ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷ್ಣ ಏಧಿಯಿಂದ ಪಿತೃಶ್ರಾದ್ಧವನ್ನು ನೆರವೇರಿಸಿ, ಗದಾಧರನ ಪೂಜೆಯೇ ಮೊದಲಾದ ತೀರ್ಥಕೃತ್ಯಗಳನ್ನು ನಡೆಸಿದನು. ಗಯೆಯಲ್ಲಿ ರಘುನಾಥನು ಮೂರು ತಿಂಗಳವರೆ ಗೂ ದಾಸವಾಗಿದ್ದನ್ನು ಅಲ್ಲಿ ಅನೇಕ ಅನ-ಧರ್ಮಗಳಿಂದ ಬ್ರಾಹ್ಮಣರನ್ನು ಸಂತೋಷಗೊಳಿಸಿ, ಶ್ರೀ ರಾಮನು ಶಸ್ತಕವನ್ನೇ ಸರ್ವದಿಕ್ಕಿಗೆ ಪ್ರಯಾಣ ಮ ಇದನು, ಫಲ್ಲು ನದೀತೀರದಲ್ಲಿ ಶ್ರೀ ರಾಮನ ವಾಸವಾಗಿದ್ದರಿಂದ ಆ ಸ್ಥಳವ #ು ಚಿಹ್ಮಣರು ಕಮಗಯ ಎಂದು ಕರೆದರು. ಬಳಿಕ ಶ್ರೀ ರಾಮನು'ಗಂ m ಫಲ್ಕು ನದಿಗಳ ಸಂಗಮಕ್ಕೆ ಬಂದು, ಅಲ್ಲಿ ಸ್ವಲ್ಪ ವಿಶ್ರಾಂತಿಯನ್ನು ಹೊಂದಿ, ಮುದ್ದಲ ಮಹರ್ಷಿಗಳ ಹೊಸ ಆಶ್ರಮವಿದ್ದಲ್ಲಿಗೆ ಪ್ರಯಾಣಮಾಡಿದನು ಆ ಸ್ಥಳ ದಲ್ಲಿ ಗಂಗೆಯು ಉತ್ತರದಿಕ್ಕಿಗೆ ಪ್ರವಹಿಸುವದು. ಅದೇ ಸಳದಲ್ಲಿ ಸೀತಾದೇವಿ ಯು ಮುಂದೆ ಭೂಪ್ರವೇಶ ಮಾಡತಕ್ಕವಳಿರುವಳು ಅಲ್ಲಿ ಶ್ರೀ ರಾಮನು ಒಂದು ಶ್ರೇಷ್ಠವಾದ ತೀರ್ಥವನ್ನು ಸ್ಥಾಪಿಸಿದನು. ಅನಂತರ ಉತ್ತರವಾಹಿನಿಯ ಕಡೆಗೆ ನಡೆದನು. ಅಲ್ಲಿ ಶ್ರೀ ರಾಮನ ಹೆಸರಿನಿಂದ ಒಂದು ನಗರಿಯೂ, ಬಿಲ್ವೇಶ್ವರ ನೆಂಬ ಒಂದು ಲಿಂಗವೂ ಪ್ರಸಿದ್ಧವಾಗಿರುವವು. ರಾವಣನಿಂದ ಸ್ಥಾಪಿಸಲ್ಪಟ್ಟ ಬೈಜನಾಥ ಲಿಂಗವನ್ನು ಪೂಜಿಸಿ, ಶ್ರೀ ರಾಮನು ದಾರಿಯಲ್ಲಿರುವ ಸೃಷ್ಟಿಯ ವಿಶೇ ಷಗಳನ್ನು ನೋಡುತ್ತ ನೂರಾರು ಗಾವುದಗಳ ವರೆಗೂ ಪ್ರಯಾಣ ಮಾಡಿದನು. ಅಲ್ಲಿ ಸಹ ಮುಖಗಳಿಂದ ಸಮುದ್ರಕ್ಕೆ ಸೇರುವ ಭಾಗೀರಥಿಯನ್ನು ನೋಡಿ, ಸರ್ವಸಾಗರತೀರದಲ್ಲಿ ನಾನಾ ದಾನ-ಧರ್ಮಗಳನ್ನೂ ಮಾಡಿದನು. ಅನಂತರ ನಾನಾ ವಿಧವಾದ ಪರ್ವತಗಳು, ನದಿಗಳು ದೇವಾಲಯಗಳು ಇವುಗನ್ನು ನೋ ಹುತ್ತ ಗೋದಾತೀರದಲ್ಲಿ ರಾಮಗಿರಿ ಎಂಬ ಪರ್ವತವನ್ನು ಪ್ರಸಿದ್ದಿಗೊಳಿಸಿ ಶ್ರೀ ರಾಮನು ಗೋದಾನದಿಯು ಸಾಗರಕ್ಕೆ ಸೇರುವ ಸ್ಥಳಕ್ಕೆ ಪ್ರಯಾಣಮಾಡಿದನು. ಆ ಸಂಗಮದಲ್ಲಿ ಸ್ನಾನಮಾಡಿ ಆತನು ಪರಿವಾರ ಸಹಿತ ದಕ್ಷಿಣ ದಿಕ್ಕಿಗೆ ಪ್ರಯಾಣ ಶಾರಿದನು. ಆಗ ಅಯಾದೇಶದ ರಾಜರು ರಾಜಾಧಿರಾಜನಾದ ಶ್ರೀ ರಾಮನಿಗೆ ಕಲ್ಲಡಕಗಳನ್ನು ಸಮರ್ಪಿಸಿ, ಆತನೊಡನೆ ತಾವೂ ತೀರ್ಥಯಾತ್ರೆಗೆ ಪ್ರಯಾಣ ರೂಾಡಿದರು ಮುಂದೆ ಶ್ರೀರಾಮನು ಮುತ್ಮತೀರ್ಥವನ್ನು ದಾಟಿ, ಕೃಷ್ಣಾ ನದಿಯಲ್ಲಿ ಸ್ನಾ ಕದಡಿ, ಮನೋಹರಗಳಾದ ಉಪವನಗಳನ್ನು ನೋಡುತ್ತಾ ನೃಸಿಂಹ ತೀರ್ಥಕ್ಕೆ ಬಂದನು, ಮತ್ತು ಕೃಷ್ಣಾ-ಸಾಗರ ಸಂಗಮಕ್ಕೆ ಬಂದು, ಅಲ್ಲಿ ಸ್ನಾನಮಾಡಿ, ನಿತ್ಯಕರ್ಮಗಳನ್ನು ಮುಗಿಸಿಕೊಂಡು, ಶ್ರೀಶೈಲಪರ್ವತಕ್ಕೆ ಪ್ರಯಾಣವೂಡಿದನು,