ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೭೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಅಥ ಶ್ರೀಮದರಣ್ಯಕಾಣೋ ಸಪ್ತಮಃ ಸರ್ಗಃ. ಅಗಸ್ಯ ಉವಾಚ. ಇದಾಗಮನವೋವಾಹಂ ಪ್ರತೀರ್ಕ್ಷ ಸಮವಸ್ಥಿತಃ | ಯದಾ ಕ್ಷೀರಸಮುದ್ರಾ ಬ್ರಹ್ಮಣಾ ಪ್ರಾರ್ಥಿತಃ ಪುರಾ ||೧| ಭೂಮೇರ್ಭಾರಾದನುಪತ್ಯರ್ಥಂ ರಾವಣ ವಧಾಯ ಚ | ತದಾದಿ ದರ್ಶನಾಕಾಂಕ್ಷಿ ತವ ರಾಮ ತಪಶ್ಚರ್ರ - ವಸುಮಿ ಮುನಿಭಿಃ ಸಾರ್ಧಂ ತ್ವಾಮೇವ ಪರಿಚಿನ್ನರ್ಯ ! ಕದಾ ಮೇ ದರ್ಶ ನಂ ಭೂಯಾತ್ ತವೇತಿ ರಘುನನ್ನ ||೬|| ಸೃಷ್ಟೇ ಪಾದೇಕಏವಾಸೀ ನಿರ್ವಿಕಲ್ನೋನುಪಾಧಿಕಃ | ದಾಶ್ರಯಾ ತದ್ವಿಪಯಾ ಮಾಯಾ ತೇ ಶಕ್ತಿ ರುಚ್ಯತೇ |೪|| ತ್ವಾಮೇವ ನಿರ್ಗುಣಂ ಶಕ್ತಿಃ ಆವೃತಿ ಯದಾ ತದಾ || ಅವ್ಯಾಹೃತಮಿತಿ ಪಹುಃ ವೇದಾನಪರಿನಿವೃತಾಃ || ! - -- ಅರಣ್ಯಕಾಂಡದಲ್ಲಿ ಏಳನೆಯ ಸರ್ಗವು < <raw ಅಗಸ್ಯ ಮುನಿಯು ಹೇಳಿದುದೇನೆಂದರೆ - ಎಲೈ ರಾಮಚಂದ್ರನೆ' ನಾನು ನಿನ್ನ ಆಗಮನವನ್ನೇ ನಿರೀಕ್ಷಿಸುತಿದ್ದೆನು, ಯಾವಾಗ ನೀನು ಭೂಮಿಯ ಭಾರವನ್ನು ಹೋಗಲಾಡಿಸುವುದಕ್ಕೂ ರಾವಣನನ್ನು ಕೊಲ್ಲುವುದಕ್ಕೂ ಪೂರ್ವದಲ್ಲಿ ಬ್ರಹ್ಮನಿಂದ ಕ್ಷೀರಸಮುದ್ರ ಸಮೀಪದಲ್ಲಿ ಪ್ರಾರ್ಥಿಸಲ್ಪಟ್ಟೆ ಯೂ, ಆಕಾಲಮೊದಲುಗೊಂಡು, ನಾನು ನಿನ್ನ ದರ್ಶನವನ್ನು ಅಪೇಕ್ಷಿಸಿ ತಪಸ್ಸು ಮಾಡುತ್ತ ಯಾವಾಗ ನಿನ್ನ ದರ್ಶನವಾದೀತೋ ಎಂದು ನಿನ್ನನ್ನೇ ಧ್ಯಾನಿಸುತ, ಮುಸಿಳತನ ಇಲ್ಲಿ ವಾಸಮಾಡಿಕೊಂಡಿರುವೆನು ||೧-೩|| ಎಲೈ ಸ್ವಾಮಿಯ? ಈ ಜಗತ್ತು ಸೃಷ್ಟಿಯಾಗುವುದಕ್ಕೆ ಮೊದಲು, ನಿರ್ವಿಕಲ್ಪನಾಗಿಯ ಉ ರಾಧಿರಹಿತನಾಗಿಯ ಇರುವ ನೀನೊಬ್ಬನೇ ಇದ್ದೆ ನಿನ್ನನ್ನು ಆಶ್ರಯಿಸಿಕೊಂಡು ನಿನ್ನನ್ನೇ ವಿಷ ಯಮಾಡಿಕೊಂಡು ಪ್ರವರ್ತಿಸುವ ನಿನ್ನ ಶಕ್ತಿಯು ಮಾಯೆಯೆಂದು ಹೇಳಲ್ಪಡುವುದು ||೪|| ನಿರ್ಗುಣನಾದ ನಿನ್ನನ್ನು ಯಾವಾಗ ಈ ಶಕ್ತಿಯು ಆವರಿಸುವುದೋ, ಆಗ ಇದನ್ನು ಅವ್ಯಾಹೃತವೆಂದು ವೇದಾಂತಜ್ಞಾನಸಂಪನ್ನರು ಹೇಳುವರು ||೫|