ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ ಸಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಸವೇ ವೇದ್ಯಂ ನ ಚ ತಸ್ಯ ವೇತ್ತಾ ತನಾಹುರಗ್ರಂ ಪುರುಷಂಮಹಾನ್ನ ಮಮ್| ಅಣೋರಣೀರ್ಯಾ ಮಹತೋ ಮಹೀರ್ಯಾ ಆತ್ಮಾ ಗುಹಾಯಾಂ ನಿಹಿತೋಸ್ಯ ಜನ್ಮ || ನ ಜಾಯತೇ ಪ್ರಯತೇ ವಾ ಕದಾಚಿತ್ ನಾಯಂ ಭೂತ-ಭವಿತಾ ವಾ ನ[ಭೂಯಃ |೬|| ಏವಂವಿಧೆ ಬ್ರಹ್ಮತ ಜಾತೇ ರಾಘುವರೂಪಿಣಿ ; ತತವಕ್ಷಮಂ ಬೋದ್ದುಂ ವಿನಾ ರಾಮದಯಾಂ ದ್ವಿಜಾಃ ||೭|| ಬ್ರಹ್ಲಾದ್ಯಾಂ ನ ಜಾನ ತತೋ ಮುನಿ ಪುಬ್ಲಿ ವಾಃ | ಅನ್ನೋದು ಕಾ ಕಥಾ ತತ) ಮಹಾಮೋಹಾಕಿದಂತಿತಾಃ || ತಥಾಮಿ ವೆ. ಯಥಾಸುದ್ದಿ ಯಥಾ ಶತಮಿದಂ ದ್ವಿಜಾಃ | ತಥಾ ನಕ್ಷೆ ರಾಮತಂ ಸ ಹೇಣ ನಿಧತ |೯|| ಕೆಲವು ಪುಸ್ತಕಗಳಲ್ಲಿ ಇಲ್ಲಿಗೇ ಸರ್ಗ ಪೂರೈಸಿದೆ.) ಗಾಯತ್ರಿ ನಿಜಗರ್ಭತಾಪ್ ಗಾಯತ್ರ ರ್ಥೈಕ ಬೋಧಕವರ್ ರಾಮಾಯಣಂ ಯತೋ ವಿಪ್ರಾ ದುಜೆಯಂ ಪಸ್ಟ್ರಪಿ |೧೦|| - -೨ S ಎಲ್ಲವನ್ನೂ ಹಿಡಿದುಕೋಳು ತಲೂ ಇರುವುದು ; ಕಣ್ಣಿಲ್ಲದಿದ್ದರೂ ನೋಡುವುದು ; ಕಿವಿಯಿಲ್ಲದಿ ದ್ದರೂ ಕೇಳುವುದು, ಅದು ಸಮಸ್ತವಾದ ಜೇಯವನ್ನೂ ತಿಳಿದುಕೊಳ್ಳುವುದು ; ಅದನ್ನು ತಿಳಿ ದುಕೊಳ್ಳತಕ್ಕವರು ಯಾರೂ ಇಲ್ಲ. ಇಂತಹ ಬ್ರಹ್ಮಪದಾರ್ಥವನ್ನು, ಎಲ್ಲಕ್ಕೂ ಅದಿಯಾದ ಪುರುಷನೆಂದೂ ಮಹಾತ್ಮನೆಂದೂ ಪ್ರಾಜ್ಞರು ಹೇಳುವರು ||೫|| ಮತ್ತು. ಈ ಪರಮಾತ್ಮನು-ಸೂಕ್ಷಕ್ಕಿಂತ ಸೂಕನಾಗಿಯೂ ಮಹತ್ತಿಗಿಂತ ಮಹತ್ತಾ ಗಿಯ ಇರುವನು. ಆವನು ಸಕಲ ಪ್ರಾಣಿಗಳ ಹೃದಯದಲ್ಲಿ ನೆಲೆಸಿರುವನು. ಇವನು ಯಾವಾಗಲೂ ಹುಟ್ಟುವುದೂ ಇಲ್ಲ ; ಸಾಯುವುದೂ ಇಲ್ಲ. ಇವನು ಒ೦ದಾವೃತ್ತಿಯಿದ್ದವನಾಗಿ ಮ ಅಭಾವವನ್ನು ಹೊಂದತಕ್ಕವನೂ ಅಲ್ಲ ಗಿ೬ ಆಯ್ಯಾ! ಬ್ರಾಹ್ಮಣೋತ್ತಮರೇ ! ಇ೦ತಹ ಪರಬ್ರಹ್ಮವು ಶ್ರೀರಾಮರೂಪದಿಂದ ಅವ ತರಿಸಿರುವಾಗಲೂ, ಆ ಶ್ರೀರಾಮನ ದಯೆಯಿಲ್ಲದೆ ಅದರ ತತ್ವವನ್ನು ತಿಳಿಯುವುದು ಸಾಧ್ಯವಲ್ಲ | ಎಲೈ ಮುನಿಶ್ರೇಷ್ಠರೇ ! ಬ್ರಹ್ಮಾದಿಗಳೂ ಅವನನ್ನು ಸ್ಪಷ್ಟವಾಗಿ ಅರಿಯಲಾರರು; ಹೀಗಿ ರುವಾಗ, ಮಹಾಮೋಹವೆಂಬ ಸರ್ಪದಿಂದ ದಷ್ಟ ರಾಗಿರುವ ಇತರರ ವಿಷಯವನ್ನು ಹೇಳುವ ದೇನು ! Y. ಆದರೂ, ಅಯ್ಯಾ ಬಾಹ್ಮಣಶ್ರೇಷ್ಠರೇ ! ನನಗೆ ಬುದ್ದಿಯಿರುವಮಟ್ಟಿಗೆ, ನಾನು ಹೇಗೆ ಕೇಳಿ ತಿಳಿದುಕೊಂಡಿರುವೆನೋ ಹಾಗೆಯೇ, ಶ್ರೀರಾಮನ ತತ್ವವನ್ನು ಸಂಕ್ಷೇಪಿಸಿ ಹೇಳುವೆನು ; ನೀವು ಅದನ್ನು ತಿಳಿಯುವರಾಗಿರಿ ||೯|| ಶ್ರೀಮದ್ರಾಮಾಯಣವು, ತನ್ನೊಳಗೆ ಗಾಯತ್ರಿಯನ್ನೆಲ್ಲ ಒಳಗೊಂಡು ಗಾಯತ್ರಿಯ ಅರ್ಥವನ್ನು ಮುಖ್ಯವಾಗಿ ಬೋಧಿಸತಕ್ಕುದಾಗಿರುವುದು. ಹೀಗಿರುವುದರಿಂದ, ಇದು ಎಂತಹ 'ಪಂಡಿತರಿಗೂ ತಿಳಿಯಲಸಾಧ್ಯವಾಗಿರುವುದು ರಿ೧೦||