ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೭೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

G & ಅರಣ್ಯಕಾಂಡಃ ೬೧ ಆದ್ ಮಾಯಾಸ ರೂಪಂ ತೇ ವಕ್ಷ್ಯಾಮಿ ತದನನ್ನರಮ್ | ಜ್ಞಾನಸ್ಯ ಸಾಧನಂ ಪಶ್ಚಾತ ಜ್ಞಾನ ವಿಜ್ಞಾನಸಂಯುತಮ್ | ವಿಜ್ಞೆಯಂ ಪರಮಾತ್ಮಾನಂ ಯತ್ಯಾ ಮುಚ್ಯತೇ ಭಯಾತ್ || ಅನಾತ್ಮನಿ ಶರೀರಾದೌ ಆತ್ಮಬುದ್ದಿಸ್ತು ಯಾ ಭವೇತ್ | ಸೈವ ಮಾಯಾ ತಯ್ಕೆವಾಸ ಸಂಸಾರಃ ಪರಿವರ್ತತೇ || ೧೬ || ರೂಪೇ ದ್ವೇ ನಿಶ್ಚಿತೇ ಪೂರ್ವಂ ಮಾಯಾಯಾ ರಘುನನ್ನ | ವಿಕ್ಷೇಪವರಣೇ ತತ್ರ ಪ್ರಧನಂ ಕಲ್ಪತೇ ಜಗತ್ ||೧೭|| ಸಮ್ಯಾದಿ ಬ್ರಹ್ಮಪರ್ಯನ್ಯಂ ಸ್ಕೂಲಸೂಕ್ಷಾದಿಭೇದತಃ | ಅಪರಂ ತಖಿಲಂ ಜ್ಞಾನರೂಪವಾವೃತ್ಯ ತಿಷ್ಠತಿ ||೧v|| ಮಾಯಯಾ ಕಿತಂ ವಿಶ್ವಂ ಪರಮಾತ್ಮನಿ ಕೇವಲೇ | ರಜ್ ಭುಜಜ್ಜಿ ವದ್ಧಾ ನಾ ವಿಚಾರೇ ನಾಸ್ತಿ ಕಿಞ್ಞನ ||೧೯|| ಶ್ರಯತೇ ದೃಶ್ಯತೇ ಯದ್ಯತ್ ಸ್ಮರತೇ ವಾ ನರೈಃ ಸದಾ | ಅಸದೇವ ಹಿ ತತ್ ಸರ್ವಂ ಯಥಾ ಸ್ಪಪ್ರಮನೋರಥಾಃ ||೨೦|| ಮೊದಲು ನಿನಗೆ ಮಾಯೆಯ ಸ್ವರೂಪವನ್ನು ಹೇಳುವೆನು, ಆಮೇಲೆ ಜ್ಞಾನಕ್ಕೆ ಸಾಧನ ವನ್ನೂ, ಬಳಿಕ ವಿಜ್ಞಾನ ಸಹಿತವಾದ ಜ್ಞಾನದ ಸ್ವರೂಪವನ್ನೂ, ಅನಂತರ ವಿಜೇಯ (ತಿಳಿಯಲ್ಪಡ ಬೇಕಾದ)ನಾದ ಪರಮಾತ್ಮನ ಸ್ವರೂಪವನ್ನೂ ಹೇಳುವೆನು ಇದನ್ನು ತಿಳಿದುಕೊಂಡರೆ, ಪುರು ಷನು ಸಂಸಾರಭಯದಿಂದ ಮುಕ್ತನಾಗುವನು ||೧೫|| ಆತ್ಮವಲ್ಲದ ಶರೀರಾದಿ ಪದಾರ್ಧದಲ್ಲಿ ಆತ್ಮನೆಂಬ ಬುದ್ದಿಯಿಡುವುದಾವುದುಂಟೋ, ಅದೇ ಮಾಯಯು, ಅದರಿಂದಲೇ ಮೊದಲು ಈ ಸಂಸಾರವು ಪ್ರಮರಿಸುವುದು ||೧೬|| ಎಲೈ ರಘುನಂದನನೆ! ವಿಕ್ಷೇಪವೆಂದೂ, ಆವರಣವೆಂದೂ, ಈ ಮಾಯಗೆಪ್ರಥಮತಃ ಎರಡು ರೂಪಗಳಿರುವುವೆಂದು ಶಾಸ್ತ್ರದಲ್ಲಿ ನಿಶ್ಚಯಿಸಲ್ಪಟ್ಟಿರುವುದು ಅವುಗಳಲ್ಲಿ ಮೊದಲನೆಯದಾದ ವಿಕ್ಷೇಪಶಕ್ತಿಯು, ಆಬ್ರಹ್ಮಸಂಬಸರಂತವಾಗಿರುವ ಸ್ಕೂಲಸೂಕ್ಷಾದಿಭೇದಯುಕ್ತವಾದ ಜಗ ತನ್ನು ಕಲ್ಪಿಸುವುದು, ಮತ್ತೊಂದಾದ ಆವರಣ ಶಕ್ತಿಯಾದರೋ, ಸಕಲವಾದ ಜ್ಞಾನಸ್ವರೂಪ ವನ್ನೂ ಆವರಿಸಿಕೊಂಡು ಇರುವುದು ||೧೭-೧೮|| ಒಂದು ರಟ್ಟು ನಲ್ಲಿ ಸರ್ಪರೂಪವು ಭ್ರಾಂತಿಯಿಂದ ಕಲ್ಪಿತವಾಗುವಂತೆ, ಕೇವಲನಾದ ಪರ ಮಾತ್ಮನಲ್ಲಿ ಮಾಯಯಿಂದ ವಿಶ್ವವು ಕಲ್ಪಿತವಾಗಿರುವುದು, ವಿಚಾರಮಾಡಿನೋಡುವಾಗ ಯಾವು ದೂ ಇಲ್ಲವಾಗುವುದು ||೧೯|| ನಮ್ಮ ಸ್ವಪ್ನದಲ್ಲಿ ಕಂಡ ಪದಾರ್ಥಗಳೂ ಹೃದಯದಲ್ಲಿ ಕಲ್ಪಿಸಿಕೊಂಡ ಮನೋರಧಗಳ ಹೇಗೆ ಸುತರಾಂ ಅಸತ್ಯವಾದುವುಗಳೋ, ಹಾಗೆ ಪುರುಷರಿಂದ ಯಾವುದು ಕೇಳಲ್ಪಡುತ್ತದೆಯೋ