ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೮೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಗನ್ಗರ್ವರಾಜಪ್ರತಿಮೌ ಪಾರ್ಥಿವವ್ಯಜ್ಞನಾತ್ | ದೇವ್ ವಾ ಮಾನುಷ ವಾ ತ್ ನ ತರ್ಕಯಿತುಮುತ್ಸಹೇ ||೧೯|| ತರುಣೀ ರೂಪಸನ್ನನ್ನಾ ಸರ್ವಾಭರಣಭೂಮಿತಾ | ದೃಷ್ಟಾ ತತ್ರ ಮಯಾ ನಾರೀ ತಯೋರ್ಮಧೈ ಸುಮಧ್ಯಮಾ ||೨೦|| ತಾಭ್ಯಾಮು,ಭ್ಯಾಂ ಸಮಯ ಪ್ರಮದಾನಧಿಕೃತ್ಯ ತಾವು' ! ಇಮಾಮವಸ್ತಾಂ ನೀತಾಹಂ ಯಥಾನಾಥಾ ಸತೀ ತಥಾ ||೨೧|| ಶುತ್ವಂ ಭಗಿನೀವಾಕ್ಯಂ ಖರಃ ಕುದ್ರೋಬ್ರವೀದ್ದ ಚಃ | ಅಮೀನ್ ಮಪಿ ಪರ್ಜನ್ಯಂ ಅಪಿ ಮೃತ್ಯುಂ ಯಮಂ ತಥಾ | ಬ್ರಹ್ಮಾಣಮಪಿ ರುದ್ರಂ ವಾ ವಿಷ್ಣುಂ ವಾ ಹನ್ನಿ ತೇ ಕೃತೇ |೨೨| ನ ರಾಮಂ ಗಯೇ ವೀರಾತ್ ಮಾನುಷಂ ಕ್ಷಂಜೀವಿತಮ್ ||೨೩|| ಇತ್ಯುಕಾ ಸ ದುರಾಧರ್ವಃ ಖರೋ ರಾಕ್ಷಸಪುಜ್ಞ ವಃ | ತತ್ರ ದರ್ಶಿತರ್ವಾಣ ಯಮ್ ರಾಮಸಾಂಸಯಾ ||8|| ರಾಕ್ಷಸಾನಾಂ ಸುಫೈರಾಣಾಂ ಸಹಸ್ರಾಣಿ ಚತುರ್ದಶ | ನಿರ್ಯಾತಾನಿ ಜನಸ್ಥಾನಾತ್ ಖರಚಿತ್ತಾನುವರ್ತಿನಾಮ್ ||೨೫|| ಗಂಧರಾಜನಿಗೆ ಸಮಾನರಾಗಿಯ ರಾಜಚಿಹ್ನೆಗಳಿಂದ ಯುಕ್ತರಾಗಿಯೂ ಇರುವ ಇವರು, ದೇವತೆಗಳೋ-ಅಧಿವಾ ಮನುಷ್ಯರೋ-ನಿಶ್ಚಯಿಸಿ ಹೇಳಲು ನನಗ ಶಕ್ತಿ ಸಾಲದು ||೧೯|| ಅವರಿಬ್ಬರಿಗೂ ಮಧ್ಯದಲ್ಲಿ, ಯುವತಿಯಾಗಿಯೂ ಲೋಕೋತ್ತರ ಸುಂದರಿಯಾಗಿ ಸಾಭರಣಭೂಷಿತಳಾಗಿಯ ಕೃಶಮಧ್ಯಳಾಗಿಯೂ ಇರುವ ಒಬ್ಬ ಸ್ತ್ರೀಯನ್ನು ಕಂಡೆನು || ಆ ಸ್ತ್ರೀಯನ್ನು ನಿಮಿತ್ತ ಮಾಡಿಕೊಂಡು, ಇವರಿಬ್ಬರೂ ಒಟ್ಟಾಗಿ ಸೇರಿ, ನನ್ನನ್ನು ಅನಾ ಥಳಾದ ಸ್ತ್ರೀಯನ್ನು ಕಂಡಂತೆ ಈ ಅವಸ್ಥೆಯನ್ನು ಹೊಂದಿಸಿಬಿಟ್ಟರು ||೨೧|| ಹೀಗೆ ಹೇಳಿದ ತಂಗಿಯ ಮಾತನ್ನು ಕೇಳಿ, ಮಹಾ ಕೋಪಸಮನ್ನಿತನಾದ ಖರನು - ಎಲ್‌ ಶೂರ್ಪಣಖಿ ! ನಾನು ಈಗ ನಿನಗೋಸ್ಕರವಾಗಿ ಇಂದ್ರನನ್ನಾ ಗಲಿ ಪರ್ಜನ್ಯವನ್ನಾಗಲಿ ಮೃತ್ಯುವ ನ್ನಾಗಲಿ ಯಮಧಿರಾಜನನ್ನಾಗಲಿ ಬ್ರಹ್ಮನನ್ನಾಗಲಿ ರುದ್ರನನ್ನಾಗಲ ಎಷ್ಟು ವನ್ನಾಗಲಿ ಕೊಂದುಬಿಡುವೆನು ಕ್ಷಣಕಾಲಿಕವಾದ ಜೀವಿತವುಳ್ಳ ಮನುಷ್ಯ ಮಾತ್ರನಾದ ರಾಮನನ್ನು ನಾನು ಸ್ವಲ್ಪವೂ ಲಕ್ಷ್ಯಮಾಡುವುದಿಲ್ಲ ' ಎಂದು ಹೇಳಿದನು ||೨೨-೨೩|| ಈ ರೀತಿಯಾಗಿ ಹೇಳಿ, ಅಪ್ರದೃಷ್ಯನಾದ ಆ ಖರಾಸುರನು, ಶೂರ್ಪಣಖಿಯು ತೋರಿ ಸಿದ ಮಾರ್ಗವನ್ನನುಸರಿಸಿಕೊಂಡು, ರಾಮನನ್ನು ಕೊಲ್ಲಬೇಕೆಂಬ ಇಚ್ಛೆಯಿಂದ ಹೊರಟನು || ಆಗ ಮಹಾಕೂರರಾಗಿರುವ ಖರನ ಚಿತ್ತಾನುವರಿಗಳಾದ ಹದಿನಾಲ್ಕು ಸಾವಿರ ಮಂದಿ ರಾಕ್ಷಸರು ಜನಸ್ಥಾನದಿಂದ ಹೊರಟರು ||೨೫||