೧೨೬ ಶ್ರೀಮದಾನಂದ ರಾಮಾಯಣ, - - - ~-~~ ~~ - ~- ಆಶ್ರಮವನ್ನು ಕಟ್ಟಿಕೊಂಡು ಅದರಲ್ಲಿ ವಾಸವಾಗಿದ್ದರು. ಶ್ರೀ ರಾಮನು ತಮ್ಮ ಹಳೇ ಆಶ್ರಮದ ಬಳಿಗೆ ಬಂದಿರುವನೆಂಬ ವರ್ತಮಾನವನ್ನು ಕೇಳಿ, ಪರಮ ಹರ್ಷ ದಿಂದ ಶಿಷ್ಯಸಮೇತರಾಗಿ ಶ್ರೀ ರಾಮನ ದರ್ಶನದ ಸಲವಾಗಿ ತಮ್ಮ ಮೊದಲಿನ ಆಶ್ರಮಕ್ಕೆ ಬಂದರು. ಆ ಮಹರ್ಷಿಗಳನ್ನು ನೋಡಿದೊಡನೆ ಶ್ರೀ ರಾಮನು ದ್ವಾಂಗಪ್ರಣಾಮ ಮಾಡಿ ಸತ್ಕರಿಸಿದನು. ಬಳಿಕ ಸಮಸ್ತರೂ ಉಚಿತಾಸನಗಳಲ್ಲಿ ಕುಳಿತಿರಲು, ಶ್ರೀ ರಾಮನು ಸ್ವಾಮಿ ಮುದ್ಧ ಲರೆ, ತಾವು ಪೂರ್ವದಲ್ಲಿ ವಾಸ ಮಾಡಿದ ಈ ಆಶ್ರಮವನ್ನು ಏಕೆ ಬಿಟ್ಟಿರಿ?' ಎಂದನು. ಆಗ ಯುದ್ಧಲರು ಎಳ್ಳೆ ಭಕ್ತವತ್ಸಲನೆ, ಹದಿನಾಲ್ಕು ವರ್ಷ ವನವಾಸವನ್ನು ಮುಗಿಸಿ ಸುಖದಿಂದ ಬಂದೆ ನಿನ್ನನ್ನು ನೋಡಿ ನಾವು ಧನ್ಯರಾದೆವು. ನೀನು ಭರತನ ಪ್ರಾಣರಕ್ಷಣೆಗಾಗಿ ಲತ ಗಳನ್ನು ತರಿಸಿಕೊಂಡ ಬಳಿಕ ದಶರಥನೊಡನೆ ಇಲ್ಲಿಗೆ ಬಂದಿದ್ದೆಯಷ್ಟೆ? ಆಗ ನಿನ್ನ ಮೊದಲನೆಯ ದರ್ಶನವಾಗಿತ್ತು. ನಾನು ಇಲ್ಲಿ ವಾಸಮೂಡಗೆ ಇರುವದಕ್ಕೆ ಕಾರಣವನ್ನು ಹೇಳುವೆನು ಕೇಳು, ಇಲ್ಲಿ ಗಂಗಾ-ಸರಯೂ ನದಿಗಳಲ್ಲಿ ಒಂದಾ ದರೂ ನದಿ ಇಲ್ಲ. ಆದರೆ ಇಲ್ಲಿ ಅನೇಕ ಮಹರ್ಷಿಗಳು ತಪಸ್ಸುಗಳಿಂದ ಸಿದ್ದಿಯ ನ್ನು ಹೊಂದಿರುವರು. ನಾನಾದರೂ ಬಹು ಕಾಲಗಳ ವರೆಗೂ ಇಲ್ಲೇ ತಪಸ್ಸು ಮಾಡುತ್ತಿದ್ದನು. ಆದರೂ ಇಲ್ಲಿ ಪುಣ್ಯನದಿಗಳಿಲ್ಲದ್ದರಿಂದ ಬೇರೆ ಕಡೆಗೆ ಹೋಗ ಬೇಕಾಗಿದೆ” ಎಂದರು. ಶ್ರೀ ರಾಮನು (ಮಹಾಮುನಿಗಳೇ, ತಮಗೆ ಅನುಕೂಲವಾದ ಉಪಕರಣ ಗಳು ಯಾವವೊ? ಅವುಗಳನ್ನು ಇಲ್ಲಿ ದೊರಕುವಂತೆ ಮಾಡಿದರೆ, ತಾವು ಇಲ್ಲಿ ವಾಸಮಾಡಲು ಸಮ್ಮತಿಸುವಿರಾ ಹ್ಯಾಗೆ?' ಎಂದು ಪ್ರಶ್ನೆ ಮಾಡಿದನು. ಆಗ ಮುದ್ಗಲರು (ಮಹಾರಾಜನೆ, ಇಲ್ಲಿ ಗಂಗಾಸರಯೂ ನದಿಗಳ ಸಂಗಮವಾದದ್ದೇ ಆದರೆ, ನಮ್ಮ ಆಯುಷ್ಯವನ್ನೆಲ್ಲ ಇದೇ ಕ್ಷೇತ್ರದಲ್ಲಿ ಕಳೆಯುವೆವು' ಎಂದರು. ಬಳಿಕ ಶ್ರೀ ರಾಮನು (ಮಹಾತ್ಕರೆ, ಸರಯನದಿಗೆ ಅಂಥಾ ಶ್ರೇಷ್ಠತ್ವವು ಹ್ಯಾಗೆ ಬಂತು?' ಎಂದು ಪ್ರಶ್ನೆ ಮಾಡಿದನು. ಆಗ ಮುದ್ಗಲರು ಶ್ರೀ ರಾಮನೆ, ನಿನ್ನ ಚರಿ ಕೈಯನ್ನು ನಿನ್ನ ಸಂತೋಷಕ್ಕಾಗಿಯೇ ಹೇಳುವೆನು ಕೇಳು, ಪೂರ್ವದಲ್ಲಿ ಶಂ ಖಾಸುರನೆಂಬ ದೈತ್ಯನು ನಾಲ್ಕು ವೇದಗಳನ್ನೂ ಅಪಹಾರ ಮಾಡಿ, ಸಮುದ್ರದ ಲ್ಲಿ ಅಡಗಿದ್ದ ನಷ್ಟ ? ಆಗ ನೀನು ಮತ್ಯಾವತಾರ ಮಾಡಿ ಆ ದೈತ್ಯನನ್ನು ಸಂಹರಿ ಸಿ, ವೇದಗಳನ್ನು ಬ್ರಹ್ಮದೇವನಿಗೆ ಕೊಡಲಿಲ್ಲವೆ? ಆಗ ನಿನಗೆ ಪರಮಸಂತೋಷ ವಾಯಿತು. ಮತ್ತೆ ನೀನು ಪೂರ್ವರೂಪವನ್ನು ಧರಿಸಿದೆ. ಅದೇ ಕಾಲದಲ್ಲಿ ನಿನ್ನ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.