ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಭಾಗೀಶ ಮೋಹಿತಧಿಯಾಂ ವಿವಿಧಾಕೃತಿಸ್ತ್ರ ಯಡ್ಡದವಿ ಸಲಿಲಪತ್ರಗತೋ ಹೈನೇಕಃ ||೨೫| ಪ್ರತ್ಯಕ್ಷತೋದ್ಯ ಭವತಶ್ಚರಣಾರವಿನ್ನಂ ಪಶ್ಯಾಮಿ ರಾಮ ತಮಸಃ ಪರತಃ ಸ್ಥಿತಸ್ಯ | ಸಪತಮಸತಾಮುವಿಗೋಚರೋಪಿ ತನ್ನನ್ನಪೂತಹೃದಯೇಸು ಸದಾ ಪ್ರಸನ್ನತಿ || ೨೬ || ಪಶ್ಯಾಮಿ ರಾಮ ತವ ರೂಪಮರೂಪಿಣೋಪಿ ಮಾಯಾವಿಡಮ್ಮನಕೃತಂ ಸುಮನುಷ್ಯನೇಪಮ್ | ಕನ್ನರ್ಷಕೊಟಸುಭಗಂ ಕಮನೀಯತಾಪ ಬಾಣಂ ದಯಾದ್ರ್ರಹೃದಯಂ ತಟಾರುವಮ್ ||೨೭ || ಸೀತಾಸಮೇತಮಸತಾಂ ಪರಮಪದ್ಧಪ್ಯಂ ಸೌಮಿತ್ರಣಾ ನಿಯತಸೇವಿತಪಾದಪದ್ಮಮ್ | ನೀಲೋತ್ಪಲದ್ಯುತಿಮನನ್ನಗುಣಪಕಾಶಂ ಮದ್ದಾಗಧೇಯಮನಿಶಂ ಪ್ರಣಮಾಮಿ ರಾಮಮ' ||೨|| ಪರಮೇಶ್ವರನೆ ! ಒಬ್ಬನೇ ಸೂರ್ಯನು ನೀರಿನ ಪಾತ್ರೆಯೊಳಗ ನಾನಾವಿಧವಾದ ಆಕಾರಗಳಿಂದ ಕಾಣಿಸುವಂತೆ, ನೀನು ಮಾಯಾಮೋಹಿತವಾದ ಬುದ್ದಿಯುಳ್ಳವರಿಗೆ ನಾನಾವಿಧ ರೂಪವುಳ್ಳವ ನಾಗಿ ಭಾಸಿಸುವೆ ||೨೫|| ಹೇ ರಾಮ ! ಅಜ್ಞಾನಾವರಣಕ್ಕೆ ದೂರವಾಗಿರುವ ನಿನ್ನ ಚರಣಾರವಿಂದವನ್ನು ಈಗ ನಾನು ಪ್ರತ್ಯಕ್ಷವಾಗಿ ನೋಡುತಿರುವೆನು ನೀನು ನಿನ್ನ ಪರಮಾರ್ಧರೂಪದಲ್ಲಿ ದುಷ್ಟರಿಗೆ ಗೋ ಚರನಾಗದಿದ್ದರೂ, ನಿನ್ನ ಮಂತ್ರ ಜಪದಿಂದ ಪರಿಶುದ್ದ ಹೃದಯರಾದವರ ವಿಷಯದಲ್ಲಿ ಸರ್ವದಾ ಪ್ರಸನ್ನನಾಗಿರುವೆ ||೨೬|| ಹೇ ರಾಮ ! ನೀನು ವಸ್ತುತಃ ರೂಪರಹಿತನಾಗಿದ್ದರೂ, ನಿನ್ನ ಮಾಯಾವಿಡಂಬನದಿಂದ ರಚಿತವಾಗಿರುವ-ಕೋಟಿಮನ್ಮಧಸುಂದರವಾದ-ರಮ್ಯವಾದ ಧನುರ್ಬಾಣಗಳನ್ನು ಧರಿಸಿರುವ ದಯಾದ್ರ್ರಹೃದಯ ವಾದ- ಮಂದಸ್ಮಿತಸುಂದರಮುಖವಾದ- ನಿನ್ನ ಈ ಮನುಷ್ಯ ರೂಪವನ್ನು, ನಾನು ಅತ್ಯಾದರದಿಂದ ನೋಡುತಿರುವೆನು ||೨೭11 | ದುರಾತ್ಮರಿಗೆ ಸುತರಾಂ ಅಪ್ರದೃಷ್ಯನಾಗಿಯೂ, ಲಕ್ಷ್ಮಣನಿಂದ ನಿಯಮಪೂರ್ವಕವಾಗಿ ಸೇವಿಸಲ್ಪಡುವ ಪಾದಪದ್ಯವುಳ್ಳವನಾಗಿಯ, ನೀಲೋತ್ಪಲಕ್ಕೆ ಸಮಾನವಾದ ಶರೀರಕಾಂತಿ ಯುಳ್ಳವನಾಗಿಯೂ, ಅನಂತಕಲ್ಯಾಣಗುಣಭರಿತನಾಗಿಯೂ ಇರುವ, ನನ್ನ ಭಾಗಧೇಯ ಪರಿ ಪಾಕರೂಪನಾದ, ಶ್ರೀ ಸೀತಾದೇವೀ ಸಮೇತನಾಗಿರುವ ಶ್ರೀರಾಮನನ್ನು, ನಾನು ನಿರಂತರವಾಗಿ ನಮಸ್ಕರಿಸುವೆನು ||೨೮||