿಗೆ ಹೇಳಿರು ವನು, ಆದಕಾರಣ, ಎಲೈ ಮಹಾಮತಿಯಾದ ಸೂತರೆ ! ರಾಮನು ಶಿವಾವತಾರವಾಗಿರುವಂತೆ ತೋರುವುದು |೬|| ಆಶ್ಚರ್ಯಪರ್ವದಲ್ಲಿ, ಹಿಂದೆ ದೇವತೆಗಳನ್ನು ಕುರಿತು ಶಿವನು ಹೀಗೆ ಹೇಳಿರುವನೆಂದು, ಶ್ರೀರಾಮನನ್ನು ಕುರಿತು ಮತಂಗಮಹರ್ಷಿ ಹೇಳಿರುವನು :- ಶ್ರೀ ಶಿವನು ಹೇಳಿದುದೇನೆಂದರೆ ' ನಾನು ರಾಮನಾಗಿ ಹುಟ್ಟು ವೆನು. ಆಗ ಶ್ರೀ ವಿಷ್ಣುವಿನೊಡಗೂಡಿದವನಾಗಿ, ರಾವಣ ೦ತಾದ ಆ ರಾಕ್ಷಸರನ್ನೆಲ್ಲ ಯುದ್ಧದಲ್ಲಿ ಕೊಲ್ಲುವೆನು ||೭|| ನೀವೂ ಕೂಡ, ಋಕ್ಷ (ಕರಡಿ) ವಾನರ ರೂಪದಿಂದ ಪ್ರಜೆಗಳನ್ನು ಸೃಷ್ಟಿ ಮಾಡುವಿರಿ. ಗೊಲಾಂಗೂಲ (ಸಿಂಗಳೀಕ) ಪರಿವೃತವಾಗಿ ವುಣ್ಯವಾದ ವನದಲ್ಲಿ ನಾನು ಗಂಗಾನದಿಯ ಜಲ ದಿಂದಲೂ ಫಲಮೂಲಗಳಿಂದಲೂ ಸಂತುಷ್ಟನಾಗಿ ವಿಹರಿಸುತಿರುವೆನು.-- ಆಯಾ ರಾಘವ ! ಹೀಗೆಂದು ಸರ್ವಭೂತಪತಿಯಾದ ಪರಮೇಶ್ವರನಿಂದ ಹೇಳಲ್ಪಟ್ಟು, ಸಮಸ್ತ ದೇವಸಮೂಹ ಗಳೂ ತಾವು ಬಂದಹಾಗೆ ಸ್ವರ್ಗಕ್ಕೆ ಹೊರಟುಹೋದುವು. ಹೀಗಿರುವುದರಿಂದ, ಮಹಾಭುಜ ನಾದ ಎಲೈ ರಾಮನ ! ನೀನು, ಸರ್ವಲೋಕ ಸುಖಕರನಾದ ಶಂಕರನ ಅವತಾರರೂಪನಾದ ವನು. ರಾವಣಾದಿಗಳ ವಧೆಗೊಸ್ಕರವಾಗಿ, ಶುಭವಾದ ರಘುಕುಲದಲ್ಲಿ ಹುಟ್ಟಿರುವೆ.- ಸ್ವಾಮಿ ! ಸೂತರೆ! ಈರೀತಿಯಾಗಿ ಶೇಷಧರ್ಮದಲ್ಲಿ ಹೇಳಲ್ಪಟ್ಟಿರುವುದರಿಂದ, ರಾಮನು ಶಿವ ನೆಂದು ಸ್ಪಷ್ಟವಾಗುವುದು #v-೧೧