ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೬೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ତ ಅರಣ್ಯಕಾಂಡಃ ಸ ಪವಿಕ್ಯ ಮುನಿಶ್ರೇಷ್ಠಂ ತಪಸಾ ದುಪ್ಪ ದರ್ಷನಮ್ | ಕೃತಾಇಲಿರುವಾಚೇದಂ ರಾಮಾಗಮನಯಜ್ಞಸಾ |೫°!! ರಾಮೋ ದಾಶರಧಿರ್ಬಹ್ಮ್ರ ಸೀತಯಾ ಲಕ್ಷಣೇನ ಚ | ಆಗ ದರ್ಶನಾರ್ಥಂ ತೇ ಬಹಿಷ್ಣತಿ ಸಾಲಿಃ || ೫೧॥ ಅಗಸ್ಯ ಉವಾಚ ಶೀಘುಮಾನಯ ಭದ• ತೇ ರಾಮಂ ಮಮ ಹೃದಿ ಸ್ಥಿತವ | ತಮೇವ ಧ್ಯಾಯಮಾನೋಹಂ ಕಾಂಕ್ಷಮಾಣಕ್ಕದಾಗಮವ | ೫೨|| ಇತ್ಯುಕಾ ಸ್ವಯಮುತ್ತಾಯ ಮುನಿಭಿಃ ಸಹಿತೋ ಮುನಿಃ | ಅಭ್ಯಯಾತ್ ಪರಯಾ ಭಕಾ ಗತೋ ರಾಮಮಧಾಬ)ವೀತ್ || ೫೩|| ಆಗಚ್ಛ ರಾಮ ಇದಂ ತೇ ದಿವ್ಯಾ ತೇದ್ಯ ಸಮಾಗಮಃ | ಪ್ರಿಯಾ ತಿಥಿರ್ಮಮ ಪಾಪ್ರೊಸ್ಯದ ಮೇ ಸಫಲಂ ದಿನಮ್ ||೫೪! ರಾಮೋಪಿ ಮುನಿಮಾಯಾನ್ಯಂ ದೃಪ್ಲಾ ಹರ್ಷಸಮಾಕುಲಃ | ಜಾಹ ಪರಮಪ್ರೀತಃ ತಸ್ಯ ಪಾದೌ ಪರಸಃ || ೫೫॥ ಅಲ್ಲಿಗೆ ಪ್ರವೇಶಿಸಿ, ಆ ಅಗಸ್ತ್ರಶಿಷ್ಯನು, ತನ್ನ ತಪೋಮಹಿಮೆಯಿಂದ ಸತ್ವಭೂತಗಳಿಗೂ ಅಪ್ರಧೃಷ್ಯನಾಗಿರುವ ಅಗಸ್ಯ ಮಹರ್ಷಿಯನ್ನು ಕುರಿತು, ಅಂಜಲಿಬಂಧಮಾಡಿಕೊಂಡು, ಶ್ರೀರಾ ಮನ ಆಗಮನವನ್ನು ಹೀಗೆ ಶೀಘ್ರವಾಗಿ ವಿಜ್ಞಾಪಿಸಿದನು ||೫|| ಎಲೈ ಬ್ರರ್ಹ ವರರೆ' ದಶರಧಪುತ್ರನಾದ ರಾಮನು, ಸೀತಾಲಕ್ಷ್ಮಣರೊಡನೆ ತಮ್ಮ ದರ್ಶನಕ್ಕೊಸ್ಕರ ಒಂದು, ಆಶ್ರಮದ ಹೂರಗೆ ಒದ್ದಾಂಜಲಿಯಾಗಿ ಕಾಯ್ದು ಕೊಂಡಿರುವನು || ಇದನ್ನು ಕೇಳಿ, ಅಗಸ್ಯಮುನಿಯು ಶಿಷ್ಯನಿಗೆ ಹೇಳುವನು - ವತ್' ನಿನಗೆ ಮಂಗಳವಾಗಲಿ ನನ್ನ ಹೃದಯದಲ್ಲಿ ನಲೆಸಿರುವ ಶ್ರೀರಾಮನನ್ನು ಬೇಗನೆ ಕರೆದು ಕೊಂಡು ಬಾ ನಾನು ಅವನ ಆಗಮನವನ್ನು ಬಯಸಿ ಅವನನ್ನೇ ಧ್ಯಾನಿಸುತಿರುವೆನು ||೫೨ ಹೀಗೆಂದು ಶಿಷ್ಯನಿಗೆ ಹೇಳಿ, ಅಗಸ್ಯಮುನಿಯು, ತಾನೇ ಅಲ್ಲಿಂದ ಎದ್ದು ಋುಷಿಗಳೊಡನೆ ಪರಮಭಕ್ತಿಯಿಂದ ಶ್ರೀರಾಮನನ್ನು ಎದುರುಗೊಂಡನು, ಬಳಿಕ ಅಲ್ಲಿ ಹೋಗಿ ಶ್ರೀರಾಮನನ್ನು ಕುರಿತು ಹೀಗೆ ಹೇಳಿದನು ||೩|| ಎಲೈ ರಾಮನೆ' ಒಳಕ್ಕೆ ಬರುವನಾಗು, ನಿನಗೆ ಮಂಗಳವಾಗಲಿ ನನ್ನ ಸುಕೃತವಿಶೇಷ ದಿಂದ ಈ ದಿವಸ ನನಗೆ ನಿನ್ನ ಸಮಾಗಮ ಸುಖವು ಲಭಿಸಿತು ನನಗೆ ಪ್ರಿಯನಾದ ಅತಿಧಿಯಾಗಿ ನೀನು ಒಂದಿರುವೆ, ಈಗ ಈ ದಿವಸವು ಸಫಲವಾಯ್ತು ||೫|| - ಹೀಗೆ ವಿಜ್ಞಾಪಿಸಿಕೊಂಡು ತನ್ನ ಹತ್ತಿರಕ್ಕೆ ಬರುತ್ತಿರುವ ಆಗಮುನಿಯನ್ನು ಕಂಡು, ಪರಂತಪನಾದ ರಾಮನೂ ಕೂಡ, ಪರಮ ಹರ್ಷಯುಕ್ತನಾಗಿ, ಮಹಾ ಪ್ರೀತಿಸಮನ್ವಿತನಾಗಿ ಅವನ ಕಾಲುಗಳಿಗೆ ನಮಸ್ಕರಿಸಿದನು ||೫೫||