ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೮೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಮಯಾ ತೇವಾಂ ವರೋ ದಃ ಪೂರ್ವಜನ್ಮನಿ ಮಾಮಕಾಃ || ತದಾ ತೇ ಮೇ ಪುತೋಪಾಯ ತಪಸೈಪುರ್ಮಹಾಧಿಯಃ ||೩೨|| ತಪಸಂಹಂ ಪ್ರಸನ್ನೋ ತೇಷಾಂ ತೇಜ ತತೋ ಮಯಾ | ನಿಯಮಕ್ಷೀಣಸರ್ವಾಬ್ಲಾ ವರಂ ವವು ಪ್ರಚೋದಿತಾಃ | ಸಂಸಾರವಿಷವೃಕ್ಷಸ್ಯ ಛೇದನ ಮುಕ್ತಿವಾಜ್ಞಯಾ ||೩೩|| ಕರೋರವಚನಂ ಶುತ್ತಾ ತಾಮಸತ್ಯಂ ವಿಚಿನ್ನ , ಚ ||೩೪|| ಮುಕ್ತಿಧರ್ಮವಿಹೀನತ್ವಾತ್ ನ ಮುಕ್ತಿರ್ವಿದ್ಯತೇತ್ರ ವಃ | ಭವಧ್ಯಂ ರಾಕ್ಷಸಾಯಯಂ ತತ) ಮುಕ್ತಿರ್ಭವಿಷ್ಯತಿ ||೩೫! ರಾಮೋಹಂ ಭವಿತು ನೂನಂ ರಾವಣಂ ಹನುಮುದ್ಯತಃ | ತತ್ರ ಯುದ್ಧ ಹನಿಪ್ಯಾಮಿ ಯುರ್ಐಾ ಶಿವಗಣೈಃ ಸಹ ೩೬|| ಏವಂ ದತ್ತವರಾಃ ಸರ್ವೆ ರಾಕ್ಷಸತ್ವಂ ಪ್ರಪದಿರೇ | ನಿಹವ್ಯಾಮವಾತೋ ಮುಕ್ತಿದಾ ನಾಯ ರಾಕ್ಷಸಾಃ ||೩೭|| ನಾನು ಹಿಂದೆ ಅವರಿಗೆ ವರವನ್ನು ಕೊಟ್ಟಿರುವೆನು. ಮಹಾಮತಿಗಳಾದ ಅವರು, ಪೂರ್ವ ಜನ್ಮದಲ್ಲಿ ನನ್ನ ಭಕ್ತರಾಗಿದ್ದರು , ಆಗ ನನ್ನನ್ನು ಸಂತೋಷಪಡಿಸುವುದಕ್ಕಾಗಿ ತಪಸ್ಸು ಮಾ ಡಿದರು ||೩೨|| ಆಗ ಅವರ ತಪಸ್ಸಿನಿಂದ ನಾನು ಪ್ರಸನ್ನನಾದನು , ಬಳಿಕ, ತಪಶ್ಚರಣೆಯಿಂದ ಸಕಲ ಶರೀ ರವೂ ಕ್ಷಯಿಸಿಹೋಗಿರುವ ಆ ಖರಾದಿಗಳು, ನನ್ನಿಂದ ಪ್ರೇರಿತರಾಗಿ, ಮುಕ್ತಿಯನ್ನು ಪಡೆಯ ಬೇಕೆಂಬ ಇಚ್ಛೆಯಿಂದ “ ಸಂಸಾರವೆಂಬ ವಿಷವೃಕ್ಷವನ್ನು ಛೇದಿಸುವನಾಗು ' ಎಂದು ವರವನ್ನು ಬೇಡಿದರು || ೩ || ಹೀಗೆ ಅವರ ಬಾಯಲ್ಲಿ ಹೊರಟ ಕರಿನವಾದ ಮಾತನ್ನು ಕೇಳಿ, ಅವರಲ್ಲಿರುವ ತಾಮಸತ್ಯ ವನ್ನೂ ಪರಾಲೋಚಿಸಿ, ನಾನು ಅವರನ್ನು ಕುರಿತು - ಎಲೈ ರಾಕ್ಷಸರಾ ! ಮುಕ್ತಿಗೆ ಆವಶ್ಯಕ ಧರ್ಮವಾದ ಸಾತ್ವಿಕಸ್ವಭಾವವು ನಿಮಗಿಲ್ಲದಿರುವಕಾರಣ, ಈ ಜನ್ಮದಲ್ಲಿ ನಿಮಗೆ ಮುಕ್ತಿಯಾ ಗುವುದಿಲ್ಲ ನೀವು ಮುಂದೆ ರಾಕ್ಷಸರಾಗಿ ಹುಟ್ಟಿರಿ, ಆಗ ನಿಮಗೆ ಮುಕ್ತಿಯಾಗುವುದು ನಾನು ನಿಶ್ಚಯವಾಗಿ ರಾವಣನನ್ನು ಕೊಲ್ಲುವುದಕ್ಕೋಸ್ಕರ ರಾಮನಾಗಿ ಅವತರಿಸುವೆನು ಆ ಜನ್ಮದಲ್ಲಿ ನಿಮ್ಮನ್ನು ಶಿಷ್ಯ ಸಮಹದೊಡನೆ ಯುದ್ಧದಲ್ಲಿ ಕೊಲ್ಲುವೆನು ' ಎಂದು ವರವನ್ನು ಕೊಟ್ಟೆನು || ಹೀಗೆ ನನ್ನಿಂದ ವರ ಕೊಡಲ್ಪಟ್ಟಿರುವ ಅವರೆಲ್ಲರೂ ರಾಕ್ಷಸಜನ್ಮವನ್ನು ಪಡೆದಿರುವರು. ಅದು ಕಾರಣ, ಅವರಿಗೆ ಮುಕ್ತಿಯನ್ನು ಕೊಡುವುದಕ್ಕೋಸ್ಕರ ನಾನೇ ಈ ರಾಕ್ಷಸರನ್ನು ಕೊಲ್ಲ ಬೇಕಾಗಿರುವುದು ||೩||