ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೮೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡಃ ಇತ್ಯುಕ್ಯಾ ಲಕ್ಷ್ಮಣಂ ವೀರಃ ಸನ್ನದ್ಧಕವಚೋಭವತ್ | ಧನುಷ್ಟಬಾರಮಕರೋತ ಮೇಧಾಶನಿಸಮಸ್ಯನಮ್ ||೩|| ಸೀತಾಮಾಲೋಕ್ಯ ಸಂತ್ರಸ್ತಾಂ ಲಕ್ಷ್ಮಣ೦ ಪ್ರಾಹ ರಾಭುವಃ | ಯುದ್ಧಂ ಪಶ್ಯತು ಮೇ ಸೀತಾ ಭವಾನಪಿ ಚ ನಿರ್ಭಯಃ ||೩೯॥ ಇತಿ ಸನ್ನಿಶ್ಯ ಸೌಮಿತ್ರಿಸೀತಾಂ ಚಾಪಿ ಯಶಸ್ಸಿನೀಮ್ | ಸನ್ನದ್ಧಃ ಕವಚೀ ಧನ್ಸಿ ರಾಮೋ ಯುದ್ಧಾಯ ತಸ್ಥಿ ರ್ವಾ || ೪೦॥ ತತಆಗಮ್ಯ ರಕ್ಷಾಂನಿ ರಾಮುಖ್ಯೋಪರಿ ಚಿಕ್ಷಿಪುಃ : ಆಯುಧಾನಿ ವಿಚಿತ್ರಾಣ ಪಂಪಾರ್ಣಾ ಪಾದಾನಪಿ ೪೧|| ಬಲಮಾಲೋಕ್ಯ ತೇಜಸ್ವೀ ರಾಘುವೋ ರಂದುರ್ಧರಃ | ಶಬ್ದಮಾಪೂರಯಾಮಾಸ ಪ್ರಳಯಾಮ್ಯುದಸನ್ನಿಭವಮ್ ||೪೨। ಶ್ರುತಾ ಶಬ್ಬ ಧನಿಂ ಶಾರ್ಜ್ರಾವಂ ಚಾಪ್ತಿದಾರುಣವ | ಬಧಿರೀಭೂತಕರ್ಣಾಸ್ಟೋ ನ ಚ ಪಪ್ಪರೇ ತದಾ |೩| ಏಕಾಕಿನಂ ವಿಜೇಷ್ಯಾಮಃ ಸರ್ವೆ ಮೇಳನವಾಗತಾಃ | ಇತಿ ಸಣ್ಮನ ಮನಸಾ ಸರ್ವೆ ಪೇತ್ರಘೋತ್ತಮೇ |೪|| ಹೀಗಂದು ಲಕ್ಷ್ಮಣನಿಗೆ ಹೇಳಿ, ಮಹಾವೀರನಾದ ರಾಮನು, ಕವಚವನ್ನು ತೊಟ್ಟು ಕೊಂಡು ಸಿದ್ದನಾದನು ಮತ್ತು, ಸಿಡಿಲಿಗೆ ಸಮಾನವಾಗಿರುವ ಧನುಷಂಕಾರವನ್ನೂ ಮಾಡಿ ದನು ||೩೮|| ಆಗ ಲಕ್ಷ್ಮಣನನ್ನೂ ಭಯದಿಂದ ನಡುಗುತಿರುವ ಸೀತೆಯನ್ನೂ ನೋಡಿ ಶ್ರೀರಾಮನು * ಲಕ್ಷ್ಮಣ ! ಈಗ ನಾನು ರಾಕ್ಷಸರೊಡನೆ ಯುದ್ಧ ಮಾಡುವುದನ್ನು ಸೀತೆಯ ನೀನೂ ನಿರ್ಭ ಯವಾಗಿ ನೋಡುತಿರಿ ' ಎಂದು ಹೇಳಿದನು ||೩೯|| ಹೀಗೆಂದು ಲಕ್ಷ್ಮಣನಿಗೂ ಮಹಾ ಕೀರ್ತಿವಂತಳಾದ ಸೀತೆಗೂ ಆಜ್ಞಾಪಿಸಿ, ಯುದ್ಧ ಸನ್ನದ್ದ ನಾಗಿ, ಕವಚವನ್ನೂ ಧನುಸ್ಸನ್ನೂ ಧರಿಸಿಕೊಂಡು ಯುದ್ದಕ್ಕೋಸ್ಕರ ನಿಂತು ಕೊಂಡನು ||೪೦|| ಬಳಿಕ, ಆ ಸಮಸ್ತರಾಕ್ಷಸರೂ ರಾಮನ ಸಮೀಪಕ್ಕೆ ಬಂದು, ಅವನಮೇಲೆ ನಾನಾವಿಧ ವಾದ ಆಯುಧಗಳನ್ನೂ ಶಿಲೆಗಳನ್ನೂ ವೃಕ್ಷಗಳನ್ನೂ ಮಳೆಗರೆದರು ||೪೧|| ಆ ರಾಕ್ಷಸಸೈನ್ಯವನ್ನು ನೋಡಿ, ಮಹಾತೇಜಸ್ವಿಯಾದ ರಣಧೀರನಾದ ರಾಮನು, ಪ್ರಳ ಯಕಾಲಿಕವಾದ ಮೇಘಗರ್ಜನೆಗೆ ಸಮಾನವಾಗಿರುವಂತೆ ಶಂಖಧ್ವನಿಯನ್ನು ಮಾಡಿದನು ||೪೨|| ಆಗ ಅತಿ ಘೋರವಾಗಿರುವ ಈ ಶಂಖಧ್ವನಿಯನ್ನೂ ಧನುಷ್ಟಂಕಾರವನ್ನೂ ಕೇಳಿ, ಕಿವಿ ಕಿವುಡಾಗಿಬಿಟ್ಟ ಆ ರಾಕ್ಷಸರು, ಸ್ವಲ್ಪವೂ ಅಲುಗದಂತೆ ಸ್ತಬ್ದ ರಾಗಿ ನಿಂತುಬಿಟ್ಟರು ||೪|| ಅನಂತರ, ಒಬ್ಬೊಂಟಿಗನಾಗಿರುವ ಈ ರಾಮನನ್ನು ನಾವೆಲ್ಲರೂ ಒಟ್ಟುಗೂಡಿಕೊಂಡು ಗೆದ್ದು ಬಿಡೋಣ ” ಎಂದು ಮನಸ್ಸಿನಲ್ಲಿ ನಿಶ್ಚಯಮಾಡಿ ಕೊಂಡು, ಅವರೆಲ್ಲರೂ ಒಟ್ಟಾಗಿ ರಾಮನ ಮೇಲೆ ಬಂದು ಬಿದ್ದರು ||೪೪||