ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾತಕೆಂಡ ೧೨೩ ನದಿಯನ್ನು ದಾಟಿದೆವಷ್ಟೆ, ಆಗ ನಾನು ಎಲೈ ಭಾಗೀರಥಿಯೇ, ನಾವು ಹದಿನಾ ಲ್ಕು ವರ್ಷಗಳ ವನವಾಸವನ್ನು ಯಾವ ತೊಂದರೆಗಳೂ ಇಲ್ಲದಂತೆ, ಮುಗಿಸಿಕೊಂ ಡು ಬರುವಂತೆ ಅನುಗ್ರಹಿಸು ಬರುವಾಗ ನಾನು ನಿನ್ನನ್ನು ಅನೇಕ ವಿಧಗಳಾದ ಪೂಜಾದ್ರವ್ಯಗಳಿಂದ ಸಂತೋಷಗೊಳಿಸುವೆನು' ಎಂದು ಪ್ರಾರ್ಥನೆ ಮಾಡಿದ್ದನು. ಆದರೆ ಬರುವಾಗ ನಾವು ಪುಷ್ಪಕವನ್ನೇರಿ ಭರತನನ್ನು ನೋಡಬೇಕೆಂಬ ಕುತೂಹಲ ದಿಂದ ಅಯೋಧ್ಯೆಗೆ ಬಂದೆವು. ಆದ್ದರಿಂದ ಆ ವಿಷಯವನ್ನು ಮರೆತೆನು. ಈ ದಿವ ಸ ಅದು ಜ್ಞಾಪಕವಾಯಿತು. ಈ ಕಾರ್ಯವನ್ನು ಮುಗಿಸಿದ ಹೊರತು, ನನ್ನ ಮನಸ್ಸು ಸಮಾಧಾನಹೊಂದುವಂತೆ ಇಲ್ಲ' ಎಂದು ಹೇಳಿದಳು. ಆಗ ಶ್ರೀ ರಾಮ ನು ಪ್ರಿಯೆ, ನೀನು ಮಾಡಿದ ಹರಿಕೆಯ ಸಂಬಂಧವು ನನಗೂ ಇರುವದಷ್ಟೆ? ಆ ಹರಿಕೆಯು ನಿನ್ನದಲ್ಲ, ನನ್ನದು ಎಂದು ತಿಳಿಯತಕ್ಕದ್ದು. ನಾನು ನಾಳೆ ಪ್ರಾತಃ ಕಾಲದಲ್ಲಿ ಆ ನಿನ್ನ ಇಚ್ಛೆಯನ್ನು ಪೂರ್ಣ ಮಾಡುವೆನು. ಆದರೆ ನೀನು ಯಾವ ಸ್ಥಳದಲ್ಲಿ ಭಾಗೀರಥಿಯನ್ನು ಪೂಜೆಮಾಡಬೇಕೆಂದಿರುವೆ? ಅದನ್ನು ತಿಳಿಸಿದರೆ, ಈ ಗಲೇ ಎಲ್ಲ ಸನ್ಯಾಹಗಳನ್ನೂ ಅಲ್ಲಿ ಸಿದ್ಧ ಪಡಿಸುವಂತೆ ಅನುಚರರಿಗೆ ಆಜ್ಞೆ ಮಾ ಡುವೆನು” ಎಂದನು. ತನ್ನ ಪ್ರಾಣಪ್ರಿಯನಾದ ಶ್ರೀ ರಾಮನ ಈ ಮಾತುಗಳನ್ನು ಕೇಳಿ ಸೀತೆಯು 'ಪ್ರಾಣನಾಥನೇ ಸರಯೂ-ಗಂಗಾನದಿಗಳ ಸಂಗಮದಲ್ಲಿ ಈ ಹರಿಕೆಯನ್ನು ತೀ ರಿಸಬೇಕೆಂದು ಇಚ್ಚೆಯಾಗಿರುವದು” ಎಂದಳು. ಆಗ ಶ್ರೀ ರಾಮನು 'ಎಲೈ ಲ ಕ್ಷಣನೆ, ನಾಳೆ ಪ್ರಾತಃಕಾಲಕ್ಕೆ ಸರಿಯಾಗಿ ಗಂಗಾ-ಸರಯ ಸಂಗಮಕ್ಕೆ ನಾ ವು ಪ್ರಯಾಣ ಮಾಡಬೇಕೆಂದಿರುವೆವು. ಅಲ್ಲಿ ಸಮಸ್ತ ಉಪಕರಣಗಳನ್ನು ಸಿದ್ದ ಪಡಿಸ, ಎಂದು ಆಜ್ಞಾಪಿಸಿದನು. ಆಗ ಸೌಮಿತ್ರಿಯ ಆಜ್ಞೆಯಂತೆ ಸಮಸ್ತ ಸೇವೆ ಕರೂ ದಾರಿಗಳನ್ನು ಸರಿಮಾಡುವ ಪ್ರಯತ್ನಗಳಲ್ಲಿ ನಿರತರಾದರು. ಶ್ರೀ ರಾಮ ನು-ನಾಳೆ ಪ್ರಾತಃಕಾಲಕ್ಕೆ ಸರಿಯಾಗಿ ಎಲ್ಲರೂ ಸರಯೂ-ಗಂಗಾಸಂಗಮಕ್ಕೆ ನನ್ನೊಡನೆ ಪ್ರಯಾಣಮಾಡಬೇಕು' ಎಂದು ಸಭಾಸದರಿಗೂ, ಪೌರಜನರಿಗೂ ಆ ಜ್ಞಾಪಿಸಿದನು. ಆದಿವಸ ರಾತ್ರಿಯಲ್ಲೆಲ್ಲಾ ಪ್ರಯಾಣದ ಅನುಕೂಲಗಳು ನಡ ಯುತ್ತಿದ್ದವು. ಬೆಳಗಾಗುವದರೊಳಗೆ ಸಮಸ್ತ ಸೇನಾನಾಯಕರೂ ತಮ್ಮ ವಾ ಹನಗಳನ್ನೇರಿ ರಾಜಗೃಹದ ಹೊರಭಾಗದಲ್ಲಿ ಬಂದು ನಿಂತಿದ್ದರು, ಆನೆ, ಕುದುರೆ, ಒಂಟಿ, ಕಾಲಾಳುಗಳು ಇವೇ ಮೊದಲಾದ ಸೇನಾಂ ಗಗಳನ್ನು ಅರಮನೆಗೆ ಎದುರಾಗಿ ನಿಲ್ಲಿಸಿದ್ದರು. ಬೆಳಿಗ್ಗೆ ಶ್ರೀ ರಾಮನು