ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೮೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ಲೆ ಶ್ರೀ ತತ್ವ ಸಂಗ್ರಹ ರಾಮಾಯಣ [ಸರ್ಗ ತಪಸಸ್ಯ ಫಲಂ ಪಾಪಂ ವನವಾಸವ್ರತಸ್ಯ ಚ | ಭುಂಕ್ಷ ಭೋರ್ಗಾ ಮಯಾ ಸಾಕಂ ದೇವಲೋಕೇಪಿ ದುರ್ಲಭಾನ್ || ಮಮ ತಂ ನರಶಾರ್ದೂಲ ಭರ್ತಾ ಭವಿತುಮರ್ಹಸಿ ||೭|| ಇಮಾಂ ವಿರೂಪವಾಲಮ್ಮ ಯದಿ ತ್ವಂ ಮಾಮುಪೇಕ್ಷಸೇ | ಅದ್ಯಮಾಂ ಭಕ್ಷಯಿಷ್ಯಾಮಿ ಪಶ್ಯತಸ್ತವ ಜಾನಕೀಮ್ #vil ಇತ್ಯುಕ್ಯಾ ಮೃಗಶಾಲಾಕ್ಷೀಂ ಅಲಾತಸದೃಶೇಕ್ಷಣಾ | ಅಭ್ಯಧಾವತ ಸುಸಂಕ ದ್ದಾ ಮಹೋಲ್ಯಾ ರೋಹಿಣೀಮಿವ||೯|| ತಾಂ ಮೃತ್ಯು ಪಾಠಪ್ರತಿಮಾ೦ ಆಪತಂ ಮಹಾಬಲಃ ಉದ್ಧತ್ಯ ಖಡ್ಗಂ ಬೆಚ್ಚದ ಕರ್ಣನಾಸೇ ಸ ಲಕ್ಷ್ಮಣಃ | ೧೦ || ಸಾ ವಿಕ್ಷರ ರುಧಿರಂ ಒಹುಧಾ ಘೋರದರ್ಶನಾ | ಪಗೃಹ್ಯ ಬಾಹೂ ಗರ್ಜನೀ ಪವಿದೇಶ ಖರಾನಿಕವು ೧೧ || ತಾಂ ತದಾ ಪತಿತಾಂ ದೃಪ್ಲಾ ವಿರೂಪಾಂ ಶೋಣಿತೋಕ್ಷಿತಾಮ್ | ಭಗಿನೀಂ ಕೋಧಸನ್ಯಪಃ ಪರಃ ಸಪಚ್ಚ ರಾಕ್ಷಸಃ |೧೨| ನೀನು ಇದುವರೆಗೆ ಮಾಡಿದ ತಪಸ್ಸಿಗೂ ವನವಾಸದ ನಿಯಮಕ್ಕೂ ಕೂಡ ಈಗ ಫಲವು ಲಭಿಸಿತು ಈಗ ನನ್ನೊಡನೆ ದೇವಲೋಕದಲ್ಲಿಯೂ ಸಿಕ್ಕಲಾರದ ಭೋಗಗಳನ್ನು ಯಥೇಚ್ಛವಾಗಿ ಅನುಭವಿಸು ಹಚ್ಚು ಹೇಳುವುದೇನು ? ಈಗ ನೀನು ನನ್ನನ್ನು ಪತ್ನಿಯನ್ನಾಗಿ ಪರಿಗ್ರಹಿಸ ಬೇಕು ||೬° || ಈ ಕುರೂಪಳಾದ ಹೆಂಡತಿಯಲ್ಲಿ ಪ್ರೀತಿಯಿಟ್ಟು ಕೊಂಡು ನೀನು ನನ್ನನ್ನು ಉಪೇಕ್ಷಿ ಸುತ್ತೀಯಾದರೆ, ನೀನು ನೋಡುತಿರುವಹಾಗೆಯೇ ಈ ಜಾನಕಿಯನ್ನು ತಿಂದುಬಿಡುವನು ||೮|| ಹೀಗೆಂದು ಹೇಳಿ, ಕೊಳ್ಳಿಗೆ ಸಮಾನವಾದ ಕಣ್ಣುಳ್ಳ ಶೂರ್ಪಣಖಿಯು, ಅತಿ ಕೋಪಸಮ ನಿತಳಾಗಿ ಮಹೋಲೈಯು (ಉತ್ಪಾತಸೂಚಕವಾದ ಕೂಳ್ಳಿ) ರೋಹಿಣೀನಕ್ಷತ್ರವನ್ನು ಬೆನ್ನಟ್ಟಿ ಕೊಂಡು ಹೋಗುವಂತೆ ಮೃಗನೇತ್ರಿಯಾದ ಸೀತೆಯನ್ನು ಅಟ್ಟಿಕೊಂಡು ಹೋದಳು ||೯|| ಹೀಗೆ ಮೃತ್ಯುವಿನ ಪಾಶದಂತೆ ಬರುತಿರುವ ಶೂರ್ಪಣಖಿಯನ್ನು ನೋಡಿ, ಮಹಾಬಲ ನಾದ ಲಕ್ಷ್ಮಣನು, ತನ್ನ ಖಡ್ಗವನ್ನು ಎತ್ತಿ ಅವಳ ಕಿವಿಗುಗಳನ್ನು ಕತ್ತರಿಸಿಬಿಟ್ಟನು ||೨೧|| ಅನಂತರ, ಕಿವಿ ಗುಗಳ ರಂಧ್ರಗಳಲ್ಲಿ ಬಹಳವಾಗಿ ರಕ್ತವನ್ನು ಸುರಿಯಿಸುತ ನೋಡು ಇದಕ್ಕೆ ಭಯಂಕರಳಾಗಿರುವ ಆ ಶೂರ್ಪಣಖಿಯು, ತೋಳುಗಳನ್ನು ಮೇಲಕ್ಕೆತ್ತಿಕೊಂಡು ಕಿರಿ ಚುತ, ಖರಸುರನ ಸಮೀಪಕ್ಕೆ ಹೋದಳು ||೧೧|| ಆಗ ತನ್ನ ಮುಂದುಗಡೆ ವಿಕೃತರೂಪಳಾಗಿ ರಕ್ತದಿಂದ ನೆನೆದುಹೋಗಿ ಬಿದ್ದು ಹೊರಳು ತಿರುವ ತನ್ನ ತಂಗಿಯನ್ನು ನೋಡಿ, ಮಹಾ ಕ್ರೋಧಸಮನ್ವಿತನಾದ ಖರಾಸುರನು ಈರೀತಿಯಾಗಿ ಕೇಳಿದನು ||೧೨||