ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ರಾಮಾಯಣ, ರಥಮಹಾರಾಜನು ಜಂಬೂದ್ವೀಪಕ್ಕೆ ರಾಜಿನಾಗಿದ್ದನು. ಆತನ ರಾಜಧಾನಿ, ಅಯೋಧ್ಯೆಯು, ಈ ನಗರಕ್ಕೆ ಸಮೀಪದಲ್ಲಿ ಕೋಸಲನೆಂಬ ದೇಶವಿತ್ತು. ಆ ದೇಶದ ಅರಸನಾದ ಕೋಸಲನಿಗೆ ಬಹು ಸುಂದರಿಯಾದ ಒಬ್ಬ ಮಗಳು ಇದ್ದಳು. ಆಕೆಯ ಹೆಸರು ಕೌಸಲ್ಯ, ಆ ರಾಜಪುತ್ರಿಯ ವಿವಾಹಕ್ಕೆ ಯೋಗ್ಯಳಾದಳು ಆಕೆಯ ತಂದೆಯ ಕುಲ-ಶೀಲ ಸಂಪನ್ನನಾದ ದಶರಥ ಮಹಾರಾಜನಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಲು ನಿಶ್ಚಯ ಮಾಡಿದನು; ಮತ್ತು ದಶರಥನ ನ್ನು ಕರೆತರುವದಕ್ಕೋಸ್ಕರ ದೂತನನ್ನು ಅಯೋಧ್ಯೆಗೆ ಕಳುಹಿದನು; ಆ ಕಾಲದಲ್ಲಿ ದಶರಧನು ತನ್ನ ಮಿತ್ರರೊಡನೆ ಸರಯೂ ನದಿಯಲ್ಲಿ ಜಲಕ್ರೀಡೆಯಾಡುತ್ತಿದ್ದನು. ಇತ್ತ ಲಂಕೆಯಲ್ಲಿ ರಾಕ್ಷಾಧಿಪನಾದ ರಾವಣನು ಬ್ರಹ್ಮನೊಡನೆ ಮಾತ ನಾಡುತ್ತ ಕುಳಿತಾಗ ಆತನು ಬ್ರಹ್ಮನನ್ನು ಕೂರಿತು-ಭೋ ಪರಮೇಷ್ಠಿಯೇ, ನನ್ನ ಮರಣವು ಯಾರ ಕೈಯಿಂದ ಆಗುವದು, ಖಂಡಿತವಾಗಿ ಹೇಳು, ಸಂಶಯ ಪಡಬೇಡ,' ಎಂದು ಕೇಳಿದನು. ಆಗ್ಗೆ ಬ್ರಹ್ಮದೇವನೂಕೂಡ ಆ ಮಾತನ್ನು ಕೇಳಿ-ಎಲೈ ರಾವಣನೇ, ದಶರಥ ಮಹಾರಾಜನ ಪತ್ನಿಯಾದ ಕೌಸಲ್ಯಯ ಉದರದಲ್ಲಿ ಒಬ್ಬ ಪರಾಕ್ರಮಿಯಾದ ರಾಮನೆಂಬ ಮಗನು ಹುಟ್ಟ ತಕ್ಕದ ನಿರುತ್ತಾನೆ. ಪರಬ್ರಹ್ಮಸ್ವರೂಪಿಯಾದ ಆ ಶ್ರೀರಾಮನು ಯುದ್ಧದಲ್ಲಿ ನಿನ್ನ ಸ್ನು ಕೊಲ್ಲುವನು; ಈ ಹೊತ್ತಿಗೆ ಐದನೇ ದಿವಸದಲ್ಲಿ ಕೌಸಲೈಯನ್ನು ದಶ ರಥನಿಗೆ ಕೊಟ್ಟು ವಿವಾಹ ನಡೆಯುವದು, ಆ ವಿವಾಹ ಮುಹೂರ್ತವು ಬಹಳ ಪ್ರಶಸ್ತವಾಗಿರುವದರಿಂದ ಕೌಸಿಯು ಶ್ರೇಷ್ಠವಾದ ಪುತ್ರರತ್ನವನ್ನು ಪಡೆಯುವಳು. ಶುಕ್ಲ ಪಕ್ಷದ ಚಂದ್ರನಂತೆ ವೃದ್ಧಿ ಹೊಂದುವ ಆ ವೀರನು ನಿನ್ನನ್ನು ನಾಶಮಾಡದೆ ಬಿಡನು' ಎಂದು ಹೇಳಿದನು. ಬ್ರಹ್ಮನ ಈ ಮಾತುಗಳನ್ನು ಕೇಳಿದೊಡನೆ ರಾವಣನಿಗೆ ದೇಹಭಾನವು ಇಪ್ಪಿತು. ಒಡನೆ ಆ ರಾಕ್ಷಸೇಶ್ವರನು ಪುಷ್ಪಕವಿಮಾನವನ್ನೇರಿ ರಾಕ್ಷಸರೊಡನೆ ಅಯೋಧ್ಯೆಗೆ ಪ್ರಯಾಣ ಮಾಡಿದನು. ಆತನು ಸರಯನದಿಯಲ್ಲಿ ನೌಕಾರೂಢ ನಾಗಿದ್ದ ದಶರಥನನ್ನು ಯುದ್ಧದಲ್ಲಿ ಸೋಲಿಸಿ, ಆತನ ನಾವೆಯನ್ನು ಚೂರು ಚೂರು ಮಾಡಿದನು. ನಾವೆಯು ಒಡೆದ ಕೂಡಲೆ, ಸೇನಾಪತಿಯೇ ಮುಂತಾದ ಸಮಸ್ಯೆ ಜನರೂ ನದಿಯಲ್ಲಿ ಮುಳುಗಿದರು. ಆದರೆ ದೈವಯೋಗದಿಂದ ದಶರಥ ಸುಮಂತ್ರ ರಿಬ್ಬರಿಗೆ ಸ್ವಲ್ಪ ದೂರದ ಮೇಲೆ ನಾವೆಯ ಒಂದು ಹಲಿಗೆಯು ದೊರಕಿತು. ಅದರಿ ಬೃರಿ ಆ ಹಗೆಯನಾಶ್ರಯಿಸಿ ಸರಯೂಪ್ರವಾಹದೊಡನೆ ಹೋಗುತ್ತಿರಲು,